ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಯವರನ್ನು ಒತ್ತಾಯಿಸಿ

4 years ago

ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಯವರನ್ನು ಒತ್ತಾಯಿಸಿ
ಬೆಂಗಳೂರು: ತುಳುನಾಡಿನ ಮೇಲೆ ವಿಶೇಷ ಪ್ರೀತಿ ಇಟ್ಟಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇದೇ ಸಪ್ಟಂಬರ ಎರಡರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸುವ ವಿಚಾರ ಏನಾಯಿತೆಂದು ೫೦ ಲಕ್ಷಕ್ಕೂ ಹೆಚ್ಚಿರುವ ತುಳುವರಿಗೆ ತಿಳಿಸಬೇಕು ಎಂದು ಜೆ.ಎನ್.ಯೂ. ನಿವೃತ್ತ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದ್ದಾರೆ.

ಇದೇ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತುಳುನಾಡು ಎಂದೇ ಪ್ರಸಿದ್ಧವಾದ ಮಂಗಳೂರಿಗೆ ಭೇಟಿ ನೀಡಲಿದ್ದರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಪುರುಷೋತ್ತಮ ಬಿಳಿಮಲೆ ಅವರು, ಕೆಲವು ವರ್ಷಗಳ ಹಿಂದೆ,  ಈಗ ರಾಜ್ಯಸಭಾ‌ ಸದಸ್ಯರಾಗಿರುವ ಶ್ರೀ ವೀರೇಂದ್ರ ಹೆಗ್ಗಡೆಯವರ ಮೂಲಕ ಪ್ರಧಾನಿಯವರಿಗೆ ನಾನೇ ವಿವರವಾಗಿ ಸಿದ್ಧಪಡಿಸಿದ  ಮನವಿ ಸಲ್ಲಿಸಲಾಗಿದೆ ಎಂದಿದ್ದಾರೆ.

ತುಳು ಗೊತ್ತಿರುವ ಲೋಕಸಭಾ ಸದಸ್ಯರು ( ನಳಿನ್ ಕುಮಾರ್ ಕಟೀಲ್, ಡಿವಿಎಸ್, ಶೋಭಾ ಕರಂದ್ಲಾಜೆ) ಈ ಕುರಿತು ಮಾನ್ಯ ಪ್ರಧಾನಿಗಳ ಬಳಿ ಮಾತಾಡಬೇಕು. ತುಳು ಅಕಾಡೆಮಿ ಅಧ್ಯಕ್ಷರು ಮನವಿ ಸಲ್ಲಿಸಬೇಕು. ಸಾರ್ವಜನಿಕರು ಪ್ರಧಾನಿಗಳ ಗಮನ ಸೆಳೆಯಬೇಕು. ಇದೇನೂ ಆಗದಿದ್ದರೆ, ಪ್ರಧಾನಿಗಳು ಬಂದು ಹೋದಮೇಲೆ ‘ ತುಳು ಎಂಟನೇ ಪರಿಚ್ಚೇದಕ್ಕೆ ಸೇರಬೇಕು’ ಎಂದು ಭಾಷಣ ಮಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

Leave a Reply