ಪೆರಿಯಾರ್ ಹೆಸರು ಕೇಳಿದ ಕೂಡಲೆ ಮಂದಿಗೆ ಒಬ್ಬ ಜಿಡ್ಡು ಗಟ್ಟಿದ ನಾಸ್ತಿಕ ಎಂಬ ಚಿಂತನೆ ಹುಟ್ಟುತ್ತದೆ. ಆದರೆ ಅವರು ದೇವರನ್ನು ನಂಬದ ಮಾತು, ವಿಶೇಷವಾಗಿ ಬಗೆಬಗೆಯ ರೂಪಗಳಲ್ಲಿ ಅಸಂಖ್ಯಾತವಾಗಿರುವ ಹಿಂದೂ ದೇವರುಗಳನ್ನು ಅಸಹ್ಯಪಟ್ಟುಕೊಂಡ ಮಾತು ನಿಜವೇ ಆದರೂ ಪೆರಿಯಾರ್ ಗುರಿ ನಾಸ್ತಿಕತೆಯ ಪ್ರಚಾರ ಅಲ್ಲವೇ ಅಲ್ಲ. ಈ ದೇಶದ ಜನರಲ್ಲಿ ಆತ್ಮಗೌರವವನ್ನು ಬೆಳೆಸುವುದಾಗಿತ್ತು.
ಪೆರಿಯಾರ್ ನೋಟದಲ್ಲಿ ಇಸ್ಲಾಂ
ಸಂ: ಜಿ. ಆಲೋಶಿಯಸ್
ಕನ್ನಡಕ್ಕೆ: ಬಿ. ಸುಜ್ಞಾನಮೂರ್ತಿ
ರೂ 80/-
ಚೆ ಗೆವಾರನ ಕ್ರಾಂತಿಯ ಆಲೋಚನೆಗಳು ಕ್ಯೂಬಾವನ್ನು ಕ್ರಾಂತಿಯ ಹಂತಕ್ಕೆ ತಲುಪುವಂತೆ ಮಾಡಿದವು. ಲ್ಯಾಟಿನ್ ಅಮೆರಿಕದಲ್ಲಿಯೂ ಕ್ರಾಂತಿ ವಾತಾವರಣ ಸೃಷ್ಟಿಸುವಂತೆ ಮಾಡಿದವು. ಚೆ ಕ್ರಾಂತಿಯ ಆಲೋಚನೆಗಳ ಜತೆಗೆ ಎಂದೆಂದಿಗೂ ಬದುಕಿಯೇ ಇರುತ್ತಾನೆ.
ಕ್ಯೂಬಾ ಕ್ರಾಂತಿ
ಚೆ ಗೆವಾರ
ಕನ್ನಡಕ್ಕೆ: ಬಿ. ಸುಜ್ಞಾನಮೂರ್ತಿ
ರೂ : 90/-
ಮನಸ್ಸಿನಲ್ಲಿ ಕಾಮವಾಂಛೆಗಳೊಂದಿಗೆ ಹಣ್ಣುಗಾಯಿ ನೀರುಗಾಯಿಯಾಗುವ ವ್ಯಕ್ತಿ ಆ ಬಯಕೆಗಳ ಉದಾತ್ತೀಕರಣದ ಮೂಲಕ ಪರಮಭಕ್ತನಾಗಿ ಪೂಜೆ ಪುನಸ್ಕಾರಗಳಲ್ಲಿ ಸದಾ ಮುಳುಗಿ ತೇಲಬಹುದು. ತನ್ನನ್ನು ತಾನು ಅಲ್ಪನಾಗಿ ಕೈಯಲ್ಲಾಗದದವನಂತೆ ಭಾವಿಸುವ ಇತರರ ಮೇಲೆ ಅಧಿಕಾರ ಚಲಾಯಿಸಬಹುದು. ನಮ್ಮ ಮಾನಸಿಕ ಸ್ವರೂಪವನ್ನು ಫಾಯ್ಡ್ ಒಂದು ಮಂಜಿನಗಡ್ಡೆಯಂತೆ ಎಂದು ಬಣ್ಣಿಸಿದ್ದಾನೆ.
ಭ್ರಮೆಯ ಭವಿಷ್ಯ: ಧರ್ಮದ ಬಗ್ಗೆ ಮನೋವಿಶ್ಲೇಷಣೆ
ಸಿಗ್ಮಂಡ್ ಫ್ರಾಯ್ಡ್
ಕನ್ನಡಕ್ಕೆ: ಬಿ. ಸುಜ್ಞಾನಮೂರ್ತಿ
ರೂ : 110/-
ಪ್ರತಿಯೊಂದು ದುರಾಚಾರಕ್ಕೆ, ಬಗೆಬಗೆಯ ದುರವಸ್ಥೆಗಳಿಗೆ ಭಾರತದಲ್ಲಿ ಮಹಿಳೆಯರನ್ನೇ ಯಾವಾಗಲೂ ಕಾರಣೀಭೂತರನ್ನಾಗಿ ಮಾಡುವುದನ್ನು ನೋಡಿದ ತಾರಾಬಾಯಿ ಕೆರಳಿದಳು. ಪುರುಷ ಅಹಂಕಾರಕ್ಕೆ ಸವಾಲು ಪುರುಷರೊಂದಿಗೆ ಮಹಿಳೆಯರ ಸಂಬಂಧಗಳ ಬಗ್ಗೆ ಚರ್ಚಿಸಿದ ಆಧುನಿಕ ಭಾರತದ ಮೊಟ್ಟಮೊದಲ ಸ್ತ್ರೀವಾದಿ ಚಿಂತನೆಯ ಪುಸ್ತಕ ಇದು
ತಾರಾಬಾಯಿ ಶಿಂಧೆ
ಕನ್ನಡಕ್ಕೆ: ಬಿ. ಸುಜ್ಞಾನಮೂರ್ತಿ
ರೂ 100/-
‘ರಾಮಾಯಣ ದಿಟ ಓದು’ ಆರ್ಯರ ಹುಸಿಶ್ರೇಷ್ಠತೆಯನ್ನು ಸಾರುವ ರಾಮಾಯಣವನ್ನು ಉಗ್ರ ವಿಮರ್ಶೆಗೆ ಒಡ್ಡಿದ ಕೃತಿ. ದ್ರಾವಿಡ ಸಂಸ್ಕೃತಿಯ ನೇತಾರ ಪೆರಿಯಾರ್ ನಿರಂತರ ನಲವತ್ತು ವರ್ಷಗಳ ಕಾಲ ರಾಮಾಯಣದ ಆಳ ಅಗಲಗಳನ್ನು ಅಧ್ಯಯನ ಮಾಡಿದ ಪರಿಣಾಮದಿಂದ ರಚಿಸಿದ ವೈಚಾರಿಕ ಕೃತಿ. ರಾಮಾಯಣದ ಅಸಂಬದ್ಧ ಮತ್ತು ಅವೈಜ್ಞಾನಿಕ ಸಂಗತಿಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.
ರಾಮಾಯಣ ದಿಟ ಓದು
ಪೆರಿಯಾರ್
ಅನು: ಬಿ. ಸುಜ್ಞಾನಮೂರ್ತಿ
ರೂ 110/-
ದಲಿತ ಇತಿಹಾಸ ಮತ್ತು ಬೌದ್ಧ ಧಮ್ಮದ ಇತಿಹಾಸ ಎರಡು ಭಿನ್ನ ನೆಲೆಗಳು ಅಲ್ಲ. ಬೌದ್ಧ ಧರ್ಮವೇ ದಲಿತರ ಮೂಲ. ಬೌದ್ಧ ಧರ್ಮದ ಅವನತಿಯೇ ದಲಿತರ ಹೀನಸ್ಥಿತಿಗೆ ಕಾರಣವಾಗಿದೆ. ಅದ್ದರಿಂದಲೇ ಅಯೋತಿದಾಸ್ ರು ದಲಿತರು ಮತ್ತು ಬೌದ್ಧ ಧರ್ಮದ ಪುನರುತ್ಥಾನವನ್ನು ಒಂದೇ ಆಗಿ ನೋಡಿದರು. ಅವರು ಬೌದ್ಧ ಧಮ್ಮ ಸ್ವೀಕರಿಸಿದ 58 ವರ್ಷಗಳ ನಂತರ ಬಾಬಾಸಾಹೇಬ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಆದರು.
ಬೌದ್ಧ ದಲಿತ ಹೋರಾಟಗಾರ ಅಯೋತಿದಾಸ್
ಜಿ. ಎಲೋಶಿಯಸ್/ ವಿ.ಗೀತ/ಎಸ್ ಬಿ ರಾಜದುರೈ
ಕನ್ನಡಕ್ಕೆ: ಬಿ. ಸುಜ್ಞಾನಮೂರ್ತಿ
ರೂ 90/-
ಈ ಆರು ಪುಸ್ತಕಗಳ ಬೆಲೆ: ರೂ 560/-
ಪ್ರಕಟಣಾಪೂರ್ವ ಮುಂಗಡ ಬುಕ್ಕಿಂಗ್ ಬೆಲೆ: ರೂ 440/-
ಅಂಚೆವೆಚ್ಚ ಉಚಿತ: ಇಂದೇ ಬುಕ್ ಮಾಡಿ
ಮುಂಗಡ ಬುಕ್ಕಿಂಗ್ ಜುಲೈ 15 ರ ತನಕ
ಲಡಾಯಿ ಪ್ರಕಾಶನ: 9480286844
ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ
Punjab national bank Gadag
A/c No 0177005500000278
Ladai prakashana
IFSC : PUNB0017700
Google pay and phone pay number : 9480286844
ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ
ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ



