ಕನ್ನಡ ಅನುಷ್ಠಾನ: ದೂರು ನೀಡಲು ದೂರು ಪೆಟ್ಟಿಗೆ ಹಾಗೂ ಜಾಲತಾಣ ಸ್ಥಾಪಿಸಿ

1 year ago

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ದಾಖಲಿಸಲು ಯಾವ ರೀತಿಯಲ್ಲಿ ದೂರು ಪೆಟ್ಟಿಗೆ ಮತ್ತು ಜಾಲತಾಣಗಳನ್ನ ಸ್ಥಾಪಿಸಿದ್ದಾರೋ ಅದೇ ರೀತಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ.

ಸಾರ್ವಜನಿಕರು ವಿವಿಧ ಇಲಾಖೆಗಳಲ್ಲಿ ಮತ್ತು ನಾಮಫಲಕಗಳಲ್ಲಿ ಹಾಗೂ ವಾಣಿಜ್ಯ ವ್ಯವಹಾರದಲ್ಲಿ ಕನ್ನಡ ಭಾಷೆಯ ಅನುಷ್ಠಾನದ ವಿಚಾರದಲ್ಲಿ ಆಗಿರುವಂತಹ ಲೋಪಗಳು ಮತ್ತು ಆಗಬಹುದಾದಂತಹ ತಪ್ಪುಗಳು, ಅನುಷ್ಠಾನದಲ್ಲಿನ ಹಿನ್ನಡೆ ಇವುಗಳ ವಿಚಾರದಲ್ಲಿ ದೂರು ನೀಡುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ದೂರು  ಪೆಟ್ಟಿಗೆಯನ್ನು ಹಾಗೂ ಜಾಲತಾಣ ಒಂದನ್ನು ಕೂಡಲೇ ಸಿದ್ಧಪಡಿಸಬೇಕು.

ಏಕೆಂದರೆ ರಾಜ್ಯ ಸರ್ಕಾರ ಆದೇಶ ಮಾಡಿದರು ಸಹ ಹಲವು ರಸ್ತೆಗಳಲ್ಲಿ ಬೆಂಗಳೂರು ನಗರದಲ್ಲಿ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡದ ಬಳಕೆ ಇರುವುದಿಲ್ಲ. ಜೊತೆಗೆ ಬಹಳಷ್ಟು ವಾಣಿಜ್ಯ ವ್ಯವಹಾರ ಸಂಸ್ಥೆಗಳಲ್ಲಿ ಮತ್ತು ಹೋಟೆಲ್ ಗಳಲ್ಲಿ ಒಳಗಿನ ಬಹಳಷ್ಟು ಎಲ್ಲ ಫಲಕಗಳು ಆಂಗ್ಲ ಭಾಷೆಯಲ್ಲಿಯೇ ಇರುತ್ತವೆ. ಕನ್ನಡವನ್ನು ಇಂದಿಗೂ ತಿರಸ್ಕರಿಸುತ್ತಿದ್ದಾರೆ.

ಇದೇ ರೀತಿಯಲ್ಲಿ ಸರ್ಕಾರದ ಅನೇಕ ಇಲಾಖೆಗಳಲ್ಲಿ ಕನ್ನಡ ಭಾಷೆ ಸಂಪೂರ್ಣವಾಗಿ ಬಳಸುತ್ತಿಲ್ಲ. ಕಡತಗಳ ಟಿಪ್ಪಣಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿದ್ದಾರೆ. ಬಿಬಿಎಂಪಿ , ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಮುಂತಾದಂತಹ ಇಲಾಖೆಗಳಲ್ಲಿ ಇಂದಿಗೂ ಸಹ ಕನ್ನಡಕ್ಕಿಂತ ಆಂಗ್ಲ ಭಾಷೆ ಹೆಚ್ಚಾಗಿ ಬಳಸುತ್ತಿದ್ದಾರೆ.

ತಾಂತ್ರಿಕ ನೆಪಗಳನ್ನ ಹೇಳಿಕೊಂಡು ಕನ್ನಡ ಭಾಷೆಯನ್ನ ನಿರ್ಲಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನ ಪ್ರೀತಿಸುವ ಮತ್ತು ಕನ್ನಡದ ಬಗ್ಗೆ ಅಭಿಮಾನವುಳ್ಳ ನಾಗರಿಕರು ತಾವುಗಳು ಕಂಡಂತಹ ಕನ್ನಡದ ವಿಚಾರದಲ್ಲಿನ ಅನ್ಯಾಯವನ್ನು ಛಾಯಾಚಿತ್ರ ಸಮೇತ ಸಣ್ಣ ಟಿಪ್ಪಣಿಯೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರಿನ ರೂಪದಲ್ಲಿ ತಲುಪಿಸಲು ಕೂಡಲೇ ನವಂಬರ್ ಒಂದರ ಒಳಗಾಗಿ ಜಾಲತಾಣ ಒಂದನ್ನು ಸ್ಥಾಪಿಸಬೇಕೆಂದು ಕೋರಿಕೊಳ್ಳುತ್ತೇನೆ.

ಕನ್ನಡ ಭಾಷೆ ಈಗಾಗಲೇ ಉದ್ಯಾನವನದಲ್ಲಿ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದಿ, ತೆಲುಗು ಭಾಷೆ ಮತ್ತು ಇಂಗ್ಲಿಷ್ ಭಾಷೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯಾನವನಗಳು ಮತ್ತು ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಭಾಷೆಯನ್ನ ಬಳಸಿರಿ ಎಂಬ ನಾಮಫಲಕವನ್ನ ಅಳವಡಿಸಿ ಜಾಗೃತಿಯನ್ನು ಉಂಟುಮಾಡುವಂತಹ ಕೆಲಸವನ್ನು ಮಾಡಬೇಕಾದದ್ದು ಅನಿವಾರ್ಯವಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply