“ನಾವು ಬದುಕಿದ್ದೀವಿ ಅನ್ನೋ ಒಂದೇ ಒಂದು ಕಾರಣ ಸಾಕು, ಇನ್ನೂ ಚೆನ್ನಾಗಿ ಬದುಕುವುದಕ್ಕೆ.”
– ಈ ಮಾತು ‘ಚಿಗುರಿದ ಕನಸು’ ಸಿನಿಮಾದಲ್ಲಿ ಶೋಷಿತ ಪಾತ್ರವೊಂದರಲ್ಲಿ ನಟಿಸಿದ್ದ ವೃದ್ಧನೊಬ್ಬನ ಬಾಯಲ್ಲಿ ಬರುತ್ತದೆ. ಇದನ್ನು ಶಿವರಾಮ ಕಾರಂತರು ಬರೆದರೋ ಅಥವಾ ಜಯಂತ ಕಾಯ್ಕಿಣಿ ಬರೆದರೋ ನನಗೆ ಗೊತ್ತಿಲ್ಲ. ಈ ಮಾತು ಧ್ವನಿಸುವ ಸತ್ಯ ಮಾತ್ರ ನನ್ನನ್ನು ಕೆಲಕಾಲ ತಾಕಿತ್ತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಇನ್ನೊಂದು ಕಡೆ ಡೈರೆಕ್ಟರ್ ಪೂರಿ ಜಗನ್ನಾಥ್ ತನ್ನ ಗುರು ರಾಮ್ ಗೋಪಾಲ್ ವರ್ಮಾ ಕುರಿತು ಬರೆಯುತ್ತಾನೆ:
“ಎಲ್ಲಾ ಸಂಬಂಧಗಳನ್ನು ಮುರಿದುಕೊಂಡು ಮುಂಬೈನಲ್ಲಿ ಬದುಕುವ ರಾಮು ಒಬ್ಬನೇ ನನಗಿಷ್ಟ. ಆದರೆ ಭವಿಷ್ಯದಲ್ಲಿ ವೃದ್ಧನನ್ನಾಗಿ ನೋಡಲು ನನಗಿಷ್ಟವಿಲ್ಲ. ಅವರು ಒಬ್ಬರನ್ನು ಅವಲಂಬಿಸಿ ಬದುಕೋದು ಬೇಡ. ಆ ಪರಿಸ್ಥಿತಿ ಬರುವ ಮುನ್ನವೇ ಹೋಗಿಬಿಡಬೇಕೆಂದು ಬಯಸುತ್ತೇನೆ.”
ಕಳೆದ ವರ್ಷ, ಪುನೀತ್ ರಾಜ್’ಕುಮಾರ್ ತೀರಿಕೊಂಡ ಎರಡೇ ದಿನಕ್ಕೆ ನಾನು ಕೂಡಾ ಎಂಥದ್ದೋ ಅಂಜಿಕೆಯಲ್ಲಿ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆಂದು ಹೋಗಿದ್ದೆ. ಅಲ್ಲಿ ಕಿಲೋಮೀಟರ್ ಲೆಕ್ಕದಲ್ಲಿದ್ದ ಸರತಿಸಾಲು ನೋಡಿ ಬೇಸರ ಮತ್ತು ಖುಷಿ ಒಟ್ಟೊಟ್ಟಿಗೆ ಆಗಿ ಅವತ್ತಲ್ಲಿ ಏನು ಮಾಡಲಾಗದೆ ವಾಪಸ್ಸು ಹಿಂದಿರುಗಿದೆ. ಮತ್ತೆ ಅಲ್ಲಿಗೆ ಹೋಗಲಾಗಲಿಲ್ಲ.
ಅಕ್ಟೋಬರ್ 26 ನನ್ birthday ಅನ್ನುವುದಕ್ಕಿಂತ, ಅಕ್ಟೋಬರ್ 29 ಪುನೀತ್ ರಾಜ್’ಕುಮಾರ್ ನಮ್ಮಿಂದ ಇಲ್ಲವಾದ ದಿನ ಅನ್ನೋದೇ ನನ್ನ ಎದೆಯಲ್ಲಿ ಕಳೆದ ವರ್ಷದಿಂದ ದಾಖಲಾಗಿ ಬಿಟ್ಟಿದೆ.
Puri Jagannath is right. ಇನ್ನೊಬ್ಬರನ್ನು ಅವಲಂಬಿಸಿ, ಇನ್ನೊಬ್ಬರ ಕಣ್ಣಿಗೆ ಸಹ್ಯವಾಗದ ಸ್ಥಿತಿ ತಲುಪುವ ಮುನ್ನವೇ ಥೇಟು ಲಂಕೇಶರಂತೆ ಮಲಗಿದ್ದಲ್ಲೇ ಹೋಗಿ ಬಿಡಬೇಕು ಅನ್ನುವ ಆಸೆ ನನ್ನದು.
ಮತ್ತೇನೂ ಅಂಥ ವಿಶೇಷವಿಲ್ಲ. ಅದೇ ಲೈಫು, ಅದೇ ಫ್ರೆಂಡ್ಸು, ಬುಕ್ಸು, ಸಿನಿಮಾ…
ಮತ್ತೆ ಇದೇ ಫೇಸ್ಬುಕ್ ಕಾರಣಕ್ಕೆ, ಬರಹದ ಕಾರಣಕ್ಕೆ, ವ್ಯಕ್ತಿತ್ವದ ಕಾರಣಕ್ಕೆ, ನೀವು ಕೆಲವರು ನೇರ ಎದೆಗೂಡಿಗೆ ಬಂದು ಶಾಶ್ವತವಾಗಿ ಜಮೆಯಾಗಿದ್ದರೆ…
ಮತ್ತೆ ಇದೇ ಫೇಸ್ಬುಕ್ ಕಾರಣಕ್ಕೆ already ಎದೆಗೂಡಲ್ಲಿದ್ದವರು ಈಗ ಎಲ್ಲಾ ಖಾಲಿ ಮಾಡಿಕೊಂಡು ನಿರ್ಗಮಿಸಿಯಾಗಿದೆ. ಅವರೀಗಾ ಬರೀ ನೆನಪಷ್ಟೇ.
ಮಾರ್ಗ ಮಧ್ಯೆ ಹಠಾತ್ ನಿರ್ಗಮಿಸಿದವರಿಗೊಂದು ವಿದಾಯ ಹೇಳುತ್ತಾ…
“ಇನ್ನು ನೀವು ಸ್ನೇಹಿತರು! ಕೆಲವರೇ ಉಳಿದಿದ್ದೀರಿ
ಎಂತಲೇ ದಿನೇ ದಿನೇ ಹೆಚ್ಚು ಪ್ರಿಯರಾಗುತ್ತಿದ್ದೀರಿ.
ಹಿಂದೊಮ್ಮೆ ಅತ್ಯಂತ ದೀರ್ಘವೆನಿಸಿದ್ದ ಈ ದಾರಿ
ಈಗ ಅದೆಷ್ಟು ಕಿರಿದಾಗಿದೆ…”
– ಆನಾ ಆಹ್ಮತೋವಾ
ಈ Facebook Birthday ಎಷ್ಟು ಕೃತಕ ಅಲ್ವಾ?
ಇರಲಿ. ಎಲ್ಲಾದರೂ, ಯಾವತ್ತಾದರೂ ಸಿಗೋಣ.
ನಿಮ್ಮವ
– ಕೆ.ಎಲ್. ಚಂದ್ರಶೇಖರ್ ಐಜೂರ್




