ಮಂಗಳೂರು ಜಿಲ್ಲೆ ಕುರಿತು ಜನರ ಅಭಿಪ್ರಾಯ ಸಂಗ್ರಹದ ನಂತರ ಘೋಷಣೆ: ಡಿ ಕೆ ಶಿವಕುಮಾರ್

1 day ago

ಕನ್ನಡ ತಾಯಿ ಭಾಷೆ, ಮಗಳ ಭಾಷೆ ತುಳು

ಜ್ಞಾನವಂತರು, ಬುದ್ಧಿವಂತರು ಇರುವ ನಾಡು: ಮುಖ್ಯಮಂತ್ರಿ

ಬೆಂಗಳೂರು: ಬಂಟರ ಸಂಘ ವತಿಯಿಂದ ತುಳುನಾಡ್ ಜವನರ್ ಬೆಂಗಳೂರು ಅಸ್ಟೆಮಿದ ಐಸಿರ 9ನೇ ವರ್ಷದ ತುಳುನಾಡು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು.

ಬೆಂಗಳೂರಿನಲ್ಲಿ ತುಳುನಾಡಿನ ಅಪ್ಪಟ ಸಂಸ್ಕೃತಿಯನ್ನು ಮರುಸೃಷ್ಟಿಸಿ, ರಾಜಧಾನಿಯಲ್ಲಿರುವ ತುಳುವರು ಹಾಗೂ ತುಳುವೇತರರಿಗೆ ಕರಾವಳಿಯ ಭಾಷೆ, ಸಂಸ್ಕೃತಿ, ಆಚರಣೆ ಮತ್ತು ಹಬ್ಬಗಳ ಪರಿಚಯ ಮಾಡಿಕೊಡಲಾಯಿತು.

ಸಿಎಂ ಡಿ.ಕೆ.ಶಿವಕುಮಾರ್, ಸಂಸದರಾದ ತೇಜಸ್ವಿಸೂರ್ಯ, ಬ್ರೀಜೇಶ್ ಚೌಟ, ಶಾಸಕ ಸುನೀಲ್ ಕುಮಾರ್, ಭರತ್ ಶೆಟ್ಟಿ, ಗುರ್ಮೆ  ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಸಮಾಜ ಸೇವಕ ಪ್ರಕಾಶ್ ಶೆಟ್ಟಿ, ಶಾಸಕ ಅಶೋಕ್ ರೈ, ಶಶಿಧರ್ ಶೆಟ್ಟಿ, ಅಂತಾರಾಷ್ಟ್ರೀಯ ಹಾಕಿ ಮಾಜಿ ಆಟಗಾರ ಆಶಿಶ್ ಬಲ್ಲಾಳ್, ಬಿಬಿಎಂಪಿ ಮಾಜಿ ಸದಸ್ಯ ಕೆ.ಉಮೇಶ್ ಶೆಟ್ಟಿ, ತುಳುನಾಡು ಜವನರ್ ಬೆಂಗಳೂರು ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಶಿಕ್ಷಣ ತಜ್ಞ  ಉಪ್ರೇಂದ್ರ ಶೆಟ್ಟಿ, ನಟ ಶಿವಧ್ವಜ್, ಬಂಟರ ಸಂಘ ಅಧ್ಯಕ್ಷ  ದೀಪಕ್ ಶೆಟ್ಟಿ, ಗೌರವಾಧ್ಯಕ್ಷ ಉತ್ತಮ್ ಶೆಟ್ಟಿ, ರವಿಕಟ್ಟಪಾಡಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ನನ್ನ ನಂಬಿಕೆ ಇರುವುದು ಇತಿಹಾಸ ನಿರ್ಮಾಣ ಮಾಡಬೇಕು ಎಂಬುದು ಉದ್ದೇಶ. ಬೆಂಗಳೂರುಗಿಂತ ಕರಾವಳಿ ಜ್ಞಾನ, ಪರಿಸರ, ಶಿಕ್ಷಣ, ಧರ್ಮ, ಧಾರ್ಮಿಕ ಎಲ್ಲದರಲ್ಲು ಶ್ರೀಮಂತವಾಗಿದೆ ಎಂದರು.

ನಾನು ಮೊದಲು ತುಳು ಭಾಷೆಗೆ ದ್ವೀತೀಯ ಸ್ಥಾನ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಕನ್ನಡ ಮಾತೃಭಾಷೆಯಾದರೆ ಅದರ ಮಗಳ ಭಾಷೆ ತುಳು  ಭಗವಂತ ಮತ್ತು ಭಕ್ತಿನಿಗೆ ಇರುವ ಸಂಭಂದ ದೇವಾಲಯ. ಕನಕದಾಸರ ಭಕ್ತಿ ಶ್ರೀ ಕೃಷ್ಣ ಒಲಿದ ಉಡುಪಿ. ದೈವ ಮತ್ತು ದೇವರು ಮತ್ತು ಕಡಲು ಇದೆ. ಟೀಕೆಗಳು ಸಾಯುತ್ತದೆ. ನಾವು ಮಾಡುವ ಕೆಲಸ ಉಳಿಯುತ್ತದೆ ಎಂದರು.

ಟೂರಿಸಂ ಪಾಲಿಸಿ ಮಾಡಲಾಗುತ್ತಿದೆ. ಕಡಲ ತೀರದಲ್ಲಿ ಬಂದರು ರೆಡಿ ಮಾಡಲಾಗುತ್ತಿದೆ. ಕೇರಳ ಮಾದರಿ ಟೂರಿಸಂ ಅಭಿವೃದ್ಧಿ ಪಡಿಸಲಾಗುವುದು. ಮಲೆನಾಡು-ಕರಾವಳಿ ಟೂರಿಸಂ ಪಾಲಿಸಿ ಸಾಲಸೌಲಭ್ಯ ಅವಧಿ ವಿಸ್ತರಣೆ ಮಾಡಲಾಗುವುದು ಎಂದರು.

ರಾಜಕಾರಣ ಮುಖ್ಯವಲ್ಲ. ಯಾರೂ ಇಲ್ಲಿ ಶಾಶ್ವತವಲ್ಲ. ಹುಟ್ಚಿದ ಸೂರ್ಯ ಮುಳಗಬೇಕು. ದೇವರು ಶಾಪ, ವರ ಎರಡು ಕೊಡುವುದಿಲ್ಲ. ಅವಕಾಶ ಸಿಕ್ಕತು ನೀವು ಕೇಳಿದಿರಿ ನಾನು ಕೆಲಸ ಮಾಡಿದೆ ಎಂದರು.

ಪ್ರತಿಯೊಬ್ಬರಿಗೂ ತಾಯಿಭಾಷೆ ಮುಖ್ಯ. ಭೂಮಿ ತಾಯಿಯಂತೆ ಭಾವಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯವರು  ಜ್ಞಾನವಂತ ಬುದ್ದಿವಂತರಾಗಿದ್ದಾರೆ. ಇದಕ್ಕೆ ನಿಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ಕಾರಣ. ಇಲ್ಲಿ ಅವಕಾಶ ಇದ್ದರೆ ಕರಾವಳಿ ಜನ ಬಾಂಬೆ, ದುಬೈಗೆ ಹೋಗುತ್ತಿರಲಿಲ್ಲ ಎಂದರು.

ಮಂಗಳೂರು ಜಿಲ್ಲೆ ಮಾಡುವ ಕುರಿತು ಜನರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಎಲ್ಲರು ಇದರಲ್ಲಿ ಭಾಗವಹಿಸಬಹುದು. ನಿಮ್ಮ ಅಭಿಪ್ರಾಯ ಸಂಗ್ರಹದ ನಂತರ ಜಿಲ್ಲೆ ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

Leave a Reply