ರಂಗಬಳಪದಿಂದ ಸಂಶೋಧನೆ, ಕಾವ್ಯ, ಕಥಾ, ರಂಗಕಮ್ಮಟ ಏರ್ಪಡಿಸುವ ಯೋಜನೆ: ಡಾ. ರಾಜೇಂದ್ರ ಕುಮಾರ್ ಮುದ್ನಾಳ್
ಕಲಾವಿದ ಕೃಷ್ಣ ರಾಯಚೂರು ರಚಿಸಿದ ರಂಗ ಬಳಪ ಲಾಂಛನ ಲೋಕಾರ್ಪಣೆ
ಯಾದಗಿರಿ: ಯಾದಗಿರಿಯ ರಂಗಬಳಪ ಸಾಂಸ್ಕೃತಿಕ ವೇದಿಕೆಯ ಲಾಂಛನವನ್ನು ಮಹೇಶ್ ರೆಡ್ಡಿ ಮುದ್ನಾಳ ಅವರು ಚಾಮಾ ಕಲ್ಯಾಣ ಮಂಟಪದಲ್ಲಿ ಅನಾವರಣಗೊಳಿಸಿದರು.
- ಕೋಟ್ಯಂತರ ರೂ. ಅಕ್ರಮದ ಸಮಗ್ರ ತನಿಖೆಗೆ ಅಪ್ಸರ್ ಕೊಡ್ಲಿಪೇಟೆ ಆಗ್ರಹ
- ಜಿಡಿಪಿ ದರ ನಾಗಾಲೋಟದಲ್ಲಿ ಸಾಗಿದೆ, ಚಪ್ಪಾಳೆ ಹೊಡೆದು ಸಂಭ್ರಮಿಸೋಣ!
- ಪೌರ ಕಾರ್ಮಿಕರು ಕರ್ತವ್ಯಕ್ಕೆ ಸಮರ್ಪಕವಾಗಿ ಹಾಜರಾಗದಿದ್ದರೆ ಕೆಲಸದಿಂದ ವಜಾ: ಕೃಷ್ಣ ಬೈರೇಗೌಡ
- ಉಚಿತ ಶೂ-ಸಾಕ್ಸ್ ಯೋಜನೆಯಲ್ಲೂ ಶೇ. 40 ಕಮಿಷನ್: ಆರ್ ಅಶೋಕ್
- NRI ಮತದಾರರ ಪರ ಕುಟುಂಬ ಸದಸ್ಯರಿಗೆ SIR ವಿಚಾರಣೆಯಲ್ಲಿ ಹಾಜರಾಗಲು ಅವಕಾಶ ನೀಡಿ
ಇದೇ ವೇಳೆ ಮಾತನಾಡಿದ ಅವರು, ಸದಾಕಾಲ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವವರಿಗೆ ನನ್ನ ಬೆಂಬಲ ಸದಾ ಇರುವುದು ಎಂದರು. ರಾಚಣ್ಣ ಗೌಡ ಮುದ್ನಾಳ ಅವರು ಆಯೋಜಕರನ್ನು ಪ್ರೋತ್ಸಾಹಿಸಿದರು.
ರಂಗ ಬಳಪ ಸಾಂಸ್ಕೃತಿಕ ಸಂಘಟನೆ ಜಿಲ್ಲೆಯಾದ್ಯಂತ ಕಥೆ, ಕಾದಂಬರಿ, ನಾಟಕ, ಚಿತ್ರಕಲೆಗಳ ಕುರಿತ ಸಂಶೋಧನೆ, ಕಾವ್ಯ, ಕಥಾ, ರಂಗಕಮ್ಮಟಗಳನ್ನು ಏರ್ಪಡಿಸುವ ಯೋಜನೆ ಒಳಗೊಂಡಿದೆ ಎಂದು ಎಂದು ರಂಗ ಬಳಪದ ನಿರ್ದೇಶಕರಾದ ಡಾ. ರಾಜೇಂದ್ರ ಕುಮಾರ್ ಮುದ್ನಾಳ್ ಹೇಳಿದರು.

ಮುಖ್ಯವಾಗಿ ಜಿಲ್ಲಾ ಕಲಾವಿದರನ್ನು, ಸಾಂಸ್ಕೃತಿಕವಾಗಿ ಗುರುತಿಸುವ ಉದ್ದೇಶವಿದೆ. ಹೆಚ್ಚಾಗಿ ಶಿಕ್ಷಕ ಮಿತ್ರರನ್ನು ಒಳಗೊಂಡಿರತಕ್ಕಂತಹ ವೇದಿಕೆ ಇದಾಗಿದೆ ಎಂದರು.
ಮಕ್ಕಳಲ್ಲಿರುವ ಸೃಜನ ಶೀಲತೆಯನ್ನು ಪ್ರಯೋಗಕ್ಕೊಳಪಡಿಸುವುದು ವೇದಿಕೆ ಮೂಲ ಉದ್ದೇಶ ಎಂದು ವಿವರಿಸಿದರು.
ಜಿಲ್ಲಾ ಕುಂಬಾರ ಸಂಘ ಅಧ್ಯಕ್ಷ ದೇವಿಂದ್ರಪ್ಪ ದರ್ಶನಾಪುರ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಈರಪ್ಪ ಕನ್ನಳ್ಳಿ ಸಾಗರ ಚಾಮಾ, ಭೀಮರಾಯ ಮುಂಡರಗಿ, ಬಂಗಾರಪ್ಪ, ಸಿದ್ದಲಿಂಗ ರೆಡ್ಡಿ ರಟ್ನಡಗಿ ಶಿಕ್ಷಕರು, ಸಾಹಿತ್ಯ ಆಸಕ್ತರು, ಸಂಪನ್ಮೂಲ ವ್ಯಕ್ತಿಗಳು ಸಹ ಹೃದಯರಿದ್ದರು. ಶಿಕ್ಷಕ ಶರಣಪ್ಪ ನಿರೂಪಿಸಿದರು.




