ಸನಾತನಿಗಳೇ, ಹಿಂದೂ ಎನ್ನುವುದು ಧರ್ಮವೂ ಅಲ್ಲ, ಈ ದೇಶದ್ದು ಅಲ್ಲ ಎಂದ V. D. ಸಾವರ್ಕರ್ ಹಾಗೂ ಅವರ ಶಿಷ್ಯರಾದ RSS- BJP ವಿರುದ್ಧ ಹೋರಾಡೋಣವೇ?
ಜಸ್ಟ್ ಆಸ್ಕಿಂಗ್
ಸನಾತನಿಗಳೇ, ಹಿಂದೂ ಎನ್ನುವುದು ಧರ್ಮವೂ ಅಲ್ಲ, ಈ ದೇಶದ್ದು ಅಲ್ಲ ಎಂದ V. D. ಸಾವರ್ಕರ್ ಹಾಗೂ ಅವರ ಶಿಷ್ಯರಾದ RSS- BJP ವಿರುದ್ಧ ಹೋರಾಡೋಣವೇ?
ಹಿಂದೂ ಎಂದರೇ ಸನಾತನ, ಎಂದು ಎದ್ದೆದ್ದು ಕುಣಿಯುತ್ತಿರುವ ಮೋದಿ-ಶಾಗಳೇ ಮತ್ತು ಭಕ್ತ ಶಿಖಾಮಣಿಗಳೇ …
ಹಿಂದೂ ಪದದ ಹುಟ್ಟಿನ ಬಗ್ಗೆ ಮತ್ತು
ಆರ್ಯರ ಮೂಲದ ಬಗ್ಗೆ ಹಿಂದುತ್ವದ ಪಿತಾಮಹ V. D. ಸಾವರ್ಕರ್ ಏನು ಹೇಳಿದ್ದಾರೆ ಎಂದು ಗೊತ್ತೇ?….
“ ನಮಗೆ ಹಿಂದೂಗಳು ಎಂದು ಹೆಸರಿಟ್ಟಿದ್ದು ’ಸ’ಕಾರ ಬರದ ಪರ್ಷಿಯನ್ನರು”
” ಆರ್ಯರು ಭಾರತಕ್ಕೆ ಬರವ ಮುನ್ನವೇ ಇಲ್ಲಿ ಪ್ರಾಕೃತ ಮಾತಾಡುತ್ತಿದ್ದ ಮೂಲ ನಿವಾಸಿಗಳಿದ್ದರು”
- VD ಸಾರ್ವಕರ್
(Essentilas Of Hindutva, 1923)
ಹಿಂದೂತ್ವದ ಪಿತಾಮಹರಾದ ಹಾಗೂ ಆರೆಸ್ಸೆಸ್-ಬಿಜೆಪಿಗಳ ಮಾರ್ಗದರ್ಶಕರಾದ ಸಾವರ್ಕರ್ ಅವರು 1923ರಲ್ಲಿ Essentilas of Hindutva ಎಂಬ ಪುಸ್ತಕ ಬರೆದಿದ್ದರು.
ಆ ಪುಸ್ತಕವೇ ಇವತ್ತಿಗೂ ಸಂಘಪರಿವಾರದ ಸೈದ್ಧಾಂತಿಕ ಮಾರ್ಗದರ್ಶಿ .
ಆ ಪುಸ್ತಕವು ಬಿಜೆಪಿ ಪಕ್ಷದ ಕೇಂದ್ರೀಯ ಇ- ಲೈಬ್ರರಿಯಲ್ಲಿ ಈ ವಿಳಾಸದಲ್ಲಿ ದೊರಕುತ್ತದೆ:
ಆ ಪುಸ್ತಕದಲ್ಲಿ ಸಾವರ್ಕರ್ ಅವರು ಮೊದಲ ಹತ್ತುಪುಟಗಳಲ್ಲಿ:
ಹಿಂದೂ ಎಂಬ ಪದದ ಉತ್ಪತ್ತಿಯ ಬಗೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿವರವಾಗಿ ಚರ್ಚಿಸಿದ್ದಾರೆ.
ಹೀಗಾಗಿ ಭಕ್ತ ಶಿಖಾಮಣಿಗಳು ಬೀದಿ ಬೀದಿ ಗಳಲ್ಲಿ ಸನಾತನ ದೊಂಬಿ ಎಬ್ಬಿಸುವುದಕ್ಕೆ ಮುಂಚೆ ಅದನ್ನೊಮ್ಮೆ ಓದಿಕೊಳ್ಳಬೇಕೆಂದು ಮನವಿ.
ಹಿಂದೂ ಎಂಬ ಪದದ ಹುಟ್ಟಿನ ಬಗ್ಗೆ ಆ ಪುಸ್ತಕದಲ್ಲಿ ಸಾವರ್ಕರ್ ಹೀಗೆ ಬರೆದಿದ್ದಾರೆ.:
- ಈ ದೇಶಕ್ಕೆ ಸಾಹಸಿ ಆರ್ಯರ ಮೊದಲ ತಂಡ ಯಾವಾಗ ಕಾಲಿಟ್ಟಿತು ಎಂದು ಊಹಿಸುವುದು ಈಗ ಕಷ್ಟವಾದರೂ ಈಜಿಫ್ತ್ ಹಾಗೂ ಬ್ಯಬಿಲೋನಿಯನ್ನರು ತಮ್ಮ ಅದ್ಭುತ ನಾಗರಿಕತೆಗಳನ್ನು ಕಟ್ಟುವ ಮುಂಚೆಯೇ ಸಿಂಧು ನದಿಯ ತೀರದಲ್ಲಿ ವೈದಿಕ ಮಂತ್ರ ಘೋಷಗಳು ಕೇಳಿಬರುತ್ತದ್ದವು ಎಂದು ಹೇಳಬಹುದು
(Although it would be hazardous at the present state of oriental research to state definitely the period when the foremost band of the intrepid Aryans made it their home and lighted their first sacrificial fire on the banks of the Sindhu, the Indus, yet certain it is that long before the ancient Egyptians, and Babylonians had built their magnificent civilization, the holy waters of the Indus were daily witnessing the lucid and curling columns of the scented sacrificial smokes and the valleys resounding with the chants of Vedic hymns- the spiritual fervour that animated their souls.)
- ಆರ್ಯರು ತಮ್ಮ ಸಮೀಪದ ಬಂಧುಗಳೊಂದಿಗೆ ಅದರಲ್ಲೂ ವಿಶೇಶವಾಗಿ ಪರ್ಶಿಯನ್ನರೊಂದಿಗೆ ತಮ್ಮ ಸಂಬಂಧಗಳನ್ನು ಕತ್ತರಿಸಿಕೊಳ್ಳುವ ವೇಳೆಗೆ ಈ ದೇಶದ ಏಳು ನದಿಗಳು, ಸಪ್ತ ಸಿಂಧೂ ಪ್ರದೇಶಗಳಲ್ಲಿ ಹರಡಿ ಹೋಗಿದ್ದರು ಮತ್ತು ಅದರಿಂದಲೇ ತಮ್ಮ ಗುರುತನ್ನು ಸ್ಥಾಪಿಸಿಕೊಂಡಿದ್ದರು ..
( By the time they had definitely cut themselves aloof from their cognate and neighbouring people especially the Persians, the Aryans, had spread out to the farthest of the seven rivers, Sapta Sindhus, and not only had they developed a sense of nationality but had already succeeded in giving it ‘a local habitation and a name!’ )
- ಈ ಜನರು ತಮ್ಮನ್ನು ತಾವು ಸಿಂಧುಗಳು ಎಂದು ಗುರುತಿಸಿಕೊಂಡಿದ್ದು ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನ ಇತರರಿಗೂ ಸಪ್ತ ಸಿಂಧೂ ಎಂದು ಪರಿಚಿತರಾಗಿದ್ದರು.
ಸಂಸ್ಕೃತ ಭಾಷೆಯ ’ ಸ ’ ಕಾರವು ಹಲವಾರು ಭಾರತೀಯ ಮತ್ತು ಅಭಾರತೀಯ ಪ್ರಾಕ್ರುತ ಭಾಷೆಯಲ್ಲಿ ’ ಹ ’ ಕಾರವಾಗುತ್ತದೆ. ಉದಾಹರಣೆಗೆ ಸಪ್ತ ಎಂಬುದು ಪ್ರಾಕ್ರುತದಲ್ಲು, ಹಲವಾರು ಯೂರೋಪಿಯನ್ ಭಾಷೆಗಳಲ್ಲು ’ ಹಪ್ತ’ ಆಗುತ್ತದೆ. …
ಮತ್ತು ನಮ್ಮ ದೇಶದ ವೈದಿಕ ಹೆಸರಾದ ಸಪ್ತ ಸಿಂಧುವನ್ನು ಪುರಾತನ ಪರ್ಶಿಯನ್ನರು ತಮ್ಮ ಅವೆಸ್ತಾ ಗ್ರಂಥಗಳಲ್ಲಿ “ಹಪ್ತ ಹಿಂದೂ” ಎಂದು ದಾಖಲಿಸಿದ್ದಾರೆ.
(Not only had these people been known to themselves as ‘Sindhus’ but we have definite records to show that they were known to their surrounding nations- at any rate to one of them- by that very name, ‘Sapta Sindhu’. The letter ‘s’ in Sanskrit is at times changed into h in some of the Prakrit languages, both Indian and non-Indian. For example, the word Sapta has become Hapta not only in Indian Prakrits but also in the European languages too: we have Hapta i.e., week, in India and ‘Heptarchy’ in Europe, Kesari in Sanskrit becomes Harhvati in Persian and Asuri becomes Ahur. And then we actually find that the Vedic name of our nation Sapta Sindhu had been mentioned as Hapta Hindu in the Avesta by the ancient Persian people.)
- ಹೀಗಾಗಿ ವೈದಿಕ ಆರ್ಯರನ್ನು ಪುರಾತನ ಪರ್ಶಿಯನ್ನರು ’ಹಿಂದೂ’ ಎಂದು ಕರೆದಿದ್ದು ಖಚಿತವಾದ ಮೇಲೆ ಅವರ ಮೂಲಕವೇ ನಮ್ಮನ್ನು ಪರಿಚಯಿಸಿಕೊಂಡ ಇತರ ದೂರ ದೂರದ ದೇಶಗಳು ಪುರತನ ಪರ್ಶಿಯನ್ನರಂತೆ ನಮ್ಮನ್ನು “ಹಿಂದೂ” ಎಂದೇ ಕರೆಯಲಾರಂಭಿಸಿದರು.
(Thus knowing for certain that the Persians used to designate the Vedic Aryans as Hindus and knowing also the fact that we generally call a foreign and unknown people by the term by which they are known to those through whom we come to know them, we can safely conclude that most of the remoter nations that flourished then must have applied the same epithet ‘Hindu’ to our land and people as the ancient Persians did.)
- ಅಷ್ಟು ಮಾತ್ರವಲ್ಲ..
ಮಹಾನ್ ’ಸಿಂಧೂ”ವ’ನ್ನು ನಮ್ಮ ದೇಶದ ಮೂಲ ನಿವಾಸಿಗಳು ’ಹಿಂದೂ” ಎಂದೇ ಕರೆಯುತ್ತಿದ್ದಿರಬೇಕು. ಆದರೆ ಆರ್ಯರು ಅದನ್ನು ಅಳವಡಿಸಿಕೊಳ್ಳುವಾಗ ತಮ್ಮ ಭಾಷಿಕ ವೈಚಿತ್ರ್ಯದ ಕಾರಣಕ್ಕೆ ಅದನ್ನು ಸಿಂಧೂ ಎಂದು ಕರೆದಿರಬೇಕು. ಹೀಗಾಗಿ ದೇಶದಲ್ಲಿ ಪುರಾತನ ಕಾಲದಿಂದಲೂ ವಾಸವಿದ್ದ ಜನರ ಹೆಸರು ಹಿಂದೂ ವೇ ಆಗಿರಬೇಕು. ವೈದಿಕ ಸಿಂಧೂ ಎಂಬ ಹೆಸರು ಅದರ ನಂತರವೇ ಬಂದಿರಬೇಕು.
(it is quite probable that the great Indus was known as Hindu to the original inhabitants of our land and owing to vocal peculiarity of the Aryans it got changed into Sindhu when they adopted it by the operation of the same rule that S is the Sanskritised equivalent of H. Thus Hindu would be the name that this land and the people that inhabited it bore from time so immemorial that even the Vedic name Sindhu is but a later and secondary form of it.)
ಹೀಗೆ ಸಾಕ್ಷಾತ್ ಸಾವರ್ಕರ್ ಅವರೇ ಇಲ್ಲಿ ಎರಡು ವಿಷಯಗಳನ್ನು ಹೇಳಿದ್ದಾರೆ :
- ಹಿಂದೂ ಎಂಬುದು ಇಲ್ಲಿನ ಸ್ಥಳೀಯ ಹೆಸರಲ್ಲ. ಹಾಗೆ ನಮ್ಮನ್ನು ಕರೆದದ್ದು ಪರ್ಶಿಯನ್ನರು.
- ಆರ್ಯರು ಇಲ್ಲಿಗೆ ಬರುವ ಮುಂಚೆಯೇ ಇಲ್ಲಿನ ಮೂಲನಿವಾಸಿಗಳಿದ್ದರು. ಅವರ ಭಾಷೆ ಮತ್ತು ಆರ್ಯನರ ಭಾಷೆ ಭಿನ್ನವಾಗಿತ್ತು. ಮತ್ತು ಆರ್ಯನರ ಸಮೀಪ ಬಂಧುಗಳು ಪರ್ಶಿಯನರಾಗಿದ್ದರು.
ಆರ್ಥಾತ್ ಆರ್ಯರು ಈ ದೇಶಕ್ಕೆ ಹೊರಗಿಂದ ಬಂದವರೇ ಅಂತ ಸಾವರ್ಕರ್ ಅವರೇ ಹೇಳಿದ್ದಾರೆ,..
ಆದ್ದರಿಂದ ಭಕ್ತರೇ..
ಒಂದೋ ಹಿಂದೂ ಪದ ಪರ್ಸಿಯನ್ ಮೂಲದ್ದು ಮತ್ತು ಆರ್ಯರು ಈ ದೇಶದ ಮೂಲ ನಿವಾಸಿಗಳಲ್ಲ ಎಂಬುದನ್ನು ಒಪ್ಪಿಕೊಂಡು….
ಈ ದೇಶ ಹಿಂದೂ ದೇಶ, ಸನಾತನ ಧರ್ಮವೇ ಈ ದೇಶದ ಮೂಲಧರ್ಮ ಅಥವಾ ಎಲ್ಲರ ಧರ್ಮ ಎಂಬ ಕುತರ್ಕ -ವಿವಾದ ನಿಲ್ಲಿಸೋಣ …
ಆಥವಾ
ಆರ್ಯರು ಈ ದೇಶದ ಮೂಲ ನಿವಾಸಿಗಳಲ್ಲ ಮತ್ತು ನಮ್ಮನ್ನು ಹಿಂದೂ ಎಂದು ಕರೆದದ್ದು ಪರ್ಶಿಯನ್ನರು ಎಂದಿರುವ ಸಾವರ್ಕರ
ಮತ್ತು
ಅವರಿಂದ ಪ್ರೇರಿತವಾದ ಆರೆಸ್ಸೆಸ್-ಬಿಜೆಪಿಯ ವಿರುದ್ಧವೂ ಸಮರ ಸಾರೋಣ ..
ಏನಂತೀರಾ??
ಜಸ್ತ್ ಆಸ್ಕಿಂಗ್
-ಶಿವಸುಂದರ್, ಸಾಂಸ್ಕೃತಿಕ ಚಿಂತಕರು
9448659774




