ರಂಗಬಂಧು ತೊ.ನಂಜುಂಡಸ್ವಾಮಿ ಅವರ ನೆನಪಿನ ಗೌರವ ಸಮ್ಮಾನ

2 years ago

ಆತ್ಮೀಯರೆ, ರಂಗಬಂಧು ತೊ.ನಂಜುಂಡಸ್ವಾಮಿ ಅವರ ನೆನಪಿನ ಗೌರವ ಸಮ್ಮಾನದ ಎರಡನೇ ವರ್ಷದ ಕಾರ್ಯಕ್ರಮ ಫೆಬ್ರವರಿ 10 ರಂದು ಸಂಜೆ 5.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ. ಈ ಬಾರಿಯ ಸನ್ಮಾನಿತರು ಹಿರಿಯ ಜನಪದ ಆಸಕ್ತಿಯ ನಾಟಕಕಾರರಾದ ಶ್ರೀ. ಹೂಲಿ ಶೇಖರ್ ಅವರು.

ಸನ್ಮಾನದ ಕಾರ್ಯಕ್ರಮದ ಮೊದಲಿಗೆ, ಪ್ರಸಿದ್ಧ ಜನಪದ ಗಾಯಕ ಜೋಗಿಲ ಸಿದ್ದರಾಜು ಅವರಿಂದ ಜನಪದ ಮತ್ತು ತತ್ವ ಪದಗಳ ಹಾಡಿನ ಕಾರ್ಯಕ್ರಮ ಮತ್ತು ಸನ್ಮಾನದ ನಂತರದಲ್ಲಿ ಮಂಡ್ಯ ರಮೇಶ್ ಅವರ ನಟನ ಮೈಸೂರು ಪ್ರಸ್ತುತ ಪಡಿಸುವ ಕಣಿವೆಯ ಹಾಡು ನಾಟಕ ಇರುತ್ತದೆ.

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ… ತಮ್ಮೆಲ್ಲರ ಬರುವಿಕೆ ಸನ್ಮಾನಿತರಿಗೆ ಸಂತೋಷ ತರುತ್ತದೆ; ಕಾರ್ಯಕ್ರಮದ ಯಶಸ್ಸಿಗೆ ತಮ್ಮೆಲ್ಲರ ಭಾಗವಹಿಸುವಿಕೆ ಅತ್ಯವಶ್ಯಕ..

ತಮ್ಮವ,
ತೊ.ನಂಜುಂಡಸ್ವಾಮಿ ಗೆಳೆಯರ ಬಳಗದ ಪರವಾಗಿ

  • ಗುಂಡಣ್ಣ ಚಿಕ್ಕಮಗಳೂರು

Leave a Reply