ಇತ್ತೀಚಿಗೆ ಥಗ್ ಲೈಫ್ ಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ರಾಜಕೀಯ ಬೆಳೆ ಬೆಯಿಸಿಕೊಳ್ಳುವ ದುರುದ್ದೇಶದಿಂದ ಬೇಕಂತಲೇ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅಲ್ಲದೇ ಪ್ರೀತಿ ಇರುವ ಕಡೆ ಕ್ಷಮೆ ಕೇಳಲ್ಲ ಎಂಬ ಉದ್ಧಾಟತನ ಮೇರೆದಿದ್ದಾರೆ. ಇದನ್ನು ನಾನು ಒಬ್ಬ ಮಾತೃ ಭಾಷಾ ಕನ್ನಡದವನಲ್ಲವಾಗಿದ್ದರು ಹುಟ್ಟಿನಿಂದ ಕನ್ನಡ ಪರ ಹೋರಾಟ ಹಾಗೂ ಕನ್ನಡ ಸೇನೆ ಮೂಲಕ, ಕನ್ನಡ ಸಂಘಗಳ ಮೂಲಕ, ಕನ್ನಡದ ಪಾರಿಚಾರಿಕೆ ಮಾಡುತ್ತಿರುವವನು. ನನಗೆ ಇವರ ಮಾತು ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಸಂಸ್ಕೃತಿಹೀನ ನಡೆ. ಅದಕ್ಕಾಗಿ ಕಮಲ್ ಹಾಸನ್ ಅವರ ಗಮನಕ್ಕೆ ಈ ಕೆಳಕಂಡ ಕನ್ನಡ ಪರ ಪ್ರಾಚೀನತೆ ಹಾಗೂ ಮಹತ್ವ ತಿಳಿದುಕೊಳ್ಳಲಿ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳಿಗೂ ಹಿಂದಿನ ಇತಿಹಾಸವಿದೆ. ಸ್ವತಂತ್ರ ಲಿಪಿ ಹಾಗೂ ಅಂಕಿಗಳನ್ನು ಹೊಂದಿದೆ. ಇದು ಕ್ರಿ.ಪೂ. 3ನೇ ಶತಮಾನದಲ್ಲೇ ಬಳಕೆಗೆ ಬಂದಿದೆ – ಒಟ್ಟಾರೆ ಪರಿಪೂರ್ಣ ಭಾಷೆಯಾಗಿದೆ. ತಮಿಳಿಗೆ ಲಿಪಿ ಕೊಟ್ಟ ಜಗತ್ತಿನ ಅತ್ಯಂತ ಪುರಾತನ ಭಾಷೆ ಕನ್ನಡ ಭಾಷೆ – ಇದಕ್ಕೆ ನಮ್ಮ ವಿದ್ವಾಂಸರ ದಾಖಲೆ ಇದೆ.
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಲ್ಲ ಎಂದು ವಿದ್ವಾಂಸ ವಿ.ಐ ಸುಬ್ರಮಣಿಯನ್ ಸೇರಿ ತಮಿಳಿನ ಆನೇಕ ಭಾಷಾ ಪಂಡಿತರೆ ಹೇಳಿದ್ದಾರೆ. 130ಕ್ಕೂ ಹೆಚ್ಚು ದ್ರಾವಿಡ ಭಾಷಾ ಕುಟುಂಬದಲ್ಲಿ ಪ್ರಾಗ್ದ್ರಾವಿಡ ಭಾಷೆಯೇ ಇವುಗಳಿಗೆ ಮೂಲ ತಾಯಿ. ನಂತರ ಈ ಭಾಷೆಗಳು ಪ್ರತ್ಯೇಕವಾಗಿವೆ. ಹೀಗಾಗಿ ಕನ್ನಡ ತಮಿಳು ಸೇರಿದಂತೆ ಎಲ್ಲಾ ದ್ರಾವಿಡ ಭಾಷೆಗಳು ಮೂಲ ದ್ರಾವಿಡದಿಂದಲೆ ಬಂದಿರುವುದನ್ನು ಭಾಷಾ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಮೂಲ ದ್ರಾವಿಡದಿಂದ ಮೊದಲಿಗೆ ಬೇರೆಯಾದ ಭಾಷೆಗಳಲ್ಲಿ ತಮಿಳು, ಕುಯಿ ಆಗಿವೆ. ನಂತರ ತುಳು, ಬಂಜಾರ, ಕೊಂಕಣಿ, ಕನ್ನಡ, ತೆಲಗು, ಮಲೆಯಾಳಂ ಮುಂತಾದ ಬೇರೆ ಬೇರೆ ಭಾಷೆಗಳು ಬೆಳೆದು ಬಂದಿವೆ. ಇವುಗಳೆಲ್ಲದರ ಸಹೋದರ ಭಾಷಾ ಸಂಬಂಧ ಇದೆ.
ಕೆಲವರು ಕನ್ನಡ ಭಾಷೆಗೆ ಸಂಸ್ಕೃತ ಮೂಲ ಎನ್ನುವುದು ಸಹ ಸುಳ್ಳು. ಕ್ರಿ.ಪೂ. 2ನೇ ಶತಮಾನದ ಗ್ರೀಕ್ ನಾಟಕ (ಪ್ರಹಸನ)ದಲ್ಲಿ ಕನ್ನಡದ ಪದಗಳು ಬಳಕೆಯಾಗಿರುವುದನ್ನು ರಾಷ್ಟ್ರಕವಿ ಗೋವಿಂದ ಪೈ ಅವರು ದೃಢಪಡಿಸಿದ್ದಾರೆ.
ಕೆಲವು ವಿದ್ವಾಂಸರು ಹೇಳುವಂತೆ ಕನ್ನಡ ಭಾಷೆ ಹುಟ್ಟಿದ್ದು.
ದ್ರಾವಿಡ (ಮೂಲ ದ್ರಾವಿಡ) ದಿಂದ ಈಗಿರುವ ಎಲ್ಲಾ ದ್ರಾವಿಡ ನುಡಿಗಳು ಇದರಿಂದಲ್ಲೇ ಹುಟ್ಟಿವೆ ಇವು ಕಾಲಾಂತರದಲ್ಲಿ ನಾಲ್ಕು ಕವಲಾಗಿವೆ. ಅವುಗಳೆಂದರೆ
ದಕ್ಷಿಣ/ ತೆಂಕಣ ದ್ರಾವಿಡ ನುಡಿ
ಉತ್ತರ/ ಬಡಗಣ ದ್ರಾವಿಡ ನುಡಿ
ಮದ್ಯ/ನುಡುವಣ ದ್ರಾವಿಡ ನುಡಿ
ಮದ್ಯ-ದಕ್ಷಿಣ/ ನಡುತೆಂಕಣ ದ್ರಾವಿಡ ನುಡಿ
ಕನ್ನಡ ತಮಿಳು, ತುಳು, ದಕ್ಷಿಣ(ತೆಂಕಣ) ದ್ರಾವಿಡ ನುಡಿ ಗುಂಪಿಗೆ ಸೇರಿ ಕ್ರಿ.ಪೂ. 1500ರಲ್ಲಿ ತುಳು ಹೊರಗೆ ಬಂದಿದೆ.
“ದಕ್ಷಿಣ ದ್ರಾವಿಡ ನುಡಿ” ಗುಂಪಿನಿಂದ ಕನ್ನಡ ಮತ್ತು ತಮಿಳು ನುಡಿಗಳು ಹುಟ್ಟಿಕೊಂಡಿವೆ. ಇದನ್ನು ಹಿಂದೆ ಫೋಟೋ-ತಮಿಳ್= ಕನ್ನಡ ಅಥವಾ ಕಂದಮಿಳು ಇದನ್ನೇ ಕಮಲ್ ಅಪಾರ್ಥ ಮಾಡಿಕೊಂಡಿರುವುದು.
ಹೆಸರಾಂತ ಭಾಷಾ ವಿಜ್ಞಾನಿ ಡಾ. ಭದ್ರಿರಾಜು ಕೃಷ್ಣಮೂರ್ತಿ (2000) ಹೇಳಿರುವಂತೆ, “ಮೂಲ ದ್ರಾವಿಡದಿಂದ ಒಂದುಕಡೆ ತುಳು-ಕೊರಗ ಹಾಗೂ ಇನ್ನೊಂದೆಡೆ ಕನ್ನಡ, ಪ್ರತ್ಯೇಕವಾದ ಘಟನೆಯು ಕ್ರಿ.ಪೂ. 5ನೇ ಶತಮಾನದಷ್ಟು ಹಿಂದೆಯೇ ನಡೆದಿರಬೇಕು ಎಂಬುದು”.
“ತಮಿಳು ಭಾಷಾ ತಜ್ಞ ಇರಾವತಂ ಮಹಾದೇವನ್ ಹೇಳುವಂತೆ, ಕನ್ನಡ ಭಾಷೆಯು. ಕ್ರಿ.ಪೂ. 3-4ನೇ ಶ. ಹೊತ್ತಿಗೆ ಒಂದು ಶ್ರೀಮಂತ ಭಾಷೆಯಾಗಿ ಆಡುಮಾತಿನ ರೂಪದಲ್ಲಿತ್ತು ಮಹತ್ವದ ಸಂಗತಿ”.
ಹಾಗೆ ಆರ್.ಸಿ. ಹಿರೇಮಾಠ ಅವರ ಪ್ರಕಾರ, “ಕನ್ನಡ, ತಮಿಳು ಮತ್ತು ತುಳು ಮೂರು ಸ್ವತಂತ್ರವಾದ ಕಾಲಮಾನ ಕ್ರಿ.ಪೂ. 300 ಎನ್ನುವುದು ಕನ್ನಡದ ಸ್ವತಂತ್ರ ಭಾಷೆ ಎಂಬುದಕ್ಕೆ ಪುಷ್ಠಿ ನೀಡಿದೆ.
ಉತ್ತರ ದ್ರಾವಿಡ ನುಡಿಯಿಂದ ಬ್ರಾಹುಯಿ, ಮಾಲ್ತೋ, ಕುರುಖ್ ಎಂಬ ನುಡಿಗಳು: ನಡುತೆಂಕಣ ದ್ರಾವಿಡ ನುಡಿಯಿಂದ ತೆಲಗು, ಗೊಂಡಿ ಇತರೆ. ನಡು ದ್ರಾವಿಡ ನುಡಿಯಿಂದ ಬಂಜಾರ ಇತರೆ ಬುಡಕಟ್ಟು ನುಡಿಗಳು ಹುಟ್ಟಿವೆ.
ಕನ್ನಡದ ಪರಿಪೂರ್ಣತೆಗೆ ಕ್ರಿ.ಶ. 450ರ ಹಲ್ಮಿಡಿ ಶಾಸನದಲ್ಲಿ ಪುರಾವೆ ಇದೆ. ಈ ಅವಧಿಗೆ ಕನ್ನಡ ಭಾಷೆ ಬೆಳೆದಿತ್ತು. ತಮಿಳಿಗಿಂತ ಮೊದಲು ಕನ್ನಡ ಲಿಪಿಯೆ ಮೊದಲಿಗೆ ಹೆಚ್ಚು ಚಾಲ್ತಿಯಲ್ಲಿತ್ತು ಎಂಬುದಕ್ಕೆ ಅಧಾರ ಶಾಸನಗಳಲ್ಲಿ ಇವೆ. ಪ್ರಾಕೃತ ಶಾಸನಗಳಲ್ಲಿ ಸಂಕಪ, ನಗಿಪ ಎಂಬ ವ್ಯಕ್ತಿ ನಾಮಗಳು. ʻಅಪ್ಪʼ ಎಂಬ ಕನ್ನಡದ ಮೂಲ ರೂಪವಾಗಿವೆ. ಹೀಗೆ ಶಾಸನಗಳಲ್ಲಿ ಮುನ್+ವಳಿ=ಮುನಾಳ್ಳಿ ʻಮೂಡಾಣʼ ಪದ ಕನ್ನಡದ ʻಮೂಡಣʼ ಎಂದು ತಿಳಿದಿದೆ. ಕ್ರಿ.ಶ. 250ರ ಹಿರೇ ಹಡಗಲಿ- ಪಲ್ಲವ ಶಿವಸ್ಕಂದ ವರ್ಮನ ಪ್ರಾಕೃತ ಶಾಸನದಲ್ಲಿನ ʻಕೊಟ್ಟʼ ಪದವು ʻಕೋಟೆʼ ಎಂಬ ಅರ್ಥ ಸೂಚಿಸಿದೆ.
ಸಂಸ್ಕೃತದ ಛಾಂದೋಗ್ಯ ಉಪನಿಷತ್ತಿನಲ್ಲಿ ಕಾಣುವ ʻಮಿಟಚಿʼ (ಮಿಡತೆ) ಹಾಗೂ ಚೆನ್(ಚಂದ್ರ) ಪದಗಳು ಕನ್ನಡದ್ದೆ ಆಗಿವೆ. ಇದನ್ನು ಗೋವಿಂದ ಪೈ ಸಂಶೋಧಿಸಿದ್ದಾರೆ.
ಪುರಾಣಗಳಲ್ಲಿ ಕನ್ನಡ ಪದಗಳ ಬಳಕೆ: ಪದ್ಮಪುರಾಣ ಹಾಗೂ ಮಾರ್ಕಂಡೇಯ ಪುರಾಣದಲ್ಲಿ ʻಕರ್ನಾಟʼ ಪದ ಇದೆ. ಸಂಸ್ಕೃತದ ಮಹಾ ಕಾವ್ಯಗಳಾದ ರಾಮಾಯಣ- ಮಹಾಭಾರತದಲ್ಲಿ ʻಕರ್ನಾಟʼ ದ ಪ್ರಸ್ತಾಪ ಬಹುಸಾರಿ ಆಗಿದೆ. ಹಾಲರಾಜನು ಕ್ರಿ.ಶ. 150ರಲ್ಲಿ ಪ್ರಾಕೃತದಲ್ಲಿ ಬರೆದ ಗಾಥಸಪ್ತ ಶತಿ ಕಾವ್ಯದಲ್ಲಿನ ತೀರ್, ತುಪ್ಪ, ಪೆಟ್ಟು, ಪೊಚ್ಚು ಕನ್ನಡ ಪದಗಳಾಗಿವೆ.
ಸಂಶೋಧಕ ಗೋವಿಂದ ಪೈ ಗುರುತಿಸಿರುವಂತೆ:
1 ನೇ ಶತಮಾನದ ಗ್ರೀಕ್ ಪ್ರಹಸನದಲ್ಲಿ ಬರುವ ʻದೀನ ಮತ್ತು ದಮ್ಮಾರʼ ಎಂಬ ಕನ್ನಡ ಪದಗಳ ಬಳಕೆ ಕನ್ನಡದ ಹಳಮೆಗೆ ಸಾಕ್ಷಿ.
2ನೇ ಶತಮಾನದ ಲಲಿತ ವಿಸ್ತಾರ(ಬೌದ್ಧ ಗ್ರಂಥ) ಕೃತಿಯಲ್ಲಿ ಭಾರತೀಯ ಲಿಪಿ ಮತ್ತು ʻಕನಾರಿʼ ಲಿಪಿಯನ್ನು ಹೆಸರಿಸಲಾಗಿದೆ ಇದು ಸಹ ಕನ್ನಡವೆ ಆಗಿದೆ.
ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿದ ಬ್ರಹ್ಮಗಿರಿ ಶಾಸನದಲ್ಲಿನ ಇಸಿಲ,(ಕೋಟೆಯ ಊರು) ಕನ್ನಡದ ಮೊದಲ ಪದ ಎಂದು ಡಿ.ಎಲ್. ನರಸಿಂಹಚಾರ್ ಹೇಳಿದ್ದಾರೆ. ಹೀಗೆ ಹರಪ್ಪ ಮೆಹೆಂಜೊದಾರೋನಲ್ಲಿ ದೊರೆತ ಮುದ್ರೆಗಳು ಕನ್ನಡ ಎಂದು ಫಾದರ್ ಹೆರೋಸ್ ಹೇಳಿದ್ದಾರೆ.
ಕಮಲ ಹಾಸನ್ ಹೇಳಿಕೆಯನ್ನು ಎನ್.ಟಿ.ಕೆ ಪಕ್ಷದ ಸಮನ್ವಾಯಕರ ಎಸ್. ಸೀಮನ್ ಬೆಂಬಲಿಸಿದ್ದು ಹಾಸ್ಯಾಸ್ಪದವಾಗಿದೆ. ಹೀಗಾಗಿ ಇಂತಹ ಅಧಾರಗಳನ್ನು ಪರಿಶೀಲಿಸಿ ಕ್ಷಮೆ ಕೆಳುವುದಿಲ್ಲ ಎನ್ನುವ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೆಳಬೇಕು ಎಂದು ಆಗ್ರಹಿಸುತ್ತೇನೆ ಮತ್ತು ಇವರ ಹೇಳಿಕೆಯನ್ನು ಬೆಂಬಲಿಸಿ ಕನ್ನಡ, ತಮಿಳು, ಮಲೆಯಾಳಂ, ತೆಲಗು ಸೇರಿ ಎಲ್ಲಾ ದ್ರಾವಿಡ ಭಾಷೆಗಳು ತಮಿಳು ಎನ್ನುವ ತಮಿಳುನಾಡಿನ ರಾಜಕೀಯ ಪಕ್ಷಗಳು ವಿಶೇಷವಾಗಿ ವಿ.ಕೆ.ಸಿ ಮುಖ್ಯಸ್ಥ ಟಿ. ತಿರುಮಾವಲವನ್ ಕನ್ನಡಿಗರ ಕ್ಷಮೆಯಾಚಿಸಬೇಕು. ಡಿ.ಎಂ.ಕೆ. ಪಕ್ಷ ಕಮಲ್ ಹಾಸನ್ ಅವರನ್ನು ಪಕ್ಷದಿಂದ ದೂರ ಇಡಬೇಕು ಎಂದು ಆಗ್ರಹಿಸುತ್ತೇನೆ.
– ಡಾ.ಎ.ಆರ್. ಗೋವಿಂದಸ್ವಾಮಿ, ಕನ್ನಡ ಹೋರಾಟಗಾರರು ಹಾಗೂ ಅಧ್ಯಕ್ಷರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕರ್ನಾಟಕ ಸರ್ಕಾರ, ಬೆಂಗಳೂರು. ಮೊ.9113243344




