ಸರ್ಕಾರಿ ಶಾಲೆಯಲ್ಲಿ ಮತ್ತು ಅಂತಹ ಪ್ರತಿಷ್ಠಿತವಲ್ಲದ ಶಾಲೆಗಳಲ್ಲಿ ಓದುವಂತಹ ಬಡವರ ಮತ್ತು ಸಾಮಾನ್ಯ ಜನರ ಮನೆಯ ಮಕ್ಕಳು ಇಂಗ್ಲಿಷ್, ಗಣಿತ, ವಿಜ್ಞಾನದ ವಿಷಯದಲ್ಲಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ಇವರಿಗೆ ಸರಿಯಾದಂತಹ ಬೋಧನೆಯ ಕ್ರಮವೂ ಇರುವುದಿಲ್ಲ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಇದರ ಜೊತೆಗೆ ಸಾಮಾನ್ಯ ಜನರ ಮನೆಯ ಮಕ್ಕಳು ಮತ್ತು ಬಡವರ ಮನೆಯ ಮಕ್ಕಳು ಪಿಯುಸಿ ಓದುವ ಸಂದರ್ಭದಲ್ಲಿ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ಸಿದ್ಧರಾಗಲು ಬೇಕಾದಂತಹ ವಿಶೇಷವಾದಂತಹ ತರಬೇತಿ ಪಡೆದುಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಖಾಸಗಿ ಸಂಸ್ಥೆಗಳು ಟುಟೋರಿಯಲ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನ ಪಡೆಯುತ್ತಿದ್ದಾರೆ.
ಈ ರೀತಿಯಲ್ಲಿ ಹೆಚ್ಚಿನ ಹಣವನ್ನು ಕೊಟ್ಟು ತಮ್ಮ ಮಕ್ಕಳಿಗೆ ಎಂಟನೇ ತರಗತಿಯಿಂದ 10ನೇ ತರಗತಿ ಹಾಗೂ ಪಿಯುಸಿ ಮಕ್ಕಳಿಗೆ ವಿಶೇಷವಾದಂತಹ ತರಬೇತಿಯನ್ನು ನೀಡುವಂತಹ ವ್ಯವಸ್ಥೆಯನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇವೆಲ್ಲವೂ ಕೇವಲ ಉಳ್ಳವರ ಮಕ್ಕಳಿಗೆ ಮಾತ್ರವೇ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿಯೊಂದು ತಾಲೂಕು ಮತ್ತು ಜಿಲ್ಲೆಗಳಲ್ಲಿ ಕನಿಷ್ಠ ಐದರಂತೆ ಎಂಟನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳಿಗೆ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ ಪಕ್ಷ ವರ್ಷದ ಮೂರು ತಿಂಗಳ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಸಂಘ ಸಂಸ್ಥೆಗಳು ಮತ್ತು ಸಮಾಜ ಸೇವೆ ಸಲ್ಲಿಸಲು ಬಯಸುವ ಸಂಸ್ಥೆಗಳ ಜೊತೆಯಲ್ಲಿ ಮಾತುಕತೆಯನ್ನು ನಡೆಸಿ ಇಂತಹ ಕೇಂದ್ರಗಳನ್ನು ಸ್ಥಾಪಿಸಬೇಕು.
ಇದೇ ರೀತಿಯಲ್ಲಿ ಪಿಯುಸಿ ಓದುವ ಮಕ್ಕಳಿಗೆ ಗಣಿತ ಭೌತಶಾಸ್ತ್ರ ರಸಾಯನ ಶಾಸ್ತ್ರ ಹಾಗೂ ಸಿಇಟಿ ನೀಟ್ ಪರೀಕ್ಷೆಗಳಿಗೆ ಸಿದ್ಧರಾಗುವ ನಿಟ್ಟಿನಲ್ಲಿ ಮೂರು ತಿಂಗಳ ಕಾಲ ವಿಶೇಷವಾದಂತಹ ತರಗತಿಗಳನ್ನು ನಡೆಸಬೇಕು. ಇವುಗಳನ್ನು ಮಾಡುವುದರಿಂದ ಬಡವರ ಮತ್ತು ಸಾಮಾನ್ಯ ಜನರ ಮನೆಯ ಮಕ್ಕಳು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಗಳಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನ ಬರೆಯಲು ಸಿದ್ದರಾಗುತ್ತಾರೆ ಮತ್ತು ಅವರಿಗೂ ಹೆಚ್ಚಿನ ಅವಕಾಶಗಳು ದೊರೆಯುವಂತಾಗುತ್ತದೆ. ಇಲ್ಲದಿದ್ದರೆ ಉನ್ನತ ಶಿಕ್ಷಣ ಎನ್ನುವುದು ಗುಣಮಟ್ಟದ ಶಿಕ್ಷಣ ಎನ್ನುವುದು ಕೇವಲ ಉಳ್ಳವರ ಮನೆಯ ಮಕ್ಕಳ ಪಾಲಾಗುತ್ತದೆ. ಈ ರೀತಿಯ ಯೋಜನೆಗಳಿಂದ ಮಾತ್ರವೇ ಸಮಾಜದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ತಾರತಮ್ಯವನ್ನು ಸರಿಪಡಿಸಬಹುದು. ಕೆಲಸಕ್ಕೆ ಬಾರದ ಕಾರ್ಯಕ್ರಮಗಳಿಗೆ ಮತ್ತು ಯೋಜನೆಗಳಿಗೆ ಹಣವನ್ನ ಪೋಲು ಮಾಡುವುದರ ಬದಲಿಗೆ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಹಣವನ್ನ ವಿನಿಯೋಗಿಸಿದರೆ ಇದರಿಂದ ಸಮಾಜಕ್ಕೆ ಒಳಿತಾಗುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




