ಬೆಂಗಳೂರು: ರಾಜಾಜಿನಗರ ಭೀಮ್ ರಾವ್ ಪ್ಯಾಲೇಸ್ ನಲ್ಲಿ ತುಳುಕೂಟ ಬೆಂಗಳೂರು ವತಿಯಿಂದ ತುಳುನಾಡಿನ ಪಾರಂಪರಿಕ – 2021 ಹೊಸ ಅಕ್ಕಿ ಊಟ ಅಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಶಾಸಕ ರಘುಪತಿಭಟ್, ಹರೀಶ್ ಪೂಂಜಾ, ಸಮಾಜ ಸೇವಕ ಪ್ರಕಾಶ್ ಶೆಟ್ಟಿ, ಬಿ.ಬಿ.ಎಂ.ಪಿ. ಮಾಜಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ರಾಜೇಂದ್ರ ಕುಮಾರ್, ತುಳುಕೂಟ ಬೆಂಗಳೂರು ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಜರಿದ್ದರು.
ತುಳುಕೂಟದ ವೆಬ್ ಸೈಟ್ ಗೆ ಚಾಲನೆ ಮತ್ತು ಕನ್ನಡ, ತುಳು ಭಾಷಿಗರು ಸಹೋದರ ಸಂಬಂಧಿ ಭಾಷೆಗಳು, ಬೆಂಗಳೂರು ನಗರ ಜಿಲ್ಲೆಯಲ್ಲಿ ತುಳುಭವನ ನಿರ್ಮಾಣಕ್ಕೆ ಸಂಕಲ್ಪ ಮತ್ತು ಜನವರಿ ತಿಂಗಳಲ್ಲಿ ತುಳುನಾಡಿನ ಸಾವಯುವ ಕೃಷಿ ಮೇಳ ಬೆಂಗಳೂರಿನಲ್ಲಿ ಆಯೋಜನೆ ವಿಚಾರಗಳು ಬಗ್ಗೆ ಕಾರ್ಯಕ್ರಮದಲ್ಲಿ ಪ್ರಸ್ತಾಪವಾಯಿತು.
ಇದೇ ಸಂದರ್ಭದಲ್ಲಿ ತುಳುಕೂಟ ಬೆಂಗಳೂರು ವತಿಯಿಂದ ಶಾಸಕ ರಘುಪತಿಭಟ್, ಹರೀಶ್ ಪೂಂಜಾ, ಕೆ.ಉಮೇಶ್ ಶೆಟ್ಟಿ, ರಾಜೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು.




