ಪರಿಮಳ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಇವಳ ಮೊಬೈಲ್ ಫೋನ್ ರಿಂಗ್ ಆಯಿತು. ಅಡಿಗೆ ಮನೆಯಿಂದಲೇ ಪರಿಮಳ ಅಮ್ಮ, ಯಾರೋ ಫೋನ್ ಮಾಡಿದ್ದಾರೆ ಸ್ವಲ್ಪ ನೋಡಮ್ಮ ಎಂದು ಚಂದ್ರಮ್ಮಗೆ ಅಲ್ಲಿಂದಲೇ ಹೇಳಿದಳು.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಚಂದ್ರಮ್ಮ, ಫೋನ್ ರಿಸೀವ್ ಮಾಡುತ್ತಿದ್ದಂತೆ ಆ ಕಡೆಯಿಂದ, ವಾರದ ಹಿಂದೆ ನೀವು ಆಶ್ರಮಕ್ಕೆ ಸೇರಿಸಿದ್ದ ವಿಕ್ರಂ ರಾಯರು ತುಂಬಾ ದುಃಖದಲ್ಲಿದ್ದಾರೆ. ಊಟ ಮಾಡುತ್ತಿಲ್ಲ, ಕೂಡಲೇ ಬನ್ನಿ ಎಂದು ಹೇಳಿದಳು. ಈ ಮಾತು ಕೇಳುತ್ತಿದ್ದಂತೆ ಚಂದ್ರಮ್ಮ ಗಾಬರಿಯಾಗಿ, ನೀವು ಮಾತನಾಡುತ್ತಿರುವುದು ಯಾರಮ್ಮ ಎಂದು ಪ್ರಶ್ನಿಸಿದಳು. ನಾವು ಮೈಸೂರ್ ರಸ್ತೆಯಲ್ಲಿರುವ ಅನಾಥಾಶ್ರಮದವರು, ಎಂದು ಅವಳು ಹೇಳುತ್ತಿದ್ದಂತೆ ಪರಿಮಳ ಅಡುಗೆಮನೆಯಿಂದ ಓಡಿ ಬಂದು ತಾಯಿಯ ಕೈಯಿಂದ ಫೋನನ್ನು ಬಲವಂತವಾಗಿ ತೆಗೆದುಕೊಂಡು ತಾನು ಮಾತನಾಡಲು ಆರಂಭಿಸಿದಳು.
ಇಷ್ಟರಲ್ಲಿ ಚಂದ್ರಮ್ಮನಿಗೆ ತನ್ನ ಪತಿ ಏನಾಗಿದ್ದಾರೆ ಎನ್ನುವುದು ತಿಳಿದುಹೋಯಿತು. ಪರಿಮಳ ಕೆಲವು ನಿಮಿಷ ಫೋನಿನಲ್ಲಿ ಮಾತನಾಡಿ ಏನು ಆಗಿಲ್ಲವೇನೋ ಎನ್ನುವಂತೆ ಅಡಿಗೆ ಮನೆ ಕಡೆ ಹೊರಡಲು ಮುಂದಾಗಲು ಅಷ್ಟರಲ್ಲಿ ಚಂದ್ರಮ್ಮನಿಗೆ ತನ್ನ ಮಗಳು ತನಗೆ ಸುಳ್ಳು ಹೇಳುತ್ತಿದ್ದಾಳೆ ಎನ್ನುವುದು ತಿಳಿದು ನಿಮ್ಮಪ್ಪನನ್ನು ಎಲ್ಲಿಗೆ ಸೇರಿಸಿದ್ದೀರಿ ಯಾವ ಆಸ್ಪತ್ರೆ ಎಂದು ಪ್ರಶ್ನಿಸಿದಳು.

ಆಸ್ಪತ್ರೆಯಮ್ಮ ಅವರನ್ನು ಐಸಿಯು ವಾರ್ಡಿನಲ್ಲಿ ಇಟ್ಟಿದ್ದಾರೆ, ಯಾರನ್ನು ನೋಡಲು ಬಿಡುವುದಿಲ್ಲ ಸ್ವಲ್ಪ ಸುಧಾರಿಸಿಕೊಂಡ ಮೇಲೆ ಹೋಗೋಣ ಎಂದು ಮತ್ತೆ ಸುಳ್ಳು ಹೇಳಿದಳು.

ನೀನು ಹೇಳುತ್ತಿರುವುದು ಸುಳ್ಳು. ಅವರನ್ನು ನೀವು ಆಸ್ಪತ್ರೆಗೆ ಸೇರಿಸಿಲ್ಲ, ಆಶ್ರಮಕ್ಕೆ ಸೇರಿಸಿದ್ದೀರಿ. ಆಶ್ರಮದಿಂದ ಈಗ ತಾನೆ ಫೋನ್ ಮಾಡಿದ್ದರು. ನಾನು ಫೋನಿನಲ್ಲಿ ಅವರೊಂದಿಗೆ ಮಾತನಾಡಿದೆ. ಅವರು ನನಗೆ ಸತ್ಯವನ್ನು ಹೇಳಿದ್ದಾರೆ ಎಂದು ಮಗಳ ಮೇಲೆ ಕೋಪಗೊಂಡು ದೊಡ್ಡ ಧ್ವನಿಯಲ್ಲೇ ಮಾತನಾಡಿದರು.
ಅದು ಆಶ್ರಮ ಅಲ್ಲಮ್ಮ ಆಸ್ಪತ್ರೆ ಎಂದು ಮತ್ತೆ ಸುಳ್ಳನ್ನ ಹೇಳಿದಳು ಪರಿಮಳ.
ನಾನು ಅವಿದ್ಯಾವಂತೆ ಅಲ್ಲ, ನಾನು ಟೀಚರ್ ಆಗಿ ನಿವೃತ್ತಿಯಾಗಿದ್ದೀನಿ. ನಮಗೂ ಎಲ್ಲ ಗೊತ್ತಾಗುತ್ತೆ. ಈ ರೀತಿ ಸುಳ್ಳು ಯಾಕೆ ಹೇಳುತ್ತೀರಿ? ನಿಮಗೆ ಇದು ಸರಿ ಅನ್ಸುತ್ತ ಎಂದು ಮತ್ತೆ ಚಂದ್ರಮ್ಮ ಮಗಳನ್ನು ಪ್ರಶ್ನಿಸಿದಳು.
ಅಷ್ಟರಲ್ಲಿ ಅಲ್ಲಿಗೆ ಬಂದ ಅಳಿಯ ಪ್ರದೀಪ್, ಹಾಗಲ್ಲ ಅತ್ತೆ ಮಾವನವರಿಗೆ ಮನೆಯಲ್ಲಿ ಚಿಕಿತ್ಸೆ ಕೊಡಲು ಆಗುವುದಿಲ್ಲ. ಅದಕ್ಕೆ ಅಲ್ಲಿಗೆ ಸೇರ್ಸಿದ್ದೀವಿ. ಸ್ವಲ್ಪ ದಿನ ಆದ್ಮೇಲೆ ಮನೆಗೆ ಕರ್ಕೊಂಡು ಬರ್ತೀವಿ ಬಿಡಿ, ಎಂದು ವಿಷಯವನ್ನು ತೇಲಿಸಿ ಮಾತನಾಡಿದ.
ಚಂದ್ರಮ್ಮ ಮತ್ತು ವಿಕ್ರಂರಾಯರಿಗೆ ಪರಿಮಳ ಒಬ್ಬಳೇ ಮಗಳು. ರಾಯರು ಕಾರ್ಖಾನೆಯಲ್ಲಿ ಕೆಲಸವನ್ನು ಮಾಡುತ್ತಿದ್ದರು, ಚಂದ್ರಮ್ಮ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಇಬ್ಬರೂ ಸಹ ಅಲ್ಪಸ್ವಲ್ಪ ದುಡಿದು ಸ್ವಂತ ಮನೆಯನ್ನ ಕಟ್ಟಿಸಿಕೊಂಡಿದ್ದಾರೆ. ಒಬ್ಬಳೇ ಮಗಳು ಪರಿಮಳನ್ನು ಪ್ರೀತಿಯಿಂದ ಬೆಳೆಸಿ ಚೆನ್ನಾಗಿ ಓದಿಸಿ, ಅವಳು ಇಷ್ಟಪಟ್ಟ ಪ್ರದೀಪನೊಂದಿಗೆ ಮದುವೆಯನ್ನು ಮಾಡಿಸಿ ಮಗಳು ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ವಿಕ್ರಮರಾಯರಿಗೆ ಇದ್ದಕ್ಕಿದ್ದ ಹಾಗೆ ಲಕ್ವಾ ಹೊಡೆಯಿತು, ಆಸ್ಪತ್ರೆಯಲ್ಲಿ ಹಲವಾರು ದಿನಗಳ ಕಾಲ ಚಿಕಿತ್ಸೆ ಕೊಡಿಸಿದರು ಗುಣಮುಖವಾಗಲಿಲ್ಲ. ಈಗ ಮನೆಯಲ್ಲಿ ಹಾಸಿಗೆ ಮೇಲೆ ಸದಾ ಮಲಗಿರಬೇಕು, ಮಲ ಮೂತ್ರ ಎಲ್ಲವೂ ಅಲ್ಲಿಯೇ ಆಗಬೇಕು, ಚಂದ್ರಮ್ಮ ಪತಿಯ ಸೇವೆಯನ್ನು ಮಾಡುತ್ತಾ ಜೊತೆಗೆ ಮನೆಯ ಕೆಲಸವನ್ನು ಮಾಡಿಕೊಂಡು, ಮೊಮ್ಮಕ್ಕಳ ಆರೈಕೆಯನ್ನು ಮಾಡುತ್ತಿದ್ದಾರೆ.
ಆರಂಭದಲ್ಲಿ ಪರಿಮಳ ಪ್ರದೀಪ ಪ್ರೀತಿಯಿಂದ ರಾಯರನ್ನು ನೋಡಿಕೊಳ್ಳುತ್ತಿದ್ದರು. ಈಗ ತಿರಸ್ಕಾರ ಮಾಡುವುದರ ಜೊತೆಗೆ ಪದೇ ಪದೇ ಬೈಯುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಪ್ರದೀಪ ರಾಯರ ಮೇಲೆ ಸಿಟ್ಟಿನಿಂದ ಕೈ ಮಾಡಿದ, ಈ ಘಟನೆಯನ್ನು ನೋಡಿ ಚಂದ್ರಮ್ಮ ತನ್ನ ಗಂಡನನ್ನು ಕರೆದುಕೊಂಡು ಆಶ್ರಮಕ್ಕೆ ಹೋಗುವುದಾಗಿ ಬೆದರಿಕೆ ಹಾಕಿದರು. ಆಗ ಮಗಳು ಅಳಿಯ ಅಮ್ಮನನ್ನು ಸಮಾಧಾನ ಮಾಡಿದರು, ಕಾರಣ ಮನೆಯಲ್ಲಿ ಅಮ್ಮ ಇಲ್ಲದಿದ್ದರೆ ಕೆಲಸ ಮಾಡುವವರು ಯಾರು ಇಲ್ಲ. ಅದಕ್ಕಾಗಿ ಉಪಾಯವನ್ನು ಮಾಡಿ ಆಸ್ಪತ್ರೆ ಸೇರಿಸುವ ನೆಪದಲ್ಲಿ ರಾಯರನ್ನು ಮನೆಯಿಂದ ಕರೆದುಕೊಂಡು ಹೋದರು. ಮನೆಯಲ್ಲಿ ರಾಯರನ್ನು ಆಸ್ಪತ್ರೆ ಸೇರಿಸಿರುವುದಾಗಿ ಹೇಳಿ ನಂಬಿಸಿದ್ದರು. ಆಶ್ರಮದಿಂದ ಫೋನು ಮಾಡಿದ ಸಂದರ್ಭದಲ್ಲಿ ಚಂದ್ರಮ್ಮ ಮಾತನಾಡಿ ವಿಷಯವನ್ನು ತಿಳಿದುಕೊಂಡು ಬಿಟ್ಟರು. ಇದರಿಂದ ಬೇರೆ ದಾರಿ ಇಲ್ಲದೆ ಚಿಕಿತ್ಸೆಗಾಗಿ ಅಲ್ಲಿ ಸೇರಿಸಿದ್ದೇವೆ ಎಂದು ಇಬ್ಬರೂ ಸುಳ್ಳು ಹೇಳಿದರು. ಆದರೆ ಚಂದ್ರಮ್ಮನಿಗೆ ಸತ್ಯ ಗೊತ್ತಾಯಿತು. ತಾನು ಸಹ ಆಶ್ರಮಕ್ಕೆ ಹೋಗುವುದಾಗಿ ಹೇಳಿದರು. ಇದಕ್ಕೆ ಪರಿಮಳ ಬೇಡಮ್ಮ ನೀನು ಇರು ಅಪ್ಪ ಅಲ್ಲೇ ಇರಲಿ ಎಂದು ಹೇಳಿದಳು.
ಮಾತು ಕೇಳುತ್ತಿದ್ದಂತೆ ಚಂದ್ರಮ್ಮ ಯನಿಗೆ ತಮ್ಮ ಹೊಟ್ಟೆಯಲ್ಲಿದ್ದ ಸಂಕಟ ಸಿಟ್ಟಿನ ಮೂಲಕ ಹೊರಬಂದು ಮಾತನಾಡಿಸಿತು.
ಹೌದು ನಾನು ನಿಮಗೆ ಬೇಕು. ಏಕೆಂದರೆ, ನಿಮ್ಮ ಸೇವೆ ಮಾಡುವವರು ಯಾರು ಇಲ್ಲ, ಅವರು ಬೇಡ. ಏಕೆಂದರೆ ನಿಮಗೆ ಅವರಿಂದ ಏನು ಉಪಯೋಗ ಇಲ್ಲ. ನಿಮ್ಮ ಸ್ವಾರ್ಥ ನಮಗೆ ಅರ್ಥ ಆಗೋದಿಲ್ಲ ಎಂದು ಭಾವಿಸಿದ್ದೀರಿ, ನನಗೆ ಇವೆಲ್ಲ ಬೇಡ ನಾನು ಆಶ್ರಮಕ್ಕೆ ಹೋಗ್ತೀನಿ ಎಂದು ಹಠ ಹಿಡಿದರು.
ಮಾರನೆಯ ದಿನ ಚಂದ್ರಮ್ಮ ಹೇಳದೇ ಕೇಳದೆ, ಮನೆಯಿಂದ ಆಶ್ರಮದ ಕಡೆಗೆ ಹೊರಟರು, ಆಶ್ರಮವನ್ನು ತಲುಪುತ್ತಿದ್ದಂತೆ ತನ್ನ ಪತಿಗಾಗಿ ಹುಡುಕಾಡಿದರು, ಆಶ್ರಮದ ಹಾಲಿನಲ್ಲಿ ಮೂಲೆಯೊಂದರ ಮಂಚದ ಮೇಲೆ ರಾಯರು ಮಲಗಿದ್ದರು, ಅವರ ಕಣ್ಣು ಚಂದ್ರಮ್ಮನಿಗಾಗಿ ಹುಡುಕಾಡುತ್ತಿದೆ ಎನ್ನುವಂತೆ ಕಾಣುತ್ತಿತ್ತು. ಚಂದ್ರಮ್ಮನನ್ನು ನೋಡುತ್ತಿದ್ದಂತೆ ಅವರ ದುಃಖದ ಕಟ್ಟೆ ಒಡೆದು ಬಂತು. ಕಣ್ಣೀರು ಧಾರಾಕಾರವಾಗಿ ಹರಿಯುತು. ಚಂದ್ರಮ್ಮ ತನ್ನ ಸೆರಗಿನಿಂದ ಗಂಡನ ಕಣ್ಣೀರನ್ನು ಒರೆಸುತ್ತಾ, ಇನ್ನು ನೀವು ಧೈರ್ಯವಾಗಿರಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳುತ್ತಾ ಹಣೆಯನ್ನ ಸವರಿದರು. ರಾಯರು ಬಲವಂತದಿಂದ ತಮ್ಮ ಕೈಯನ್ನ ತೆಗೆದು ಚಂದ್ರಮ್ಮನ ಕೈಯನ್ನು ಹಿಡಿದುಕೊಂಡು ತಮ್ಮ ಕಣ್ಣಿಗೆ ಒತ್ತಿಕೊಂಡರು.
ಮಾರನೆಯ ದಿನ ಚಂದ್ರಮ್ಮ ಮಗಳು ಅಳಿಯನಿಗೆ ಫೋನ್ ಮಾಡಿ ಆಶ್ರಮಕ್ಕೆ ಕರೆಸಿಕೊಂಡು ತಮ್ಮ ಎಲ್ಲ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದು ಕೊಡುವುದಾಗಿ ಅದಕ್ಕೆ ಬೇಕಾದ ಪತ್ರವನ್ನು ಸಿದ್ಧಪಡಿಸಿಕೊಂಡು ಬನ್ನಿ ನಮಗೂ ನಿಮಗೂ ಇನ್ನೂ ಋಣ ಇರುವುದಿಲ್ಲ ಎಂದು ನಿಷ್ಟೂರವಾದ ಧ್ವನಿಯಲ್ಲಿ ಹೇಳಿದರು. ಮಗಳು ಅಳಿಯ ಏನೇನೋ ಸಬೂಬು ಹೇಳಲು ಪ್ರಯತ್ನಿಸಿದರು. ಆದರೆ ಅವರ ಯಾವ ಮಾತನ್ನು ಕೇಳುವ ತಾಳ್ಮೆಯು ಮತ್ತು ಆಸಕ್ತಿಯು ತಾಯಿಯಲ್ಲಿ ಇರಲಿಲ್ಲ.
ಪರಿಮಳ ಮತ್ತು ಪ್ರದೀಪ ಆಶ್ರಮದಿಂದ ಸ್ವಲ್ಪ ದೂರ ಬರುತ್ತಿದ್ದಂತೆ ಮತ್ತೆ ಕರೆದ ಚಂದ್ರಮ್ಮ ಇನ್ನೊಂದು ಮಾತು ಹೇಳೋದಿತ್ತು ಮರೆತುಬಿಟ್ಟಿದ್ದೆ, ಅದೇನೆಂದರೆ ನಾಳೆ ನಾವು ಸತ್ತು ಹೋದರು ನೀವು ಬಂದು ನಮ್ಮ ಸಂಸ್ಕಾರವನ್ನು ಮಾಡುವುದು ಬೇಡ, ಅದಕ್ಕೂ ನಾನು ಇಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದೇನೆ. ನೀವು ನೆಮ್ಮದಿಯಿಂದ ಇರಿ ಎಂದು ಹೇಳುತ್ತಾ ನಿಮಿಷವು ಅಲ್ಲಿ ನಿಲ್ಲದೆ ಮುಂದೆ ಸಾಗಿದರು.
ಪರಿಮಳ ಮತ್ತು ಪ್ರದೀಪನಿಗೆ ನಾಚಿಕೆಯಾಗಿ ತಲೆಬಗ್ಗಿಸಿಕೊಂಡು ಇವರ ಮುಂದೆ ನಿಂತರು, ಆದರೆ ಈಕೆ ಮಾತ್ರ ಇವರಿಗೆ ಬೆನ್ನು ಮಾಡಿ ಮುಂದೆ ಸಾಗುತ್ತಿದ್ದರು.
– ಕೆ ಎಸ್ ನಾಗರಾಜ್, ಬೆಂಗಳೂರು




