ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಪ್ರತಿಭಾ ಪುರಸ್ಕಾರ

1 year ago

ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ಶ್ರೀ ಡಿ.ವ್ಹಿ.ಹಾಲಭಾವಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ್ಗ್ಯಾಲರಿಯಲ್ಲಿ ಚಿತ್ರಕಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆ ವಿಶ್ವವಿದ್ಯಾಲಯ ದೃಶ್ಯ ಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜೈರಾಜ ಎಂ. ಚಿಕ್ಕಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜದ ತುಡಿತದೊಂದಿಗೆ ತಮ್ಮ ಸೃಜನಾತ್ಮಕ ಕಲೆಯನ್ನು ಬೆರೆಸುವ ಮೂಲಕ ಕಲಾವಿದರು ಶ್ರೇಷ್ಠ ಕಲಾಕೃತಿಗಳನ್ನು ರಚಿಸಬೇಕು. ಕಲೆಯ ಬಗ್ಗೆ ಆಸಕ್ತಿ, ನಿರಂತರ ಪರಿಶ್ರಮ, ಸಂವೇದನೆ ಇರುವವರು ಮಾತ್ರ ಕಲಾವಿದರಾಗಲು ಸಾಧ್ಯ. ವೀಕ್ಷಕರನ್ನು ಆಲೋಚನೆಗೆ ತೊಡಗಿಸುವ ಶಕ್ತಿ ಚಿತ್ರಕಲೆಗೆ ಇದೆ. ಹಿರಿಯ-ಕಿರಿಯ ಕಲಾವಿದರಲ್ಲಿರುವ ಕಲೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಡಿ.ವ್ಹಿ.ಹಾಲಭಾವಿ ಟ್ರಸ್ಟಿನ ಕಾರ್ಯ ಶ್ಲಾಘನೀಯ ಎಂದರು.

ಟ್ರಸ್ಟ್ ಸದಸ್ಯ ಸುರೇಶ ಹಾಲಭಾವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಡಿ.ವ್ಹಿ.ಹಾಲಭಾವಿಯವರ ಬದುಕಿನ ಬಗ್ಗೆ ಮಾತನಾಡಿದರು. ಕಾರ್ಯಕಮದಲ್ಲಿ ಚಿತ್ರಕಲಾವಿದ ಕುಮಾರ ಕಾಟೇನಹಳ್ಳಿ, ವಿಜಯಾನಂದ ಕಾಲವಾಡ, ಟ್ರಸ್ಟ್ ಸದಸ್ಯರಾದ ಡಾ. ಪಾರ್ವತಿ ಹಾಲಭಾವಿ, ಬಿ ಮಾರುತಿ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ ಎಚ್.ಕುರಿಯವರ, ಜೆ.ಎಸ್.ಎಸ್. ಹಾಲಭಾವಿ ಸ್ಕೂಲ್ ಆಫ್ ಆರ್ಟ್ದ ಪ್ರಾಚಾರ್ಯ ಡಾ. ಬಿ.ಎಂ.ಪಾಟೀಲ ಹಾಗೂ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿಯವರು ಹಾಜರಿದ್ದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪೋಷಕರು ಹಾಗೂ ಕಲಾಸ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಂದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ ಗ್ಯಾಲರಿಯಲ್ಲಿ  ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ರ ಕಲಾಸ್ತಕರು, ಸಾರ್ವಜನಿಕರು  ಪಾಲ್ಗೊಂಡಿದ್ದರು.

Leave a Reply