ಜನರೊಂದಿಗೆ ಜನಸೇವಕ, ಜನಸ್ಪಂದನಾ ಕಾರ್ಯಕ್ರಮ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಜನಸಂಪರ್ಕ ಕಛೇರಿಯಲ್ಲಿ 30ನೇ ವಾರದ ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನರೊಂದಿಗೆ ಜನಸೇವಕ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ಅಲಿಸಿದರು. ಬಿಬಿಎಂಪಿ ಅಧಿಕಾರಿಗಳು, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ಮಾತನಾಡಿ, ಜನರ ಸಮಸ್ಯೆಗಳನ್ನು ನೇರ ಭೇಟಿ ಮಾಡಿ ಅಲಿಸುವುದರಿಂದ ಸಮಸ್ಯೆ ನಿವಾರಣೆ ತತಕ್ಷಣ ಸಾಧ್ಯವಾಗುತ್ತಿದೆ. ನಿರಂತರತೆ ಕಾಳಜಿ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಸಾರ್ವಜನಿಕರ ಸಮಸ್ಯೆ ನಿವಾರಣೆ ಮಾಡಲು ನಮ್ಮ ಉದ್ದೇಶ ಎಂದರು.
30 ವಾರದ ಜನರೊಂದಿಗೆ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾವಿರಾರು ಸಮಸ್ಯೆಗಳು ಪರಿಹಾರ ಕಂಡಿದೆ. ಬೆಳೆಯುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಸಮಸ್ಯೆಗಳು ನಿರಂತರ. ಅದನ್ನ ಪರಿಹಾರ ಮಾಡುವ ಕಾರ್ಯ ನಮ್ಮದು ಎಂದರು.
ಸಾರ್ವಜನಿಕರ ಸಹಕಾರದಿಂದ ಸಮಸ್ಯೆಗಳ ಶಾಶ್ವತ ಪರಿಹಾರ ಸಾಧ್ಯ. ಎಲ್ಲೆಂದರಲ್ಲಿ ಕಸ ಎಸೆಯಬೇಡಿ, ವಿನಾಕರಣ ರಸ್ತೆ ಅಗೆಯಬೇಡಿ ಹಾಗೂ ಸ್ವಚ್ಚತೆ ಕಾಪಾಡಿ ಜನರು ತಮ್ಮ ಜವಾಬ್ದಾರಿ ಅರಿತರೆ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದರು.
ಜನರೊಂದಿಗೆ ಜನಸೇವಕ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಮಸ್ಯೆಗಳು ಅಹವಾಲುಗಳು ಬಂದಿದೆ. ಅದನ್ನ ಸಹ ಪರಿಹರಿಸಲು ಸರ್ಕಾರಗಳಿಗೆ ನಾವು ಪ್ರಯುತ್ನ ಮಾಡಲಾಗಿದೆ ಎಂದರು.
ಮಾಜಿ ಮೇಯರ್ ರಂಗಣ್ಣ, ಪಾಲಿಕೆ ಮಾಜಿ ಸದಸ್ಯರುಗಳಾದ ವಿಜಯಕುಮಾರ್, ಹೆಚ್.ಆರ್.ಕೃಷ್ಣಪ್ಪ, ದೀಪಾ ನಾಗೇಶ್, ಪ್ರತಿಮಾ, ಮಂಡಲ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಬಿಜೆಪಿ ಮುಖಂಡರುಗಳಾದ ಕೇಶವಮೂರ್ತಿ, ಉಮೇಶ್, ಅನಿಲ್ ರಂಗಣ್ಣ, ರಾಕೇಶ್, ಅಮಿತ್ ಜೈನ್, ಕಿರಣ್, ವೇಲು ಮೊದಲಾದವರು ಹಾಜರಿದ್ದರು.




