ಪ್ರೊ.ಎಲ್.ಎಸ್.ಶೇಷಗಿರಿರಾವ್ ಜನ್ಮ ಶತಮಾನೋತ್ಸವ ಸಮಾರೋಪ
ಸಾಧಕರಿಗೆ ಎಲ್.ಎಸ್.ಎಸ್.ಗೌರವಾರ್ಪಣೆ
ಬೆಂಗಳೂರು: ಎಲ್.ಎಸ್.ಶೇಷಗಿರಿರಾವ್ ಅವರ ಜನ್ಮಶತಮಾನೋತ್ಸವ ಸರ್ಕಾರ ಅಚರಣೆ ಮಾಡಬೇಕು. ನಾನು ಸಾಹಿತ್ಯ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಶೇಷಗಿರಿರಾವ್ ಅವರು ಪ್ರೇರಣೆಯಾಗಿದ್ದಾರೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ನಗರದ ಕನ್ನಡ ಭವನದಲ್ಲಿ ಕನ್ನಡ ಗೆಳಯರ ಬಳಗದ ವತಿಯಿಂದ ಪ್ರೊ. ಎಲ್.ಎಸ್.ಶೇಷಗಿರಿರಾವ್ ಜನ್ಮ ಶತಮಾನೋತ್ಸವ ಸಮಾರೋಪ ಮತ್ತು ಎಲ್.ಎಸ್.ಎಸ್.ಜಾಲತಾಣ ಹಾಗೂ ಕನ್ನಡ ವಿಶೇಷ ಸಾಹಿತ್ಯ ಸಿರಿ ಗ್ರಂಥ ಲೋಕರ್ಪಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಜನ್ಮಶತಮಾನೋತ್ಸವ ಗೌರವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಸಿಗೆ ನೀರು ಹಾಕುವ ಮೂಲಕ ವೀರಪ್ಪ ಮೊಯ್ಲಿ, ನಾಡೋಜ ಗೊ.ರು ಚನ್ನಬಸಪ್ಪ, ಡಾ.ಸಿ.ಎನ್.ರಾಮಚಂದ್ರನ್, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಭಾರತಿ ಶೇಷಗಿರಿರಾವ್, ಡಾ.ಆರ್.ಶೇಷಶಾಸ್ತ್ರಿ, ಡಾ.ಟಿ.ಎನ್.ವಾಸುದೇವಮೂರ್ತಿ, ಕನ್ನಡ ಗೆಳಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಉದ್ಘಾಟನೆ ಮಾಡಿದರು.
ಉದ್ಘಾಟನೆ ನಂತರ ಮಾತನಾಡಿದ ವೀರಪ್ಪ ಮೊಯ್ಲಿ, ಎಲ್.ಎಸ್.ಶೇಷಗಿರಿರಾವ್ ಹೆಸರು ಎಂದರೆ ನನಗೆ ರೋಮಾಂಚನ ಹಾಗೂ ನನ್ನನ್ನು ಮುನ್ನಡೆಸಿದ ಮಹಾನ್ ವ್ಯಕ್ತಿತ್ವತ್ವ ಅವರದ್ದು. ನನ್ನ ಕೃತಿಗಳಿಗೆ ಸಂಶೋಧನೆ ಹಾಗೂ ಮಾರ್ಗದರ್ಶನ ನೀಡಿದರು. ನಂತರ ಆ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದ್ದೆ ಎಂದರು.
ಎಲ್.ಎಸ್.ಶೇಷಗಿರಿರಾವ್ ಜನ್ಮಶತಮಾನೋತ್ಸವ ಸರ್ಕಾರ ಅಚರಣೆ ಮಾಡಬೇಕಾಗಿತ್ತು. ಆದರೆ ಸರ್ಕಾರ ಅಚರಣೆ ಮಾಡದಿರುವುದು ವಿಷಾದನೀಯ.ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ ಎಲ್.ಎಸ್.ಶೇಷಗಿರಿರಾವ್ ಕುರಿತು ಸಮಾರಂಭ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಎಲ್ ಎಸ್ ಶೇಷಗಿರಿ ರಾವ್ ಅವರು ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ಸಂದರ್ಭ ಮತ್ತು ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಅವಧಿಯಲ್ಲಿ ಪುಸ್ತಕ ಪ್ರಾಧಿಕಾರ ಮಾಡಿ ಎಲ್.ಎಸ್.ಶೇಷಗಿರಿರಾವ್ ಅವರಿಗೆ ಸಂಪುಟದರ್ಜೆ ಸ್ಥಾನಮಾನ ನೀಡಿ ಅಧ್ಯಕ್ಷರಾಗಿ ನೇಮಕ ಮಾಡಿದೆ ಎಂದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಎಲ್.ಎಸ್.ಶೇಷಗಿರಿರಾವ್ ಅವರು ಭಾಗವಹಿಸಿದ್ದರು. ಭಾರತೀಯ ಸಂಸ್ಕೃತಿಯ ಕುರಿತು ಅಪಾರ ಅಭಿಮಾನ ಹೊಂದಿದ್ದರು. ಎಲ್.ಎಸ್.ಶೇಷಗಿರಿರಾವ್ ಅವರೊಂದಿಗೆ ಅತಿ ಹೆಚ್ಚು ಸಮಯ ಕಳೆದಿರುವ ಕಾರಣದಿಂದ ನನಗೆ ಕೃತಿ ಬರೆಯಲು ಪ್ರೇರಣೆಯಾಯಿತು. ನನ್ನ ಬದುಕಿನ ಉದ್ದಕ್ಕೂ ಯಶ್ವಸಿಯಾಗಲು ಮತ್ತು ಕೀರ್ತಿ ಬರಲು ಎಲ್.ಎಸ್.ಎಸ್.ಹತ್ತಿರದ ನಿಕಟ ಸಂಪರ್ಕದಿಂದ ಸಾಧ್ಯವಾಯಿತು ಎಂದರು.
ರೈತರ ಪರ ಹೋರಾಟ ಮಾಡಬೇಕು ಎಂದು ಹೊರಟೆ. ಆದರೆ ದೇವರಾಜ ಅರಸು ಕರೆದು ರಾಜಕೀಯಕ್ಕೆ ಕರೆತಂದರು. ಮೊದಲನೇ ಬಾರಿಗೆ ಶಾಸಕನಾಗಿ ರಾಜಕೀಯ ಪ್ರವೇಶ ಮಾಡಿದೆ. ಸೆಸ್ ಸಂಗ್ರಹ ಮಾಡಿ ರಾಜ್ಯಾದ್ಯಂತ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಲು ಕ್ರಮ ಕೈಗೊಂಡೆ. ಮಹಾತ್ಮಾ ಗಾಂಧಿಜೀರವರು ತಾಯಿ ನಂತರ ಗ್ರಂಥವೆ ಸರ್ವಶೇಷ್ಠ ಎಂದು ಹೇಳಿದ್ದರು. ಅದರಿಂದ ಶಿಕ್ಷಣಕ್ಕೆ ಒತ್ತು ನೀಡಿದೆ ಎಂದರು.
ಕೃಷಿ ಕಾರ್ಮಿಕನ ಮಗ ನಾನು, ಕಷ್ಟದಲ್ಲಿ ಶಾಲೆಗೆ ಹೋಗಿದ್ದೆ. ಆದರೆ ಇಂದು ಸಾಹಿತ್ಯ ರಚಿಸಲು ಎಲ್.ಎಸ್.ಶೇಷಗಿರಿರಾವ್, ಎಂ.ಕೆ.ಕುಲಕರ್ಣಿ, ಕುರ್ತಕೋಟಿ ಅಂತವರ ಸ್ನೇಹ ಸಾಹಿತ್ಯದಲ್ಲಿ ಸಾಧನೆ ಮಾಡಲು ಕಾರಣವಾಗಿದೆ ಎಂದರು.
ಎಲ್.ಎಸ್.ಎಸ್. ಜನ್ಮ ಶತಮಾನೋತ್ಸವ ಗೌರವವನ್ನು ಡಾ. ವೀರಪ್ಪ ಮೊಯ್ಲಿ, ಡಾ. ಸಿ.ಎನ್. ರಾಮಚಂದ್ರನ್, ಡಾ. ದೊಡ್ಡ ರಂಗೇಗೌಡ, ನಾಗಮಣಿ ಎಸ್. ರಾವ್, ಡಾ. ಬಾಬು ಕೃಷ್ಣಮೂರ್ತಿ,ಡಾ. ಪ್ರಧಾನ ಗುರುದತ್ತ, ಡಾ. ವೂಡೇ ಪಿ. ಕೃಷ್ಣ, నిತಿನ್ ಷಾ, ವ.ಚ. ಚನ್ನೇಗೌಡ, ಆರ್. ರಾಮಕೃಷ್ಣರವರಿಗೆ ಗೌರವಾರ್ಪಣೆ ಮಾಡಲಾಯಿತು.








