ಸುಖವ ಕೊಡು ಎಂದು ಬೇಡುವ ಭಕ್ತರು ನನಗೆ ದೊರೆವ ಸುಖ ಬೇರೊಬ್ಬರ ಕಣ್ಣೀರಿನ ಕಾರಣವಾಗಿರಬಾರದು ಎಂದು ಕೇಳಬೇಕಲ್ಲವೇ?
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ನಮ್ಮ ಪಾಪಗಳ ಮನ್ನಿಸು ಎಂದು ಕೇಳುವ ನಾವುಗಳು ಮಾಡಿರುವ ಪಾಪಕ್ಕೆ ನೀನೆ ಶಿಕ್ಷೆ ಕೊಡು ಎಂದು ಹೇಳಬೇಕಲ್ಲವೇ?
ಸಂಪತ್ತು ಕೊಡು ಎಂದು ಬೇಡುವ ನಾವುಗಳು ಕೊಡುವ ಸಂಪತ್ತು ಸಮಾಜದ ಒಳಿತಿಗೂ ಒಂದಷ್ಟು ಭಾಗ ಬಳಸುವ ಮನಸ್ಸು ಕೊಡು ಎಂದು ಕೇಳಬೇಕಲ್ಲವೇ?
ಅಧಿಕಾರ, ಅಂತಸ್ತು, ದಯೆ ಪಾಲಿಸೆಂದು ಕೇಳುವ ನಾವು ಅಧಿಕಾರ ಅಂತಸ್ತುಗಳು ಬಂದಾಗ ದರ್ಪದಿಂದ ಮೆರೆಯದೆ, ಜನಪರ ಕಲ್ಯಾಣಕ್ಕಾಗಿ, ಮಾತ್ರವೇ ಬಳಸುತ್ತೇವೆಂದು ಪ್ರತಿಜ್ಞೆ ಮಾಡಬೇಕಲ್ಲವೇ?
ನಮ್ಮ ದ್ವೇಷ, ಅಸೂಯೆ, ಸಿಟ್ಟಿನಿಂದ ತೊಂದರೆಗೆ ಒಳಗಾಗಿರುವ ಜೀವಗಳಿಗೆ ಒಳಿತು ಮಾಡಿ ನಮ್ಮ ತಪ್ಪಿಗಾಗಿ ಪ್ರಾಯಶ್ಚಿತ್ತವಾಗಲಿ ಎಂದು ಕೇಳಬೇಕಲ್ಲವೇ?
ವಾಮಮಾರ್ಗದಿ ಗಳಿಸಿರುವ ಸಂಪತ್ತು ಸಾಕಾಗಿ ಹೋಗಿದೆ ಮುಂದೆಂದು ಈ ದಾರಿಯಲ್ಲಿ ಸಾಗುವುದಿಲ್ಲ ಎಂದು ಶಪಥ ಮಾಡಬೇಕಲ್ಲವೇ?
ನೀಚಮಾರ್ಗದಿಂದ ಬಡವರ, ಅಸಹಾಯಕರ ಬಳಿಯಿಂದ ಹಣವದೋಚಿ ಶ್ರೀಮಂತರಾಗಿರುವ ನಮಗೆ ಶಿಕ್ಷೆಯ ಕೊಡು ಎಂದೆನುತ ತಪ್ಪನ್ನು ಒಪ್ಪಿ ಶರಣಾಗಬೇಕಲ್ಲವೇ?
ಇಲ್ಲಿಯ ತನಕ, ನನಗಾಗಿ, ನಮ್ಮವರಿಗಾಗಿ ಬೇಡಿದ್ದು ಸಾಕಾಯಿತು, ಈಗಲಾದರೂ ನಮ್ಮವರಿಗಾಗಿ, ನಮ್ಮೂರಿಗಾಗಿ, ನೊಂದವರಿಗಾಗಿ ಒಳಿತು ಮಾಡು ಎಂದು ಒಂದು ಕ್ಷಣವಾದರೂ ಬೇಡಬೇಕಲ್ಲವೇ?
ಈ ಕ್ಷಣದಿಂದ ಭೂದಾಹಿಗಳು ಭೂಮಿ ಕಬಳಿಸುವುದಿಲ್ಲವೆಂದು ಭ್ರಷ್ಟರು ಲಂಚದ ಹಣ ಮುಟ್ಟುವುದಿಲ್ಲವೆಂದು, ಶೋಷಣೆ ಮಾಡುವವರು ಬಡವರ ಶೋಷಣೆ ಮಾಡುವುದಿಲ್ಲವೆಂದು, ಅಧಿಕಾರ ಅಂತಸ್ತು ಸ್ವಾರ್ಥಕ್ಕೆ ಬಳಸುವುದಿಲ್ಲವೆಂದು, ವೃತ್ತಿಪರರು ನ್ಯಾಯಮಾರ್ಗದಿ ದುಡಿಮೆಯ ಮಾಡುತ್ತೇವೆ ಎಂದು, ಸ್ವಾರ್ಥ ಸಾಧನೆಗೆ ದ್ವೇಷದ ಬೆಂಕಿ ಹಚ್ಚುವವರು, ಪ್ರೀತಿಯಾ ದೀಪವನ್ನು ಹಚ್ಚುತ್ತೇವೆಂದು, ದುಶ್ಯಾಸನನ ಸಂತತಿಯವರು, ಪರ ಸ್ತ್ರೀಯರನ್ನು ಕಾಮಾಲೆಯ ಕಣ್ಣಿನಿಂದ ನೋಡುವುದಿಲ್ಲವೆಂದು, ಒಂದಷ್ಟು ಮಂದಿ ಕಾಮ ಕ್ರೋಧ, ಮದ ಮತ್ಸರಗಳ, ಮನಸ್ಸಿನಲ್ಲಿ ಮೂಡದಂತೆ ಧರಿಸಿರುವ ಬಟ್ಟೆಗೆ ಅನುಗುಣವಾಗಿ ಬದುಕುತ್ತೇವೆಂದು ದೀಕ್ಷೆ ತೊಡಬೇಕಲ್ಲವೇ?
– ಕೆ ಎಸ್ ನಾಗರಾಜ್, ಬೆಂಗಳೂರು




