ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್, ಉದ್ದು ಖರೀದಿ: ದಿವ್ಯ ಪ್ರಭು

2 years ago

ಧಾರವಾಡ: 2024-25 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ.4892 ರಂತೆ ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಪ್ರತಿ ಕ್ವಿಂಟಾಲ್‍ಗೆ ರೂ.7,400 ರಂತೆ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕಪೋರ್ಸ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಬಲ ಬೆಲೆಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಉತ್ಪನ್ನವನ್ನು ಹಾಗೂ ಉದ್ದಿನಕಾಳು ಉತ್ಪನ್ನಗಳ ಮಾರಾಟಕ್ಕಾಗಿ ರೈತರಿಗೆ ನೋಂದಣಿ ಮಾಡಿಕೊಳ್ಳಲು ಸೆ. 5 ರಿಂದ ಅಕ್ಟೋಬರ್ 19 ರ (45 ದಿನಗಳ) ವರೆಗೆ ಮತ್ತು  ಧಾರವಾಡ ಜಿಲ್ಲೆಯ ನೋಂದಾಯಿತ ರೈತರಿಂದ ಮಾತ್ರ ಸೆಪ್ಟೆಂಬರ 05, 2024 ರವರೆಗೆ (90 ದಿನಗಳು) ಖರೀದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಸೋಯಾಬೀನ್ ಹಾಗೂ ಉದ್ದಿನಕಾಳು ಉತ್ಪನ್ನಗಳನ್ನು ಖರೀದಿಸಲು ಸರ್ಕಾರದಿಂದ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಮತ್ತು ನವಲಗುಂದ ತಾಲೂಕುಗಳ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

ಸೋಯಾಬೀನ್ ಖರೀದಿ ಕೇಂದ್ರಗಳ ವಿವರ: ಧಾರವಾಡ ತಾಲೂಕಿನಲ್ಲಿ ಧಾರವಾಡದ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 9916259625) ಮತ್ತು ಉಪ್ಪಿನಬೇಟಗೇರಿಯ ಪಿ.ಕೆ.ಪಿ.ಎಸ್ (ದೂ. ಸಂ: 9620048221), ಹುಬ್ಬಳ್ಳಿಯ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 6360506861) ಮತ್ತು ನೂಲ್ವಿಯ ಪಿ.ಕೆ.ಪಿ.ಎಸ್ (ದೂ. ಸಂ: 9743836535), ಕಲಘಟಗಿ ತಾಲೂಕನಲ್ಲಿ ಕಲಘಟಗಿಯ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 8722006738), ಹುಲ್ಲಂಬಿಯ ಕೃಷಿ ಜ್ಯೋತಿ ಎಫ್.ಪಿ.ಓ (ದೂ. ಸಂ: 7676236737), ಹಿರೇಹೊನ್ನಳ್ಳಿಯ ಚನ್ನಬಸವೇಶ್ವರ ಎಫ್.ಪಿ.ಓ (ದೂ. ಸಂ: 9591329847) ಹಾಗೂ ಕುಂದಗೋಳ ತಾಲೂಕಿನಲ್ಲಿ ಯರಗುಪ್ಪಿಯ ಪಿ.ಕೆ.ಪಿ.ಎಸ್ (ದೂ. ಸಂ: 9845169206) ಖರೀದಿ ಸಂಸ್ಥೆಗಳಾಗಿರುತ್ತವೆ.

ಉದ್ದಿನಕಾಳು ಖರೀದಿ ಕೇಂದ್ರಗಳ ವಿವರ: ಧಾರವಾಡ ತಾಲೂಕಿನಲ್ಲಿ ಧಾರವಾಡದ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 9916259625) ಮತ್ತು ಉಪ್ಪಿನಬೇಟಗೇರಿಯ ಪಿ.ಕೆ.ಪಿ.ಎಸ್ (ದೂ. ಸಂ: 9620048221), ಹುಬ್ಬಳ್ಳಿ ತಾಲೂಕಿನಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 6360506861), ಕುಂದಗೋಳ ತಾಲೂಕಿನಲ್ಲಿ ಯರಗುಪ್ಪಿಯ ಪಿ.ಕೆ.ಪಿ.ಎಸ್ (ದೂ. ಸಂ: 9845169206), ನವಲಗುಂದ ತಾಲೂಕಿನಲ್ಲಿ ಅಣ್ಣಿಗೇರಿಯ ಟಿ.ಎ.ಪಿ.ಸಿ.ಎಮ್.ಎಸ್ (ದೂ. ಸಂ: 8861008191) ಖರೀದಿ ಸಂಸ್ಥೆಗಳಾಗಿವೆ. 

ಹೆಚ್ಚುವರಿ ಹೆಸರುಕಾಳು ಖರೀದಿ ಕೇಂದ್ರ: ಹೆಚ್ಚುವರಿ ಖರೀದಿ ಕೇಂದ್ರಕ್ಕೆ ಬೇಡಿಕೆ ಇರುವುದರಿಂದ ಕೃಷಿ ಸಮೃದ್ದಿ ರೈತ ಉತ್ಪಾದಕರ ಕಂಪನಿ ಲಿ, ಮೊರಬ ಇವರ ಮನವಿಯನ್ನು ಪರಿಶೀಲಿಸಿ, ರೈತ ಉತ್ಪಾದಕರ ಕಂಪನಿಯು ಈ ಹಿಂದೆ ಮೊರಬ ಮತ್ತು ಶಿರಕೋಳ ಗ್ರಾಮದಲ್ಲಿ ಖರೀದಿ ಕಾರ್ಯನಿರ್ವಹಿಸಿರುವ ಅನುಭವ ಇದ್ದು, ಖರೀದಿ ಕೇಂದ್ರ ತೆರೆಯಲು ಎಲ್ಲಾ  ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಕಂಪನಿಯು ಸದೃಡವಾಗಿರುವುದನ್ನು ದೃಢಿಕರಿಸಿ ಪ್ರಸ್ತುತ ಮೊರಬ ಗ್ರಾಮದಲ್ಲಿ ಈಗಾಗಲೇ ಪಿಕೆಪಿಎಸ್ ಮೊರಬ, ಇವರಿಗೆ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿರುವುದರಿಂದ ಕೃಷಿ ಸಮೃದ್ದಿ ರೈತ ಉತ್ಪಾದಕರ ಕಂಪನಿ ಲಿ, ಮೊರಬ (ದೂ. ಸಂ: 9620107330) ಇವರಿಗೆ ಶಿರಕೋಳ ಗ್ರಾಮದಲ್ಲಿ ಹೆಚ್ಚುವರಿಯಾಗಿ ಹೆಸರುಕಾಳು ಖರೀದಿ ಕೇಂದ್ರ ತೆರೆದು ಕಾರ್ಯನಿರ್ವಹಿಸಲು ಟಾಸ್ಕ್ ಪೊರ್ಸ ಸಮಿತಿಯಿಂದ ಅನುಮತಿಸಲಾಗಿದೆ.

ಉತ್ಪನ್ನವನ್ನು ಖರೀದಿಸಲು ಅಗತ್ಯವಿರುವ ದಾಖಲೆಗಳು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್ ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ನೋಂದಣಿಗಾಗಿ ತಮ್ಮ ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಸಲ್ಲಿಸಬೇಕು. ಮತ್ತು ಸರ್ಕಾರವು ಸೂಚಿಸಿರುವ ಉತ್ಪನ್ನ ಮಾರಾಟಕ್ಕೆ ಬರುವ ಜಮೀನುಗಳ ಮಾಲೀಕರು ಬಯೋ ಮೇಟ್ರಿಕ್ ನೀಡಬೇಕು. ಮತ್ತು ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಖರೀದಿಗೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ ಮತ್ತು ಉದ್ದಿನಕಾಳು ಉತ್ಪನ್ನವನ್ನು ಖರೀದಿಸಲು ಅನುಸರಿಸುವ ಕ್ರಮಗಳು: ರೈತರ ನೋಂದಣಿಗೆ ಕಾಲಾವಧಿಯನ್ನು ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿಂದ 45 ದಿನಗಳವರೆಗೆ ಹಾಗೂ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಸೋಯಾಬೀನ್ ಪ್ರತಿ ಎಕರೆಗೆ 05 ಕ್ವಿಂಟಾಲ್‍ನಂತೆ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ ಮತ್ತು ಪ್ರತಿ ರೈತರಿಂದ ಉದ್ದಿನ ಕಾಳು ಪ್ರತಿ ಎಕರೆಗೆ 02 ಕ್ವಿಂಟಾಲ್‍ನಂತೆ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 10 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.

ಖರೀದಿ ಕೇಂದ್ರಗಳಲ್ಲಿ ಸೋಯಾಬೀನ್ ಮತ್ತು ಉದ್ದಿನಕಾಳು ಖರೀದಿಸುವ ಪೂರ್ವದಲ್ಲಿ ರೈತರ ನೋಂದಣಿಯನ್ನು ಎನ್‍ಐಸಿ ಸಂಸ್ಥೆಯು ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಬೆಳೆಗಳ ಉತ್ಪನ್ನವನ್ನು ಖರೀದಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಸೂಕ್ತವಾಗಿ ಉನ್ನತ್ತಿಕರಿಸಿ, ಬಯೋಮೇಟ್ರಿಕ್ ಮೂಲಕ ಸೋಯಾಬೀನ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆಯಡಿ ನೊಂದಾಯಿಸಲು ಬಳಸಬೇಕು. ಹಾಗೂ ಎನ್‍ಐಸಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸದರಿ ನೋಂದಣಿ ತಂತ್ರಾಂಶವು ಈಗಾಗಲೇ ಫ್ರೂಟ್ಸ್ ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದೆ. ಫ್ರೂಟ್ಸ್ ದತ್ತಾಂಶದಲ್ಲಿ ರೈತರಿಗೆ ಸಂಬಂಧಿಸಿದ ವಿವರಗಳನ್ನು ಭೂಮಿ, ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ವಿವರಗಳನ್ನು ಇಂದೀಕರಿಸಲಾಗಿದೆ.

ಬೆಂಬಲಬೆಲೆ ಯೋಜನೆಯಡಿ ನೊಂದಣಿ ಮಾಡಲು ಸಿದ್ಧಪಡಿಸಿದ ತಂತ್ರಾಂಶಕ್ಕೆ ವಿದ್ಯುನ್ಮಾನ ರೀತಿಯಲ್ಲಿ ಒದಗಿಸಲಾಗುತ್ತದೆ. ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದ ನಂತರ ಎನ್‍ಐಸಿ ತಂತ್ರಾಂಶದಿಂದ ನ್ಯಾಫೆಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿಯನ್ನು ಒದಗಿಸಲಾಗುವದು. ನ್ಯಾಫೆಡ್ ಸಂಸ್ಥೆಯು ತಮ್ಮ ತಂತ್ರಾಂಶದಲ್ಲಿ ಈ ಮಾಹಿತಿಯನ್ನು ಬಳಸಿ ರೈತರಿಂದ ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಕೇಂದ್ರಗಳಿಂದ ಖರೀದಿಸಲಾಗುವುದು.

ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳಂತೆ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಪ್ರಮಾಣದ ಮಾಲ್ಯದ ಹಣವನ್ನು ಡಿಬಿಟಿ ಮೂಲಕ ಜಮಾ ಆಗುವಂತೆ ಪಾವತಿ ಮಾಡಲಾಗುವುದು. ಹಾಗೂ ಆವರ್ತ ನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.

ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿಸದಂತೆ, ಹಾಗೂ ಖರೀದಿ ಸಂಸ್ಥೆಗಳಲ್ಲಿ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿ ಹಾಗೂ ಆವರ್ತನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಕೇಂದ್ರ ಸರ್ಕಾರ ಘೋಷಿಸಿರುವ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.ಗುಣಮಟ್ಟದ ಸೋಯಾಬಿನ್ ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್‍ಗೆ ರೂ. 4,892 ರಂತೆ ಮತ್ತು ಉದ್ದಿನಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್‍ಗೆ ರೂ.7,400 ರಂತೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುವುದು ತಿಳಿಸಿದ್ದಾರೆ.

ಎಫ್.ಎ.ಕ್ಯೂ. ಗುಣಮಟ್ಟದ ಸೋಯಾಬೀನ್ ಮತ್ತು ಉದ್ದಿನಕಾಳು ಉತ್ಪನ್ನ ಖರೀದಿ ಕೇಂದ್ರ ತೆರೆದು ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಟಾಸ್ಕಫೋರ್ಸ ಸಮಿತಿಯು ಒಪ್ಪಿ ಸರ್ವಾನುಮತದಿಂದ ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply