ನಮ್ಮ ದೇಶ ಹಲವು ಭಾಷೆ, ಸಂಸ್ಕೃತಿ, ಸಂಪ್ರಾದಯಗಳಿಂದ ಕೂಡಿದೆ: ಎಸ್ ಜಿ ಸಿದ್ದರಾಮಯ್ಯ

5 months ago

ಕುರುಬ ಸಮುದಾಯದ 700 ವಿದ್ಯಾರ್ಥಿಗಳಿಗೆ  ಪ್ರತಿಭಾ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಕನಕ ಎಜ್ಯುಕೇಷನಲ್  ಟ್ರಸ್ಟ್ ವತಿಯಿಂದ ಆಯೋಜನೆ

ಕೆಟ್ಟಗುಣ, ಕೆಟ್ಟಚಟಗಳಿಂದ ದೂರವಿರಿ, ಹಣವನ್ನು ಕೆಟ್ಟ ಕೆಲಸಗಳಿಗೆ ಬಳಸಬೇಡಿ: ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

ಸಿರಿವಂತರಾದರೆ ದಾನಧರ್ಮ ಮಾಡಿ, ಜ್ಞಾನವಿದ್ದಾಗ ಸಮಾಜದಲ್ಲಿ ಮಾನ್ಯತೆ: ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ

ಬೆಂಗಳೂರು: ವಿಜಯನಗರದ ಕಾಸಿಯ ಭವನದಲ್ಲಿ ಕನಕ ಎಜ್ಯುಕೇಷನಲ್ ಟ್ರಸ್ಟ್ ಮತ್ತು ವಿಜಯನಗರ ಹಾಸ್ಟಿಟಲ್ ಸಹಯೋಗದಲ್ಲಿ ದಾಸಶೇಷ್ಠ ಭಕ್ತ ಕನಕದಾಸರ 538ನೇ ಜಯಂತೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರಂಜನಾನಂದಪುರಿ ಸ್ವಾಮೀಜಿಗಳು, ಪರಮಪೂಜ್ಯ ಶ್ರೀ ಶ್ರೀ ಶ್ರೀ  ಈಶ್ವರಾನಂದಪುರಿ ಸ್ವಾಮೀಜಿಗಳು, ಖ್ಯಾತ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ಬಿಬಿಎಂಪಿ ಮಾಜಿ ಸದಸ್ಯ, ಕನಕ ಎಜ್ಯುಕೇಷನಲ್ ಅಧ್ಯಕ್ಷ, ವಿಜಯನಗರ ಹಾಸ್ಟಿಟಲ್ ಸಂಸ್ಥಾಪಕ ಡಾ.ಎಸ್.ರಾಜು ಮತ್ತು   ಕೃಷಿ ಮಾರಾಟ ಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾದ ವಿಜಯಲಕ್ಷ್ಮಿ, ಕೇರಳ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಡಿ.ಆರ್.ಪದ್ಮನಾಭ, ಕುರುಬ ಸಮಾಜದ ಮುಖಂಡರಾದ ಮಂಜಪ್ಪ, ಖ್ಯಾತ ವೈದ್ಯರಾದ ಶ್ರೇಯಸ್ ಮತ್ತು  ಇನ್  ಸೈಟ್ ಸಂಸ್ಥೆಯ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಕಾಂತ್ ಎನ್.ತೋಂಟಾಪುರರವರು ದೀಪ ಬೆಳಗಿಸಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಯುವ ಸಮುದಾಯ ಚಟಗಳಿಂದ ದೂರವಿದ್ದಾಗ, ಉತ್ತಮವಾಗಿ ಜೀವನ ಸಾಗಿಸಬಹುದು. ಸಮಾಜ ಕಟ್ಟಲು ಮಾನಸಿಕ, ದೈಹಿಕವಾಗಿ ಸಮರ್ಥವಾಗಿರುವ ಯುವ ಸಮುದಾಯದಿಂದ ಮಾತ್ರ ಸಾಧ್ಯ ಎಂದರು.

ದುಷ್ಟ ಚಟ ಮುಕ್ತ ಸಮುದಾಯ ನಿರ್ಮಾಣಕ್ಕೆ ಸದ್ಭಾವನಾ ನಡಿಗೆ ಆರಂಭಿಸಿದೆ. ಹಲವಾರು ಹಳ್ಳಿಗಳಿಗೆ ಭೇಟಿ ನೀಡಿದೆ. ಗುಟ್ಕಾ, ತಂಬಾಕು, ಕುಡಿತ ಬಿಡುವಂತೆ ಜೋಳಿಗೆ ಹಿಡಿದೆ. ನಡಿಗೆ ನಡೆದ ಸಂದರ್ಭದಲ್ಲಿ ನನ್ನ ಜೋಳಿಗೆ ತುಂಬಿಹೋಗಿತ್ತು. ವ್ಯಸನಮುಕ್ತರಾಗಿ ಉತ್ತಮರ ಸಂಗಮಾಡಿ, ಉತ್ತಮರಾಗಿ ಬಾಳಬೇಕು ಎಂದು ಕರೆ ನೀಡಿದರು.

ನೀವು ಬದಲಾವಣೆಯಾಗಬೇಕು, ಕೆಟ್ಟಗುಣ, ಕೆಟ್ಟಚಟಗಳಿಂದ ದೂರವಿರಿ.  ಮಕ್ಕಳು ಹಾದಿ ತಪ್ಪಿದಾಗ ತಾಯಿ ಅತಿಯಾದ ಬೇಸರ ಮಾಡಿಕೊಳ್ಳುತ್ತಾಳೆ. ಹಣ ಕೆಟ್ಟ ಕೆಲಸಗಳಿಗೆ ಉಪಯೋಗವಾಗಬಾರದು, ಹಣ ಉತ್ತಮ ಕೆಲಸಗಳಿಗೆ ಸದುಪಯೋಗಬೇಕು ಎಂದರು.

ಪರಮಪೂಜ್ಯ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಸಿರಿವಂತರಾದರೆ ದಾನಧರ್ಮ ಮಾಡಿ. ಎಲ್ಲರು ಮಾಡುವುದು ಹೊಟ್ಟೆಗಾಗಿ, ಬಟ್ಟೆಗಾಗಿ ಎಂಬ ಸತ್ಯ ತಿಳಿಯಿರಿ. ಜ್ಞಾನ ಇದ್ದಾಗ ಮಾತ್ರ ಒಬ್ಬ ವ್ಯಕ್ತಿಗೆ ಗೌರವ ಸಿಗುತ್ತದೆ. ಕನಕದಾಸರು ಅಂದಿನ ಕಾಲದಲ್ಲಿಯೆ ಜಾಗೃತಿಗೊಳಿಸಿದ್ದರು ಎಂದರು.

ಬಸವಾದಿ ಶರಣರು ಮತ್ತು ಕನಕದಾಸರು, ಸಂತರು ಜನರು ಆಡುವ ಭಾಷೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ರಚಿಸಿದರು. 100 ವರ್ಷ ಬದುಕುವುದು ಮುಖ್ಯವಲ್ಲ, ಜ್ಞಾನವಂತರಾಗಿ ಬಾಳಿ, ಬದುಕುಬೇಕು, ಜ್ಞಾನ ಬಹಳ ಮುಖ್ಯ. ಪರಿಶ್ರಮ, ಆತ್ಮವಿಶ್ವಾಸ, ಪ್ರೀತಿ, ವಿಶ್ವಾಸದಿಂದ ಮಕ್ಕಳು ಬೆಳಯಬೇಕು. ತಂದೆ, ತಾಯಿಗೆ ಗೌರವ ತರುವಂತೆ ಸಮಾಜದಲ್ಲಿ  ಒಳ್ಳೆಯ ಮಕ್ಕಳಾಗಿ ಬೆಳಯಬೇಕು ಎಂದರು.

ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ನಮ್ಮದು ಬಹುತ್ವ ಭಾರತ. ನಮ್ಮ ದೇಶ ಹಲವು ಭಾಷೆ, ಸಂಸ್ಕೃತಿ ಸಂಪ್ರಾದಯಗಳಿಂದ ಕೂಡಿದೆ. ನಮ್ಮ ಜನ ಬೆವರಿನ ಮೂಲಕ ಕಾಯಕ ಕಟ್ಟಿಕೊಂಡವರು. ನಿಸರ್ಗದ ಧರ್ಮದ ಅನುಗುಣವಾಗಿ ಬದುಕಿದವರು. ಚರಿತ್ರೆ ಮರೆತರೆ, ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಕಣ್ಣು, ಕಿವಿ, ಮೂಗು ಚನ್ನಾಗಿ ನೋಡಿಕೊಳ್ಳುವಂತೆ ಜೀವನವನ್ನು ಎಚ್ಚರಿಕೆಯಿಂದ ಭವಿಷ್ಯವನ್ನು ರೂಪಿಸಿಕೊಂಡು ಸಮಾಜ ಸುಧಾಕರಾಗಿ ಬಾಳಬೇಕು ಎಂದು ಕರೆ ನೀಡಿದರು.

ಡಾ.ಎಸ್.ರಾಜು ಮಾತನಾಡಿ, ಸಮಾಜವನ್ನು ಹೇಗೆ ಕಟ್ಟಬೇಕು, ಸಮಾಜಕ್ಕೆ ಏನು ಕೊಡುಗೆ ಕೊಡಬೇಕು, ಬದಲಾವಣೆ, ಜಾಗೃತಿಗಾಗಿ ಯುವ ಸಮುದಾಯ ಮುಂದಕ್ಕೆ ಬರಬೇಕು. ದುಡ್ಡು ದೊಡ್ಡಪ್ಪ, ವಿದ್ಯೆ ಅವರಪ್ಪ ಎಂಬ ಗಾದೆ ಮಾತಿನಂತೆ ವಿದ್ಯೆಗೆ ಹೆಚ್ಚು ಮಹತ್ವ ಕೊಡಬೇಕು. ಕನಕದಾಸರು ಹೇಳಿದಂತೆ ವಿಶ್ವದ ಜನರು ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದರು. 

700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅದರಲ್ಲಿ 108 ವೈದ್ಯರು, 78 ಇಂಜಿನಿಯರ್ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವವರಿಗೆ ನೀಡಲಾಗುತ್ತಿದೆ ಎಂದರು.

ವಿಜಯಲಕ್ಷ್ಮಿ ಮಾತನಾಡಿ, ಕನಕದಾಸರ ಕೀರ್ತನೆಗಳನ್ನು ಹೇಳಿದರೆ ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿ ಇರಲು ಸಾಧ್ಯ. ನಾವು ಕಲಿತಿರುವ ಸಂಸ್ಕಾರ, ಸಂಬಂಧಗಳು ಗಟ್ಟಿಯಾಗಿ ಉಳಿಸಕೊಳ್ಳಬೇಕು. ನಾನು ಪರಿವರ್ತನೆಯಾಗಬೇಕು ಎಂಬ ಗುಣ ಬೆಳಸಿಕೊಳ್ಳಬೇಕು. ದಿನಚರಿ ಬದಲಾದರೆ, ಜೀವನ ಬದಲಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ದಿನಚರಿ ರೂಢಿಸಿಕೊಳ್ಳಿ ಎಂದರು.

ಪ್ರಾಂಶುಪಾಲ ಡಾ.ಡಿ.ಆರ್.ಪದ್ಮನಾಭ ಮಾತನಾಡಿ, ಕೆಟ್ಟ ವ್ಯಸನಗಳಿಂದ ಯುವ ಸಮುದಾಯ ದೂರವಿರಿ, ನಿಮ್ಮಿಂದ ದೇಶ ಕಟ್ಟಲು ಸಾಧ್ಯ ಎಂದರು.

ಮಂಜಪ್ಪ ಮಾತನಾಡಿ, ಇಡೀ ವಿಶ್ವವೇ ವಿಜ್ಞಾನ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅಮೇರಿಕಾ ನೋಡಿ ಹೆದರುತ್ತದೆ. ಏಲಾನ್ ಮಸ್ಕ್ ನೋಡಿದರೆ ಅಮೇರಿಕಾ ಹೆದರುತ್ತದೆ. ಅದೇ ರೀತಿ ನಮ್ಮ ಸಮಾಜದ ಯುವಕ, ಯುವತಿಯರು ವಿದ್ಯಾವಂತರಾಗಬೇಕು. ನಮ್ಮ ಮಠಗಳು ಮೂಢನಂಬಿಕೆ ವಿರುದ್ದ ಮತ್ತು ಶಿಕ್ಷಣಕ್ಕೆ ಸಹಕಾರ ನೀಡುತ್ತಾ ಬಂದಿವೆ. ನಮ್ಮ ಸಮಾಜ ಬದಲಾವಣೆಯತ್ತ ಹೆಜ್ಜೆ ಇಡುತ್ತಿದೆ ಎಂದರು.

Leave a Reply