ವಚನಗಳ ಮೂಲಕ ಮಾನವೀಯತೆಯ ಜಾಗೃತಿ ಮೂಡಿಸಿದ ಹಡಪದ ಅಪ್ಪಣ್ಣ: ಸಾಜೀದ್ ಮುಲ್ಲಾ

9 months ago

ಕಾರವಾರ: ಬಸವಣ್ಣನ ಸಮಕಾಲೀನರೂ, ಅವರ ಆಪ್ತ ಕಾರ್ಯದರ್ಶಿಯೂ ಆಗಿದ್ದ ಹಡಪದ ಹಪ್ಪಣ್ಣನವರು ಜಾತಿ ವ್ಯವಸ್ಥೆ , ಮೌಢ್ಯ ಸಾಮಾಜಿಕ ನ್ಯೂನ್ಯತೆಯನ್ನು ಹೋಗಲಾಡಿಸಲು ವಚನಗಳ ಮೂಲಕ ಮಾನವೀಯತೆಯನ್ನು ಜಾಗೃತಿ ಮೂಡಿಸಿ ಪ್ರಜಾಪ್ರಭುತ್ವದ ಬೇರನ್ನು ಗಟ್ಟಿಗೊಳಿಸಲು ಕಾರಣಭೂತರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ಹಡಪದ ಅಪ್ಪಣ್ಣ ಜಯಂತಿಯನ್ನು ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸೆಂಟ್ ಜೊಸೇಫ್ ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕಿ ಜಯಶೀಲಾ ಹಡಪದ ಅಪ್ಪಣ್ಣ ಅವರು ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹಡಪದ ಅಪ್ಪಣ್ಣನವರು ಬಸವಣ್ಣ ಪ್ರಿಯ ಕೂಡಲಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದ್ದಾರೆ. ಇವರ ಪತ್ನಿ ಲಿಂಗಮ್ಮ ಕೂಡ ಅಪ್ಪಣ್ಣ ಪ್ರಿಯಾ ಚೆನ್ನಬಸವಣ್ಣ ಎಂಬ ಅಂಕಿತನಾಮದಲ್ಲಿ 114 ವಚನಗಳನ್ನು ರಚಿಸಿದ್ದಾರೆ ಎಂದರು.

ವಚನ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ವಿಶ್ವ ಮಾನ್ಯತೆಯನ್ನು ಪಡೆದಿದೆ. ಇಂತಹ ಸರಳವಾದ ಭಾಷೆಯಲ್ಲಿ ಮತ್ತು ಜನರನ್ನು ಸರಳವಾಗಿ ಮುಟ್ಟುವಂತಹದ್ದು ವಚನ ಸಾಹಿತ್ಯವಾಗಿದ್ದು, ಹಡಪದ ಅಪ್ಪಣ್ಣನವರು ಪ್ರಮುಖ ವಚನಕಾರರಾಗಿದ್ದು, ಹಡಪದ ಎಂದರೇ ಕ್ಷೌರಿಕ ಜನಾಂಗದವರು. ಇವರನ್ನು ಸಮಾಜದಲ್ಲಿ ಕೆಳ ಸಮುದಾಯದವರೆಂದು ಕೆಟ್ಟ ಮನೋಭಾವದಿಂದ ಕೀಳಾಗಿ ಕಾಣುತ್ತಿದ್ದರು ಎಂದರು.

ಜಾತಿ-ಭೇದ-ಭಾವವನ್ನು ಹೋಗಲಾಡಿಸಿ ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಕಾಣಲು ಬಸವಣ್ಣನವರು ಜಾತ್ಯತೀತ, ಲಿಂಗಾತೀತ, ಧರ್ಮಾತೀತ ವಚನಗಳನ್ನು ರಚಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಲು, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ ಅಂತವರನ್ನು ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುತ್ತಿದ್ದರು. ಅಪ್ಪಣ್ಣ ಅವರು ಅಪಾರ ಜ್ಞಾನ ಹೊಂದಿದ್ದು, ವಚನಗಳ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಿದವರು. ಇಂತಹ ವiಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿ, ಸಿಬ್ಬಂದಿ, ವಿವಿಧ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ್ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೆಟ್ ನಿರೂಪಿಸಿ, ವಂದಿಸಿದರು. ರಾಯಚೂರಿನ ಮಹಾಲಕ್ಷ್ಮಿ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Leave a Reply