ಸೌಂದರ್ಯದ ಉಪಾಸನೆಯಾಗದೆ ಸಾಮಾಜಿಕ ಕಾಳಜಿ, ರಾಜಕೀಯ ವಿಮರ್ಶೆ, ಮಾನವೀಯ ಮೌಲ್ಯಗಳನ್ನು ಮುಖ್ಯವಾಗಿಸಿಕೊಳ್ಳಬೇಕು ಎಂಬ ಎಚ್ಚರದ ಕೃತಿ ಜೋಗಿ ಜೋಳಿಗೆಯ ಕಾಳು: ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

ಬೆಂಗಳೂರು: ಕೃತಿ ಕೇವಲ ಸೌಂದರ್ಯದ ಉಪಾಸನೆಯಾಗದೆ ಸಾಮಾಜಿಕ ಕಾಳಜಿಯನ್ನು, ರಾಜಕೀಯ ವಿಮರ್ಶೆಯನ್ನು ಮತ್ತು ಮಾನವೀಯ ಮೌಲ್ಯಗಳನ್ನು ಮುಖ್ಯವಾಗಿಸಿಕೊಂಡು ರಚನೊಗಳ್ಳಬೇಕೆಂಬ ಎಚ್ಚರವನ್ನು ಈ “ಜೋಗಿ ಜೋಳಿಗೆಯ ಕಾಳು” ಕೃತಿಯಿಂದ ಮತ್ತೆ ಮತ್ತೆ ಜಾಗೃತ ಗೊಳಿಸುತ್ತದೆ ಎಂದು ಕವಿ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಹೇಳಿದರು.

ಆನೇಕಲ್ ನಲ್ಲಿ ನಡೆದ ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ‘ಜೋಗಿ ಜೋಳಿಗೆಯ ಕಾಳು’ ಗಜಲ್ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತಾಡಿದ ಅವರು, ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರು ತಮ್ಮ ಗಜಲ್ ಗಳ ಮೂಲಕ ಸಖಿಯೊಂದಿಗೆ ಪ್ರೀತಿ ಸೌಂದರ್ಯಗಳನ್ನು ವಿನಿಯೋಗಿಸಿಕಳ್ಳದೆ, ಜಾತಿಸಮಸ್ಯೆ, ಧರ್ಮಾಂಧತೆ, ನಾಶವಾದ ಪ್ರಕೃತಿಯ, ರಾಜಕೀಯ ಅರಾಜಕತೆಯನ್ನು ಒರೆಗೆ ಹಚ್ಚುವ ಗಜಲ್ ಗಳು ಬಹಳ ಭಿನ್ನವಾಗಿವೆ. ಈ ಎಲ್ಲಾ ವಿಷಯಗಳನ್ನು ಗಜಲ್ ಛಂದಸ್ಸಿನಲ್ಲಿ ತರುವ ಕಲೆ ಕರಗತವಾಗಿಸಿಕೊಂಡಿದ್ದಾರೆ ಎಂದರು.

ನಾಣಿ, ಸಖಿ, ಸಾಕಿ, ಗಳಾಗಿಸಿಕೊಂಡು ತನ್ನೊಳಗಿನ ಪ್ರಜ್ಞೆಯನ್ನು ಎಚ್ಚರಿಸುವ ದಾಟಿ ಮೈದುಂಬುತ್ತದೆ. ಒಟ್ಟಿನಲ್ಲಿ ಆನೇಕಲ್ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಗ್ರಾಮಾಂತರ ಮತ್ತು ನಗರ ಬೆಂಗಳೂರು ಪ್ರದೇಶಕ್ಕೆ ಗಟ್ಟಿಯಾದ ಗಜಲ್ ಕಾರನ ಹುಟ್ಟು ಸಾಧ್ಯವಾಗಿದೆ ಎಂದರು.

ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಯವರ ಜೋಗಿ ಜೋಳಿಗಯ ಕಾಳು ಇದು ಜೋಗಿ ಸಂತನ ಗಜಲ್ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಎಲ್ಲಾ ವರ್ಗದ ಓದುಗರಿಗೂ ಹೊಸದಾದ ಹೊತ್ತಿಗೆ ಯನ್ನು ಕಟ್ಟಿರುವ ನಾಣಿ ಯವರಿಗೂ ಒಳ್ಳೆಯದು ಆಗಲಿ ಎಂದು ಶುಭ ಕೋರಿದರು.




