ಬೆಂಗಳೂರು: ಮಠಾಧೀಶರು ಅಮಿತ್ ಷಾ ಅವರನ್ನು ಭೇಟಿ ಮಾಡಿರುವುದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಕೃಪಾಪೋಷಿತ ನಾಟಕ ಮಂಡಳಿಯ ಮತ್ತೊಂದು ನಾಟಕ ಎಂದು ಬಿಜೆಪಿಯ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಠಾಧೀಶರ ಈ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಚನಾನಂದ ಸ್ವಾಮೀಜಿ ತನ್ನ ಜಾತಿಗೇ ಏನೂ ಮಾಡಲಾರದವ. ಇನ್ನು ಧರ್ಮಸ್ಥಳದ ಬಗ್ಗೆ ಏನು ಮಾತಾಡುವುದು? ಸುಮ್ಮನೆ ಇದು ನಾಟಕ ಎಂದರು.
ಸ್ವತಃ ಪಂಚಮಸಾಲಿ ಸಮುದಾಯವೇ ದಿವಾಳಿ ಆಗಿ ಹೋಗಿದೆ. ಈಗ ಹಿಂದೂ ಸಮಾಜ, ಸನಾತನ ಧರ್ಮ ಅಂತಾ ಹೊಸ ನಾಟಕ ಎಬ್ಬಿಸಿದ್ದಾರೆ ಎಂದರು.
ವಚನಾನಂದರನ್ನ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ ಅಂದರೆ ಇದು ವಿಜಯೇಂದ್ರನ ಕಂಪನಿ ಅಂತಾ ಅನ್ನಿಸುತ್ತದೆ. ಹೇಗಿದ್ದರೂ ವಿಜಯೇಂದ್ರ ಧರ್ಮಸ್ಥಳಕ್ಕೆ ಹೋಗಿದ್ದಾರೆ, ಸೌಜನ್ಯರ ಮನೆಗೆ ಭೇಟಿ ನೀಡಿದ್ದಾರೆ. ಮಂಜುನಾಥ ಸ್ವಾಮಿ ಬಳಿ ಬೇಡಿಕೊಳ್ಳಲಿ, ಇನ್ನುಮುಂದೆ ನಾವು ಭ್ರಷ್ಟಾಚಾರ ಮಾಡಲ್ಲ, ಒಂದೇ ವಂಶದವರು ಆಡಳಿತ ಮಾಡಲ್ಲ ಅಂತಾ ಮಂಜುನಾಥ ಸ್ವಾಮಿ ಬಳಿ ಪ್ರತಿಜ್ಞೆ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದರು.
ನಮ್ಮಪ್ಪ ನಾಲ್ಕು ಸಲ ಸಿಎಂ ಆಗಿದ್ದಾನೆ, ನನಗೂ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ, ಬೇಡಪ್ಪಾ ಸಾಕು. ಮಂಜುನಾಥೇಶ್ವರ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಿಗೆ ಸಿಎಂ ಆಗುವ ಅವಕಾಶ ಕೊಡು. ನಮ್ಮ ನಾಲ್ಕು ತಲೆ ತಿನ್ನುವಷ್ಟು ನಾವು ಮಾಡಿಕೊಂಡಿದ್ದೇವೆ. ನಿನ್ನ ಆಶೀರ್ವಾದದಿಂದ ಅಂತಾ ಮುಗಿಸಬೇಕಿತ್ತು. ಅದು ಬಿಟ್ಟು ಎರಡನೇ ಹಂತದ ಲೂಟಿ ಪ್ರಾರಂಭ ಮಾಡಿದ್ದಾರೆ ಎಂದು ಕಿಡಿಕಾರಿದರು.
12-13 ವರ್ಷದಿಂದ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೇಳುತ್ತಿದ್ದೇವೆ, ಅದಕ್ಕೊಂದು ಅಂತ್ಯ ಬೇಕಲ್ವಾ? ಎನ್‌ಐಎ, ಎಫ್ ಬಿ ಐ, ಕೊಡುವುದು ಕೊಟ್ಟುಬಿಡಿ. ಧರ್ಮಸ್ಥಳದ ವಿಷಯವೇ ಮುಗಿದು ಹೋಗಿರುವಾಗ ಅಲ್ಲಿ ಹೋಗಿ ಬಿಜೆಪಿ ಏನು ಮಾಡುವುದು? ಅಲ್ಲಿ ಏನೂ ಸಿಕ್ಕಿಲ್ಲ, ಸಿಕ್ಕಿಲ್ಲ ಅಂದರೆ ಎಸ್‌ಐಟಿ ಏನು ವರದಿ ಕೊಡುತ್ತದೋ ಕೊಡಲಿ. ಸುಮ್ಮನೆ ಕಾಟಾಚಾರಕ್ಕೆ ನಾವು ಧರ್ಮಸ್ಥಳದ ಭಕ್ತರು ಅಂತಾ ತೋರಿಸಲು ಹೋಗಿರುವುದು ಯಾಕೆ? ಎಂದರು.




