ದ್ವೇಷದ ಕಾರ್ಖಾನೆಯನ್ನು ಮುಚ್ಚಿಸೋಣ ಬನ್ನಿ

2 years ago

ಚುನಾವಣೆ ಬಂದಿದೆ
ಮಾನವ ಮಾನವರ ನಡುವೆ,
ದ್ವೇಷದ ಬೀಜವಾ ಬಿತ್ತಿ
ನಾಯಕರಾಗಲು ಹೊರಟಿರುವವರ
ಯತ್ನಕ್ಕೆ ಸೋಲುಣಿಸೋಣ ಬನ್ನಿ

ಚುನಾವಣೆಯಲ್ಲಿ ಗೆಲುವಿಗಾಗಿ
ಎಲ್ಲ ಘಟನೆಗಳಿಗೆ ಧರ್ಮದ
ಲೇಪನವನ್ನ ಹಚ್ಚಿ ಧರ್ಮ
ಧರ್ಮದ ನಡುವೆ ಬೆಂಕಿಯನ್ನು ಹಚ್ಚಲು
ಹೊರಟಿರುವ ಸ್ವಾರ್ಥವನ್ನು ಸೋಲಿಸೋಣ ಬನ್ನಿ

ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ,
ಅಧಿಕಾರಕ್ಕೆರಿದವರು ಸಾಯುವತನಕ
ಅಂಟಿಕೊಂಡು ಕುಳಿತಿರುವದಿಲ್ಲ
ಆದರೂ ಅಧಿಕಾರಕ್ಕಾಗಿ
ಅನ್ಯರ ಮನೆಯ ಮಕ್ಕಳ
ಬದುಕಿನೊಂದಿಗೆ ಚೆಲ್ಲಾಟವಾಡುವ
ಕೀಳು ರಾಜಕಾರಣಕ್ಕೆ ಸೋಲುಣಿಸೋಣ ಬನ್ನಿ

ಸರ್ವ ಜನಾಂಗದ ಶಾಂತಿಯ ತೋಟದ ಆಶಯಕ್ಕೆ
ಹಿಂಸೆಯ ಬೆಂಕಿಯನ್ನು ಹಚ್ಚಲು ಹೊರಟಿರುವ
ಸ್ವಾರ್ಥಿಗಳ ಸಮಯ ಸಾಧಕತನವನ್ನು ಸೋಲಿಸೋಣ ಬನ್ನಿ

ಧರ್ಮದ, ಜಾತಿಯ ಸಂಘರ್ಷದಲ್ಲಿ
ನಾಯಕರ ಮನೆಯ ಮಂದಿ ಯಾರು ಕಣ್ಣೀರು ಸುರಿಸಿಲ್ಲ
ಅವರ ಜೀವಗಳಿಗೆ ಅಪಾಯವೂ ಆಗಿಲ್ಲ
ಏನು ಅರಿಯದ ಮುಗ್ಧ ಮಂದಿಯ ಮನೆಯ ಮಕ್ಕಳು
ಬಲಿಪಶುಗಳಾಗಿ
ಬಡವರ ಮನೆಯ ಪೋಷಕರು ಕಣ್ಣೀರು ಸುರಿಸುವ
ಕರುಣಾಜನಕ ಸ್ಥಿತಿಗಳು ಬಾರದಂತೆ ಜಾಗೃತಗೊಳಿಸೋಣ ಬನ್ನಿ,
ಅಧಿಕಾರದಾಹಿಗಳ ಸ್ವಾರ್ಥಿಗಳ ಮುಖವಾಡವ ಕಳಚೋಣ ಬನ್ನಿ

  • ಕೆಎಸ್ ನಾಗರಾಜ್, ಬೆಂಗಳೂರು

Leave a Reply