1948ರ ಜನವರಿ 30ರಂದು ಮಹಾತ್ಮ ಗಾಂಧೀಜಿಯವರು ಹತ್ಯೆಯಾದ ದಿನದಂದು ವಿಶ್ವ ಸಂಸ್ಥೆಯ ಇತಿಹಾಸದಲ್ಲಿಯೇ ವಿಶಿಷ್ಟವಾದಂತಹ ಗೌರವವನ್ನು ಗಾಂಧೀಜಿ ರವರಿಗೆ ಅರ್ಪಿಸಿದ್ದಾರೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಸಾಮಾನ್ಯವಾಗಿ ಯಾವುದೇ ದೇಶದ ಪ್ರಮುಖರು ನಿಧನರಾದರೆ ಆ ದೇಶದ ಬಾವುಟವನ್ನು ಮಾತ್ರ ವಿಶ್ವ ಸಂಸ್ಥೆಯ ಕಟ್ಟಡದ ಮೇಲೆ ಇರುವ ಬಾವುಟವನ್ನು ಕೆಳಗೆ ಇಳಿಸುತ್ತಾರೆ. ಆದರೆ ಮಹಾತ್ಮ ಗಾಂಧೀಜಿ ಅವರು ರಾಕ್ಷಸನಿಂದ ಹತ್ಯೆಯಾದ ದಿನ ವಿಶ್ವಸಂಸ್ಥೆಯ ಕಟ್ಟಡದ ಮೇಲಿದ್ದ ಎಲ್ಲ ದೇಶದ ಬಾವುಟಗಳನ್ನು ಕೆಳಕ್ಕೆ ಇಳಿಸಲಾಯಿತು. ಈ ಸಂದರ್ಭದಲ್ಲಿ ಇಂತಹ ನಡವಳಿಕೆಗೆ ಕಾರಣವೇನೆಂದು ವಿಶ್ವಸಂಸ್ಥೆಯ ಕಾರ್ಯದರ್ಶಿಗಳನ್ನ ಪ್ರಶ್ನಿಸಿದಾಗ ಅವರು ಹೇಳಿದ ಒಂದು ಮಾತು ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಅವರ ಉತ್ತರ ಏನಿತ್ತು ಎಂದರೆ ಹತ್ಯೆಯಾಗಿರುವುದು ಕೇವಲ ಗಾಂಧೀಜಿ ಅಲ್ಲ; ಹತ್ಯೆಯಾಗಿರುವುದು ಮಾನವತವಾದ ಎಂಬ ಮಾತುಗಳನ್ನ ಆ ಸಂದರ್ಭದಲ್ಲಿ ಅವರು ಹೇಳಿರುತ್ತಾರೆ.
ಸಾವಿರ ಜನ ರಸ್ತೆ ರಸ್ತೆಯಲ್ಲಿ ನಿಂತು ಬಾಯಿ ಬಡಿದುಕೊಂಡರು, ಪೂರ್ವಗ್ರಹ ಪೀಡಿತ, ಸಂಕುಚಿತ ಭಾವನೆಯ ದುಷ್ಟ ಮನಸ್ಸುಗಳು ಎಷ್ಟೇ ಅಪಪ್ರಚಾರ ಮಾಡಿದರು, ಕೊಳಕು ಮನಸ್ಸಿನ ಶಿಕ್ಷಣ ಸಂಸ್ಥೆಯ ಪ್ರಮುಖರು ತಮ್ಮ ಮಕ್ಕಳಿಗೆ ಗಾಂಧೀಜಿಯ ವಿಚಾರದಲ್ಲಿ ಎಷ್ಟೇ ಲಘುವಾಗಿ ಬೋಧಿಸಿದರು, ಗಾಂಧೀಜಿರವರ ವ್ಯಕ್ತಿತ್ವ, ಬದುಕು, ತ್ಯಾಗ ಇವುಗಳ ಮುಂದೆ ಎಲ್ಲವೂ ತಿಪ್ಪೆಗೆ ಸಮಾನ.
ವಿಶ್ವದ ಅನೇಕ ಹೋರಾಟಗಾರರು ತಮಗೆ ಆದರ್ಶ ಮಹಾತ್ಮ ಗಾಂಧೀಜಿ ಎಂದು ಹೇಳಿಕೊಂಡಿದ್ದಾರೆ ಹೊರತು ಬೇರೆಯವರ ಹೆಸರುಗಳನ್ನಲ್ಲ ಎಂಬುದು ನೆನಪಿರಲಿ.
ಭಾರತವನ್ನ ವಿಶ್ವದ ಎಲ್ಲ ರಾಷ್ಟ್ರಗಳು ಗೌರವಿಸುವುದು ಗಾಂಧೀಜಿಯವರ ಹೋರಾಟದ ಮಾರ್ಗ ಮತ್ತು ಅವರ ವಿಚಾರಧಾರೆಗಳನ್ನು ಮಾತ್ರ ಎಂಬುದು ನೆನಪಿರಲಿ.
ಗಾಂಧೀಜಿರವರ ಸಮಾಧಿಗೆ ಅವಮಾನ ಮಾಡಬಹುದು, ಅವರ ವ್ಯಕ್ತಿತ್ವಕ್ಕೆ ಮಸಿ ಬೆಳೆಯಬಹುದು, ಅವರ ಪ್ರತಿಮೆ, ಪುತ್ಥಳಿಗಳನ್ನು ಧ್ವಂಸಗೊಳಿಸಬಹುದು. ಆದರೆ ಗಾಂಧಿವಾದವನ್ನು ಎಲ್ಲಿಯ ತನಕ ಖಾದಿ ಬಟ್ಟೆಯ ಬಳಕೆ ಇರುತ್ತದೆ, ಎಲ್ಲಿಯ ತನಕ ಸತ್ಯಾಗ್ರಹ ನಿರಂತರವಾಗಿರುತ್ತದೆ, ಎಲ್ಲಿಯ ತನಕ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆ ಇರುತ್ತದೆ, ಎಲ್ಲಿಯ ತನಕ ಮಾನವೀಯತೆ ಇರುತ್ತದೆ ಅಲ್ಲಿಯ ತನಕ ಗಾಂಧೀ ಇದ್ದೇ ಇರುತ್ತಾರೆ.
ಮನಸ್ಸಿನಲ್ಲಿ ಭಕ್ತಿ ಇರಲಿ ಬಿಡಲಿ ಗಾಂಧಿ ಜಪವನ್ನ ಮಾಡದೆ ಬೇರೆ ದಾರಿ ಇಲ್ಲ, ಸಮಾಧಿಗೆ ನಮಿಸದೆ ಅನ್ಯ ಮಾರ್ಗವೇ ಇಲ್ಲ, ಬಹಿರಂಗವಾಗಿ ತೋರ್ಪಡಿಸಿಕೊಳ್ಳಲಾಗದು ಅದೆಷ್ಟು ಆಳುವ ಮಂದಿಗೆ ಗೋಡ್ಸೆಯ ಪ್ರೀತಿಯ.
ಅಂದು ರಾಕ್ಷಸನೊಬ್ಬ ಗಾಂಧೀಜಿಯ ಕೊಂದ ಆದರೆ ಇಂದು ಪ್ರತಿದಿನವೂ ಗಾಂಧಿ ವಾದವ ಸೋಲಿಸುವ ಶಕ್ತಿಗಳ ವಿರುದ್ಧ ಜಾಗೃತಿ ಮತ್ತು ಎಚ್ಚರಿಕೆಯೂ ಇರಲೇಬೇಕಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




