ದೇಶದ ಅಭಿವೃದ್ಧಿ ಪಥದಲ್ಲಿ ಸರ್ಕಾರಿ ಮಹಿಳಾ ನೌಕರರ ಕೊಡುಗೆ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ
ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘದಿಂದ ಆಯೋಜನೆ
ಬೆಂಗಳೂರು: ಕೊಂಡಜ್ಜಿ ಬಸಪ್ಪ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘ(ರಿ) ರಾಜ್ಯ ಘಟಕವತಿಯಿಂದ ಭಾರತದ ಅಭಿವೃದ್ಧಿ ಪಥದಲ್ಲಿ ಸರ್ಕಾರಿ ಮಹಿಳಾ ನೌಕರರ ಕೊಡುಗೆಗಳು ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಶೈಕ್ಷಣಿಕ ಕಿರುಚಿತ್ರ ಬಿಡುಗಡೆ ಮತ್ತು ಪುಸ್ತಕಗಳ ಬಿಡುಗಡೆ ಸಂಘಧ ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಸಾಹಿತ್ಯ ವೇದಿಕೆ ಲೋಗೋ ಬಿಡುಗಡೆ, “ನುಡಿಮುತ್ತು” ಸಿನಿಮಾದ ಪೋಸ್ಟರ್ ಬಿಡುಗಡೆ, ಸಾಧಕ ನೌಕರರಿಗೆ ಸನ್ಮಾನ ಸಾಧನೆ ಮಾಡಿದ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಇದೇ ವೇದಿಕೆಯಲ್ಲಿ ನೆರವೇರಿದವು.
ಕಾರ್ಯಕ್ರಮಕ್ಕೆ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವೆ ರಾಣಿ ಸತೀಶ್, ಸಾಹಿತಿ ಪ್ರೊ.ರಾಧಾಕೃಷ್ಣ, ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ನಿವೃತ್ತ ಐ.ಎ.ಎಸ್.ಅಧಿಕಾರಿ ಮಮತಾ, ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ರಾಷ್ಟ್ರದ್ಯಕ್ಷೆ ಡಾ.ಲತಾ ಮುಳ್ಳೂರ, ಇತಿಹಾಸ ಪ್ರಾಧ್ಯಪಕರಾದ ಪ್ರೊಅನುರಾಧ, ಕೊಪ್ಪಳ ಜಿಲ್ಲಾ ಸಿ.ಇ.ಓ.ಮಲ್ಲಿಕಾರ್ಜುನ್, ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘದ ರಾಜ್ಯಾಧ್ಯಕ್ಷರಾದ ರಮಾ ಆರ್., ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಸಿ.ವಿ.ಶೈಲಜ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಿನೇಶ್ ಗುಂಡೂರಾವ್ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಜೊತೆಯಲ್ಲಿ ಕೊಡುಗೆ ನೀಡಿದ್ದಾರೆ. ಮಹಿಳೆಯರು ಸಾಮಾನತೆ ಮತ್ತು ಸಮಾನ ಅವಕಾಶ ಸಿಗಬೇಕು. ಪುರುಷರ ಚಿಂತನೆ ಮತ್ತು ಮನಸ್ಥಿತಿ ಬದಲಾಗಬೇಕು. ಮಹಿಳೆಯರ ಕುರಿತು ಗೌರವ ಬೆಳಸಿಕೊಳ್ಳಬೇಕು ಎಂದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸಮಾಜದಲ್ಲಿ ಬದಲಾವಣೆಯಾದಾಗ ಪರ, ವಿರೋಧ ಇರುತ್ತದೆ. ಮಹಿಳೆಯರ ಪ್ರತಿಭೆಗೆ ಸಮಾನ ಅವಕಾಶ ನೀಡಿ, ಪ್ರೋತ್ಸಾಹ ನೀಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉತ್ತಮ ಮಹಿಳಾ ಅಧಿಕಾರಿ ಮತ್ತು ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಖ್ಯ ಕಾರ್ಯದರ್ಶಿಯಾಗಿ ಮಹಿಳೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
12ನೇ ಶತಮಾನದ ಕ್ರಾಂತಿಯೋಗಿ ಬಸವೇಶ್ವರರು ಅನುಭವ ಮಂಟಪದಲ್ಲಿ 60 ಮಹಿಳಾ ಸದಸ್ಯರಿದ್ದರು, ತಳ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಮಹಿಳೆಯರು ಭಯಭೀತಿ ಇಲ್ಲದೇ, ಧೈರ್ಯವಾಗಿ ಕೆಲಸ ಮಾಡಲು ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಪುರುಷರು ನಾನೇ ಮೇಲು ಎಂಬ ಭಾವನೆ ಬೀಡಬೇಕು, ಮಹಿಳಾ ಅಧಿಕಾರಿ ನಿರ್ಭೀತಿಯಿಂದ ಕೆಲಸ ಮಾಡಲು ಪುರುಷರು ಸಹಕಾರ ನೀಡಬೇಕು ಎಂದರು.
ಮಾರ್ಗರೇಟ್ ಆಳ್ವ ಮಾತನಾಡಿ, ಮಹಿಳೆಯರ ಸಾಧನೆಗಳಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಒಂದು ಸಾರಿ ಸರ್ಕಾರಿ ಕೆಲಸ ಸಿಕ್ಕಿದ್ದರೆ ಪಿಂಚಣಿ ಮತ್ತು ಎಲ್ಲ ಸೌಲವತ್ತು ಸಿಗುತ್ತದೆ. ಸರ್ಕಾರಿ ನೌಕರಿ ಸಿಕ್ಕಿದರೆ ಬಹಳ ಖುಷಿಪಡುತ್ತಾರೆ ಅಂತ ತಿಳಿದುಕೊಂಡಿರುತ್ತೇವೆ. ಆದರು ಸರ್ಕಾರಿ ನೌಕರರು ಸಂಕಷ್ಟ, ಸಮಸ್ಯೆಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಮಹಿಳೆಯರು ಗಂಡ, ಮನೆ ಮಕ್ಕಳು ನೋಡಿಕೊಂಡು ಕೆಲಸಕ್ಕೆ ಹೋಗಬೇಕು. ಮಹಿಳೆಯರು ಕಛೇರಿ ಕೆಲಸಕ್ಕೆ ಬಂದರೆ ಶಿಸ್ತ್ರು ಬದ್ದತೆ ಮತ್ತು ಕೆಲಸ ಶೀಘ್ರಗತಿಯಲ್ಲಿ ಆಗುತ್ತದೆ. ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮೆಟರ್ನಿನಿಟಿ ಲೀವ್ ಎಲ್ಲವು ಸಿಗುತ್ತದೆ, ನಾನು ಕೇಂದ್ರ ಸಚಿವೆಯಾಗಿದ್ದಾಗ ಗಂಡಸರು ಸಹ ಮೆಟರ್ನಿಟಿ ನಮಗೂ ಕೊಡಿ ಎಂದು ಹೇಳಿದ್ದರು ಎಂದರು.
ವರ್ಗಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ಸಮಸ್ಯೆಯಾಗುತ್ತದೆ. ಸಮಸ್ಯೆ ನಿವಾರಣೆಗಾಗಿ ಗಂಡ, ಹೆಂಡತಿಗೆ ಒಂದು ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ನಿರ್ಣಯ ತರಲಾಯಿತು. ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯ ವ್ಯವಸ್ಥೆಗಳು ಇಲ್ಲ ಮತ್ತು ಕಡ್ಡಾಯವಾಗಿ ಎಲ್ಲ ಇಲಾಖೆಗಳು ಸೌಲಭ್ಯ ನೀಡಬೇಕು. ಲ್ಯಾಟರಲ್ ಎಂಟ್ರಿ ಮೂಲಕ ನೇಮಕಾತಿ ಮಾಡುತ್ತಿದ್ದಾರೆ ಇದು ತಪ್ಪು ಎಂದರು.
ರಾಣಿ ಸತೀಶ್ ಮಾತನಾಡಿ, ಮಹಿಳಾ ನೌಕರರ ಸಮಸ್ಯೆಗಳನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು. ಕುಟುಂಬ ನಿರ್ವಹಣೆ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಮಹಿಳೆಯರು ಶ್ರಮಿಸುತ್ತಿದ್ದಾರೆ ಎಂದರು.
ಮಹಿಳೆಯರ ಮೇಲೆ ಸಾವಿರಾರು ವರ್ಷಗಳಿಂದ ದೌರ್ಜನ್ಯ ಮಾಡುತ್ತಿದ್ದರು. 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣರವರು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಮಹಿಳೆಯರಿಗೆ ಸಂವಿಧಾನಬದ್ಧ ಸಮಾನ ಅವಕಾಶ ಕೊಟ್ಟರು ಎಂದರು.
ರಾಣಿ ಅಬ್ಬಕ್ಕ , ಕಿತ್ತೂರು ಚನ್ನಮ್ಮ, ಓನಕೆ ಒಬ್ಬವ್ವ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ದೇಶದ ಬೆಳವಣಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ಕಾರ್ಯನಿರ್ವಹಿಸುವಲ್ಲಿ ಮಹಿಳೆಯರಿಗೆ ಸಂಕಷ್ಟ ಹೆಚ್ಚು, ಮಹಿಳೆಯರ ಸುರಕ್ಷತೆಗೆ ಕಠಿಣ ಕಾನೂನು ತರಬೇಕು ಎಂದರು.
ಬಿ.ಕೆ.ಹರಿಪ್ರಸಾದ್ ಮಾತನಾಡಿ, ಶಿಕ್ಷಣದಿಂದ ವಂಚಿತರಾದ ಮಹಿಳೆಯರಿಗೆ ಶಿಕ್ಷಣದಲ್ಲಿ ಅವರಿಗೆ ಅವಕಾಶ ನೀಡಿದವರು ಸಾವಿತ್ರಿಬಾಯಿ ಪುಲೆರವರು. ಸ್ವಾತಂತ್ರ್ಯ ಪೂರ್ವದಲ್ಲಿ ಶೇಕಡ 11ರಷ್ಟು ಸಾರಕ್ಷತೆ ಇತ್ತು ಇಂದು ಶೇಕಡ 71ರಷ್ಚು ಸಾರಕ್ಷತೆ ಇದೆ. ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಅವಕಾಶವಿದೆ. ಡಾ.ಬಿ.ಆರ್.ಅಂಬೇಡ್ಕರ್ ರವರು ಮಹಿಳೆಯರ ಪರ ಕಾನೂನುಗಳನ್ನು ತಂದರು ಎಂದರು.
2010ರಲ್ಲಿ ಸೋನಿಯಗಾಂಧಿ ಅವರು ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಲೋಕಸಭಾ, ವಿಧಾನಸಭೆ ಮತ್ತು ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 33ರಷ್ಟು ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎಂದು ಮಂಡನೆ ಕಾರಣಾಂತರಗಳಿಂದ ಲೋಕಸಭೆಯಲ್ಲಿ ಪಾಸ್ ಆಗಲಿಲ್ಲ ಎಂದರು.
ರಾಷ್ಟ್ರದಲ್ಲಿ ಆರ್ಥಿಕ ಸಮಸ್ಯೆ ಬಂದಾಗ ಮಹಿಳೆಯರು ಶೇಕಡ 28ರಷ್ಟು ಉಳಿತಾಯದ ಹಣ ಇತ್ತು. ಆರ್ಥಿಕ ಸಂಕಷ್ಟ ಸಮಯದಲ್ಲಿ ಸಹ ಉಳಿತಾಯದ ಹಣವನ್ನು ಕುಟುಂಬದ ನಿರ್ವಹಣೆ ಮಾಡಲು ಮಹಿಳೆಯರಿಗೆ ಸಾಧ್ಯವಾಯಿತು ಎಂದರು.
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಗೆ 70 ಲಕ್ಷ ದತ್ತಿ ಹಣ ಕೊಡುಗೆಯಾಗಿ ನೀಡಿದ ಶಿಕ್ಷಣ ಮಾತೆ ಲೂಸಿಯಮ್ಮರವರಿಗೆ ಸನ್ಮಾನಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಪ್ರೊ. ಉಷಾಮಾಲಿನಿ, ಹಿರಿಯ ಉಪಾಧ್ಯಕ್ಷರು ಕೆ. ಎಸ್. ರೇಖಾ, ಸಹಕಾರ್ಯದರ್ಶಿ ಅಪೂರ್ವ ಎಸ್. ಕೆ, ಉಪಾಧ್ಯಕ್ಷರು ಸುಮಾ ಎಚ್. ಜಿ. ಖಜಾಂಜಿ, ಡಾ. ಪೂರ್ಣಿಮಾ ಎಸ್. ವಿ, ದಾಕ್ಷಾಯಿಣಿ ಎಚ್. ಎನ್., ದಾಕ್ಷಾಯಿಣಿ ವಿ., ವೇದಾವತಿ ಜೆ. ಜಿ., ಡಾ. ಆಶಾಬೇಗಂ ಅ. ಮುನವಳ್ಳಿ, ಸುಮತಿ ಎಂ. ಜಿ., ಡಾ. ಸೀಮಾ ಕೌಸರ್, ಉಷಾರಾಣಿ ಡಿ., ಜಿ. ಆರ್. ರಾಧಾ, ಪದ್ಮಶ್ರೀ ಆರ್., ನೇತ್ರಾವತಿ ಯು., ವಿಜಯಲಕ್ಷ್ಮಿ ಎನ್. ರೊಟ್ಟಿ, ಸುಪ್ರಿತಾ ಕೆ., ಕೀರ್ತಿಕುಮಾರಿ ಜೆ. ಎಂ., ಯಮುನಾ ಸಿ., ಸುನಿತಾ ವಿ. ಆರ್, ಲಲಿತಾ ಪಾಟೀಲ ಮೊದಲಾದವರು ಹಾಜರಿದ್ದರು.









