ರಂಗಬಳಪ ಸಾಂಸ್ಕೃತಿಕ ವೇದಿಕೆ ಯಾದಗಿರಿ, ತಮ್ಮಲ್ಲಿ ವಿನಂತಿಸಿಕೊಳ್ಳುವದೇನೆಂದರೆ ಯಾದಗಿರಿ ಪಟ್ಟಣದಲ್ಲಿ ರಂಗ ಚಟುವಟಿಕೆಗಳು ನಡೆಯಲು ರಂಗ ಮಂದಿರದ ಅವಶ್ಯಕತೆ ಇದೆ. ಹಾಗಾಗಿ ರಂಗ ನಾಟಕ ತಂಡಗಳು ಜಿಲ್ಲೆಗೆ ಆಗಮಿಸುವಲ್ಲಿ ರಂಗಬಳಪ ತಂಡ ಕಾರ್ಯನಿರತವಾಗಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸೂಕ್ತ ರಂಗಮಂದಿರ ಇಲ್ಲದಿರುವುದರಿಂದ ನಾಟಕ ತಂಡಗಳು ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿಲ್ಲ. ಹಾಗಾಗಿ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರವನ್ನು ಕೂಡಲೇ ಉದ್ಘಾಟಿಸಿ, ಲೋಕಾರ್ಪಣೆಗೊಳಿಸಬೇಕೆಂದು ತಮ್ಮಲ್ಲಿ ಮನವಿ.
ರಂಗ ಬಳಪ ವೇದಿಕೆ ಬಹಳಷ್ಟು ಕಾರ್ಯಕ್ರಮಗಳು ರಂಗಮಂದಿರದಲ್ಲಿಯೇ ನಡೆಸಬೇಕಾಗಿದೆ. ಜಿಲ್ಲೆಯಲ್ಲಿ ರಂಗಕಮ್ಮಟ ಕಾವ್ಯ ಶಿಬಿರ ಇತ್ಯಾದಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ರಂಗಬಳಪ ನಿರ್ವಹಿಸುತ್ತಿದೆ.
ನಾಡಿನ ಪ್ರಖ್ಯಾತ ರಂಗ ನಾಟಕ ತಂಡಗಳು ಯಾದಗಿರಿ ಜನತೆಗೆ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಲು ರಂಗಮಂದಿರ ಸಾರ್ವಜನಿಕಗೊಳಿಸಬೇಕೆಂದು ತಮ್ಮಲ್ಲಿ ಈ ಮೂಲಕ ಒತ್ತಾಯಿಸುತ್ತಿದ್ದೇವೆ.
– ಡಾ.ರಾಜೇಂದ್ರಕುಮಾರ್ ಕೆ. ಮುದ್ನಾಳ್, ನಿರ್ದೇಶಕರು, ರಂಗಬಳಪ, ಸಾಂಸ್ಕೃತಿಕ ವೇದಿಕೆ ಯಾದಗಿರಿ, ಮೊ. 9902836498, email:kruparaj38@gmail.com




