ದಾಸಶೇಷ್ಠ ಕನಕದಾಸರ ಸ್ಮರಣೆಯಲ್ಲಿ ಕನಕ ಭವನ ಲೋಕಾರ್ಪಣೆ

4 years ago

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ಚಂದ್ರಾ ಬಡಾವಣೆಯಲ್ಲಿ ದಾಸಶೇಷ್ಠ ಕನಕದಾಸರ ಸ್ಮರಣೆಯಲ್ಲಿ ಕನಕ ಭವನ ಲೋಕರ್ಪಣೆ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಕಾಗಿನೆಲೆ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಸ್ಥಳೀಯ ಶಾಸಕ, ವಸತಿ ಸಚಿವ ವಿ.ಸೋಮಣ್ಣರವರು, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಸಚಿವರಾದ ಕೋಟ ಶ್ರೀನಿವಾಸಪೂಜಾರಿ, ಮುನಿರತ್ನ, ಭೈರತಿ ಬಸವರಾಜ್, ಎಂ.ಟಿ.ಬಿ.ನಾಗರಾಜ್, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಪುಟ್ಟಣ್ಣ ಕನಕ ಭವನವನ್ನು ಲೋಕರ್ಪಣೆ ಮಾಡಿದರು.

ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕ ಭವನ ಲೋಕರ್ಪಣೆ ಬಹಳ ದಿನಗಳ ಕನಸು, ಇಂದು ನನಸು ಆಗಿದೆ. ರಾಜ್ಯದಲ್ಲಿ ನಡೆಯುವ ಘಟನೆಗಳ ಅವಲೋಕನ ಮಾಡಿದರೆ, ಜಾತ್ಯತೀತ ಎಂಬ ಸಿದ್ದಾಂತ ಪ್ರತಿಪಾದಿಸುತ್ತಾರೆ. ಆದರೆ ಅಧಿಕಾರ ಬಂದ ನಂತರ ಸ್ವಜಾತಿ ಪ್ರೇಮ ಬಂದು ಬಿಡುತ್ತದೆ. ಆದರೆ ಸಚಿವ ವಿ.ಸೋಮಣ್ಣರವರು ಎಲ್ಲ ಜಾತಿ, ಜನಾಂಗದ ಪ್ರೀತಿ ಗಳಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯ ಹುಟ್ಟಿದಾಗ ಉಸಿರು ಇರುತ್ತದೆ,ಸತ್ತ ನಂತರ ಹೆಸರು ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಹೆಸರು ಉಳಿಯುವಂತೆ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಹೇಳಿದರು.

ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಸಿರಿವಂತನಾದರೆ ದಾನ ಮಾಡು, ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಕನಕದಾಸರ ಮಾತುಗಳು ಇಂದಿನ ಸಮಾಜದವರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ದೈವ ಸಂಕಲ್ಪ ಇದ್ದಾಗ ಮಾತ್ರ ಪುಣ್ಯ ಕೆಲಸಗಳು ಮಾಡಲು ಸಾಧ್ಯ. ಬೀರೇಶ್ವರನ ಕೃಪೆಯಿಂದ ಕನಕ ಭವನ ಉದ್ಘಾಟನೆಯಾಗಿದೆ. ನುಡಿದಂತೆ ನಡೆ,ನಡೆದಂತೆ ನುಡಿದ ಸಚಿವ ವಿ.ಸೋಮಣ್ಣರವರು ಮಾಡಿರುವ ಕೆಲಸ ಕುರುಬ ಸಮುದಾಯ ಮರೆಯುವ ಹಾಗಿಲ್ಲ. ಯಾವ ಜನನಾಯಕ ನಮ್ಮ ಸಮಾಜವನ್ನು ಕಾಪಾಡುತ್ತಾರೆ, ಗೌರವದಿಂದ ಕಾಣುತ್ತಾರೆ ಅವರನ್ನ ನಾವು ಸಹ ಗೌರವದಿಂದ ಕಾಣಬೇಕು. ಸಂಗೊಳ್ಳಿ ರಾಯಣ್ಣ, ಕನಕಗಿರಿ ಉದ್ಯಾನವನ, ಕನಕಭವನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಕುರುಬ ಸಮುದಾಯಕ್ಕೆ ಪವಿತ್ರಯಾತ್ರ ಸ್ಥಳವಾಗಿದೆ ಎಂದು ಹೇಳಿದರು.

ಸಚಿವ ವಿ.ಸೋಮಣ್ಣ ಮಾತನಾಡಿ, ಜೀವನದಲ್ಲಿ ಪರಮಪೂಜ್ಯ ಸಿದ್ದಗಂಗಾ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮೀಜಿ, ನಿರಂಜನನಂದಾಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿರವರ ಆಶೀರ್ವಾದ ಫಲದಿಂದ  ಕನಕ ಭವನ ಲೋಕರ್ಪಣೆ ಮಾಡಲಾಗಿದೆ ಎಂದರು.

ಇಂದು ಪವಿತ್ರವಾದ ಕೆಲಸ ,ದಾಸಶೇಷ್ಠ ಕನಕದಾಸರ ಸ್ಮರಣೆಯಲ್ಲಿ ಕನಕ ಭವನ ನಿರ್ಮಿಸಲಾಗಿದೆ. ನಾಲ್ಕು ವರ್ಷ, ಮೂರು ತಿಂಗಳ ಅವಧಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಶರವೇಗದಲ್ಲಿ ಅಭಿವೃದ್ದಿ ಪಥದತ್ತ ಸಾಗುತ್ತಿದೆ. 8 ಕಿಲೋ ಮೀಟರ್ ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಭೂಗತ ಕೇಬಲ್ ಗಳಾಗಿ ಬದಲಾವಣೆ ಮಾಡಲಾಗಿದೆ. ದಾಸರಹಳ್ಳಿ ಮತ್ತು ಪಂತರಪಾಳ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ. ಹಿಂದುಳಿದ ವರ್ಗಗಳ 200ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳಿಗೆ ಐ.ಎ.ಎಸ್. ಮತ್ತು ಐ.ಪಿ.ಎಸ್ .ಮತ್ತು ಕೆ.ಎ.ಎಸ್. ಪರೀಕ್ಷಾ ತರಬೇತಿ ಕೇಂದ್ರ ಕನಕಭವನದಲ್ಲಿ ಕಲ್ಪಿಸಲಾಗಿದೆ ಎಂದರು.

ಕನಕ ಭವನವನ್ನು ಕಾಗಿನೆಲೆ ಪೀಠಕ್ಕೆ ಹಸ್ತಂತಾರ ಮಾಡಲಾಗುವುದು. ದಾಸಶೇಷ್ಠ ಕನಕದಾಸರ ಭಕ್ತಿಗೆ ಶ್ರೀ ಕೃಷ್ಣ ಸಾಕ್ಷತ್ ಒಲಿದನು, ಭಕ್ತಿಪಂಥ ಮಹಾನ್ ಸಂತ, ಜಾತ್ಯತೀತ ಸಿದ್ದಾಂತದ ಹರಿಕಾರ ಕನಕದಾಸರ ಜೀವನ ಆದರ್ಶಗಳನ್ನು ಇಂದಿನ ಯುವ ಜನಾಂಗ ಜೀವನದಲ್ಲಿ ಆಳವಡಿಸಿಕೊಂಡು ಸಮಾಜದ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದರು.

ಕುರುಬ ಸಮಾಜ ಮುಖಂಡರಾದ ಟಿ.ವಿ.ಬೆಳಗಾವಿ, ಸಿದ್ದಾರ್ಥ, ರಾಮಪ್ಪ, ಡೊಡ್ಡಣ್ಣ, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಮಾಜಿ ಆಡಳಿತ ಪಕ್ಷದ ನಾಯಕರಾದ ಹೆಚ್.ರವೀಂದ್ರ, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ವಿಜಯನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷ  ಟಿ.ವಿ.ಕೃಷ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಡಾ.ಎಸ್.ರಾಜು, ಕೆ.ಉಮೇಶ್ ಶೆಟ್ಟಿ, ವಾಗೇಶ್, ದಾಸೇಗೌಡ, ಬಿ.ಜೆ.ಪಿ. ಮುಖಂಡರಾದ ರಾಜಪ್ಪ, ಶ್ರೀಧರ್ ಭಾಗವಹಿಸಿದ್ದರು.

Leave a Reply