ಮುಡಾ ಕಚೇರಿ ಮೇಲೆ ಇವತ್ತು ದಿಢೀರ್ ಇಡಿ ದಾಳಿ ನಡೆಸಿದ್ದು ಆಕಸ್ಮಿಕವೇನೂ ಅಲ್ಲ. ಸ್ನೇಹಮಯಿ ಕೃಷ್ಣ ಎಂಬ ಡೀಲ್ ವ್ಯಕ್ತಿಯ ಮೂಲಕ ಇಡಿಗೆ ದೂರು ದಾಖಲಾಗುವಂತೆ ನೋಡಿಕೊಂಡಾಗಲೇ ಇಡಿ ಇಂತಹದ್ದೊಂದು ದಾಳಿ ನಡೆಸುವ ಸಾಧ್ಯತೆಯನ್ನು ಎಲ್ಲರೂ ಅಂದಾಜಿಸಿದ್ದರು. ಆದರೆ ಇಡಿಯನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ವ್ಯಾಪಕ ಟೀಕೆ ಮತ್ತು ಜನಾಭಿಪ್ರಾಯ ರೂಪುಗೊಂಡಿದ್ದರಿಂದ ಮೋದಿ ಸರ್ಕಾರ ಆಲ್‌ಮೋಸ್ಟ್ ಆ ಪ್ರಯತ್ನದಿಂದ ಹಿಂದೆ ಸರಿದಿತ್ತು. ಇದರ ಅರಿವಾಗಿ ರಾಜ್ಯ ಬಿಜೆಪಿ ನಾಯಕರು ಕೂಡಾ ಮುಡಾ ಹಗರಣದ ಮೇಲೆ ಹುಮ್ಮಸ್ಸು ಕಳೆದುಕೊಂಡು ಬೇರೆ ವಿಚಾರಗಳತ್ತ ಡೈವರ್ಟ್ ಆಗಲು ಶುರು ಮಾಡಿದ್ದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಆದರೆ ಇವತ್ತು ಇದ್ದಕ್ಕಿದ್ದಂತೆ ಇಡಿ ಮುಡಾ ಕಚೇರಿಯ ಮೇಲೆ ದಾಳಿ ನಡೆಸಿದ್ದು ಆಕಸ್ಮಿಕದಲ್ಲದಿದ್ದರೂ ಪೂರ್ವನಿಯೋಜಿತದ್ದಲ್ಲ ಅನ್ನುವುದು ಕೂಡಾ ಇಲ್ಲಿ ಇಂಟರೆಸ್ಟಿಂಗ್ ಸಂಗತಿ. ಯಾಕಂದ್ರೆ, ಸಿದ್ರಾಮಯ್ಯನವರನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿರುವುದರಿಂದ ಜನರ ನಡುವೆ ಬಿಜೆಪಿ ಪಕ್ಷಕ್ಕೆ ಕೆಟ್ಟ ಅಭಿಪ್ರಾಯ ರೂಪುಗೊಳ್ಳುತ್ತಿರುವ ಗುಪ್ತವಾರ್ತೆ ಸಂಗ್ರಹಿಸಿದ ಸ್ವತಃ ಅಮಿತ್ ಶಾ, ಈ ವಿಚಾರದಲ್ಲಿ ಆತುರ ತೋರಬೇಡಿ, ಎಚ್ಚರಿಕೆಯಿಂದ ಹೆಜ್ಜೆಯಿಡಿ ಎಂಬ ಸಂದೇಶ ರವಾನಿಸಿದ್ದರು ಎನ್ನಲಾಗುತ್ತೆ. ಅದರಲ್ಲೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಬಂಧನದಲ್ಲಿದ್ದ ಮಾಜಿ ಸಚಿವ ನಾಗೇಂದ್ರ ಜಾಮೀನಿನ ಮೇಲೆ ಹೊರಬಂದು, ಇಡಿ ಅಧಿಕಾರಿಗಳು ಸಿದ್ರಾಮಯ್ಯನವರ ಹೆಸರು ಹೇಳುವಂತೆ ನನ್ನ ಮೇಲೆ ಒತ್ತಡ ತಂದರು ಎಂದು ಹೇಳಿದ ನಂತರವಂತೂ ಬಿಜೆಪಿ ಹೈಕಮಾಂಡ್ ಈ ವಿಚಾರದಲ್ಲಿ ತುಸು ಎಚ್ಚರಿಕೆಯ ಹೆಜ್ಜೆ ಇಡುವ ತೀರ್ಮಾನಕ್ಕೆ ಬಂದಿತ್ತು ಎಂಬುದನ್ನು ಬಿಜೆಪಿ ಮೂಲಗಳೇ ಹೇಳುತ್ತವೆ. ಹಾಗಿರುವಾಗ ದಿಢೀರ್ ಅಂತ ಮುಡಾ ಮೇಲೆ ಇಡಿ ದಾಳಿ ನಡೆಸಿದ್ದೇಕೆ?
ಈ ಪ್ರಶ್ನೆಗೆ ನಿನ್ನೆ ಸಂಜೆ 6.15ರ ಸುಮಾರಿಗೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ದಾಖಲಾದ ದೂರು ಉತ್ತರ ಕೊಡುತ್ತೆ. ವಿಜಯಪುರದ ನಾಗಠಾಣಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಎಂ ಎಲ್ ಎ ದೇವಾನಂದ ಚೌಹಾಣ್ ಅವರ ಪತ್ನಿ ಸುನೀತಾ ನೀಡಿರುವ ದೂರು ಅದು. ಅದರಲ್ಲಿ ಆಕೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ತಮ್ಮ, ತಂಗಿ ಹಾಗೂ ತಮ್ಮನ ಮಗ ಸೇರಿಕೊಂಡು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2.5 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಂಟರೆಸ್ಟಿಂಗ್ಲಿ, ಧಾರವಾಡದ ಪ್ರಹ್ಲಾದ್ ಜೋಷಿಯವರ ಸಂಸದರ ಕಚೇರಿಗೆ ಕರೆದೊಯ್ದು ಈ ಡೀಲ್ ನಡೆಸಲಾಗಿತ್ತು. ಆದರೆ ಟಿಕೆಟನ್ನೂ ಕೊಡದೆ, ಕೊಟ್ಟ ಹಣವನ್ನೂ ವಾಪಾಸು ಮರಳಿಸದೆ, ತಮ್ಮ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸುನೀತಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯಾವಾಗ ನಿನ್ನೆ ಸಂಜೆ ಈ ಕುರಿತು ಎಫ್ ಐ ಆರ್ ದಾಖಲಾಯ್ತೋ, ಆಗಲೇ ಈ ಇಡಿ ದಾಳಿಯ ಪ್ಲ್ಯಾನ್ ರೂಪಗೊಂಡಿದೆ ಎನ್ನಲಾಗುತ್ತಿದೆ. ಮಾರನೇ ದಿನ ಮೀಡಿಯಾಗಳಲ್ಲಿ ಪ್ರಹ್ಲಾದ್ ಜೋಷಿಯ ಕುಟುಂಬದವರ ಈ ಟಿಕೆಟ್ ವಂಚನೆಯ ಹಗರಣ ಚರ್ಚೆಗೆ ಬಂದರೆ, ಜೋಷಿಗೆ ಇರಿಸುಮುರಿಸಾಗುವ ಸ್ಪಷ್ಟ ಸಾಧ್ಯತೆಗಳಿದ್ದವು. ಅದನ್ನು ತಪ್ಪಿಸಿ, ಮೀಡಿಯಾಗಳ ಚರ್ಚೆಯನ್ನು ಬೇರೆಡೆ ತಿರುಗಿಸಿ, ಆ ಮೂಲಕ ಜನರನ್ನೂ ಈ ಪ್ರಕರಣದಿಂದ ಡೈವರ್ಟ್ ಮಾಡುವ ಸಲುವಾಗಿಯೇ ಪೂರ್ವನಿಯೋಜಿತವಲ್ಲದ ಈ ಇಡಿ ದಾಳಿಯನ್ನು ಯೋಜಿಸಲಾಗಿದೆ.
ಇನ್‌ಫ್ಯಾಕ್ಟ್, ಈ ಇಡಿ ದಾಳಿಯ ನೇತೃತ್ವ ವಹಿಸಿರುವ ಐಪಿಎಸ್ ಅಧಿಕಾರಿ ಅಭಿಷೇಕ್ ಗೋಯೆಲ್‌ನನ್ನು ಇ.ಡಿ.ಯ ಸ್ಪೆಷಲ್ ಡೈರೆಕ್ಟರ್ ಆಗಿ ನೇಮಕ ಮಾಡಿದ್ದೇ ಪ್ರಹ್ಲಾದ್ ಜೋಷಿಯ ವಿಶೇಷ ಆಸಕ್ತಿ ಮತ್ತು ಬೆಂಬಲದಿಂದ ಎಂದು ಪೊಲೀಸ್ ಇಲಾಖೆಯ ಮೂಲಗಳು ಪಿಸುಗುಟ್ಟುತ್ತಿವೆ. 2005ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಆತ ಜೋಷಿಯ ಪರಮಾಪ್ತನೆನ್ನಲಾಗಿದೆ. ಅಂತಲೇ ಗುರುತಿಸಿಕೊಂಡಾತ. ಈ ಹಿಂದೆ ಹೈದ್ರಾಬಾದ್ ವಿಭಾಗದ ಇಡಿ ಡೈರೆಕ್ಟರ್ ಆಗಿದ್ದ ಆತನನ್ನು ಇದೇ ಜನವರಿಯಲ್ಲಿ ಕರ್ನಾಟಕ ವಿಭಾಗಕ್ಕೆ ವರ್ಗಾವಣೆ ಮಾಡಿಸಿ ಆತನ ಕೈಗೆ ಮೂಡಾ ತನಿಖೆಯ ಚುಕ್ಕಾಣಿಯನ್ನು ಕೊಟ್ಟದ್ದು ..ಎಲ್ಲವೂ ಪೇಶ್ವೆ ರಕ್ತದ ಕಿತಾಪತಿಯೇ ಆಗಿದೆ.
ಇಲಾಖೆಯಲ್ಲಿ ಅಭಿಷೇಕ್ ಗೋಯೆಲ್ ಬಗ್ಗೆ ಒಳ್ಳೆಯ ಟ್ಯ್ರಾಕ್ ರೆಕಾರ್ಡ್ ಇಲ್ಲ. 2015ರಲ್ಲಿ ಹೈದ್ರಾಬಾದ್‌ನ ನ್ಯಾಷನಲ್ ಪೊಲೀಸ್ ಅಕ್ಯಾಡೆಮಿಗೆ ತರಬೇತಿಗೆಂದು ಕಳಿಸಿದ್ದಾಗ, ಅಲ್ಲಿ ಸಾಕಷ್ಟು ಭಾನ್ಗಡಿ ಮಾಡಿಕೊಂಡು ಬಂದಿದ್ದ. ತರಬೇತಿ ಭಾಗವಾಗಿ ಆಸ್ಟ್ರೇಲಿಯಾಗೆ ಕರೆದೊಯ್ದಿದ್ದಾಗ ಈತನ ಉಪಟಳದಿಂದ ಬೇಸತ್ತ ಟ್ರೈನಿಂಗ್ ಆಫೀಸರ್, ವಾಪಾಸ್ ಬರುತ್ತಿದ್ದಂತೆಯೇ ಕರ್ನಾಟಕದ ಡಿಜಿ-ಐಜಿಪಿಯಾಗಿದ್ದ ಓಂ ಪ್ರಕಾಶ್ ಅವರಿಗೆ ಪತ್ರ ಬರೆದು, ಈತನ ನಡವಳಿಕೆ ಸರಿಯಿಲ್ಲ ಎಂದು ದೂರು ನೀಡಿದ್ದರು. ಅಷ್ಟೇ ಅಲ್ಲ, ಈತನ ತರಬೇತಿಗೆಂದು ಖರ್ಚು ಮಾಡಿದ್ದ 63 ಸಾವಿರ ರೂಪಾಯಿಗಳನ್ನು ಆತನಿಂದಲೇ ವಸೂಲಿ ಮಾಡಿ ಕೊಡಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದರು. (https://www.thehindu.com/news/cities/bangalore/dcp-abhishek-goyal-charged-with-misconduct/article8044240.ece) ಆ ವಿಚಾರವಾಗಿ ಆತನ ಮೇಲೆ ಇಲಾಖೆಯ ಎನ್‌ಕ್ವೈರಿ ನಡೆದಾಗ, ನೆರವಿಗೆ ಬಂದು ಬಚಾವು ಮಾಡಿದ್ದು ಇದೇ ಪ್ರಹ್ಲಾದ್ ಜೋಷಿ ಎಂದು ಹೇಳುತ್ತಿವೆ ಮೂಲಗಳು.
ಜೋಷಿಯ ಇಂತಹ ಶಿಷ್ಯ ಇಡಿಯ ಚುಕ್ಕಾಣಿ ಹಿಡಿದು ಕೂತ ಮೇಲೆ ಏನಾಗಬೇಕಿತ್ತೋ ಅದೇ ಆಗುತ್ತಿದೆ. ಎಲ್ಲವೂ ಪೂರ್ವ ನಿರ್ಧರಿತ ಸ್ಕ್ರಿಪ್ಟ್ . ಯಾವಾಗ ತನ್ನ ತಮ್ಮ ತಂಗಿಯ ಮೇಲೆ ಪ್ರಕರಣ ದಾಖಲಾಗಿ, ಜನ ತನ್ನ ಕುಟುಂಬದ ಮಾನ ಹರಾಜು ಹಾಕುತ್ತಾರೆ ಮತ್ತು ಆ ಕಾರಣಕ್ಕೆ ತಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಸಂಗವೂ ಎದುರಾಗಬಹುದು ಅನ್ನೋದು ಜೋಷಿಗೆ ಅರ್ಥವಾಯಿತೋ, ಆಗ ಶಿಷ್ಯನ ಮೂಲಕ ಈ ಇಡಿ ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಬಕೇಟ್ ಮೀಡಿಯಾಗಳಿಗೆ ಅಷ್ಟೇ ಸಾಕಾಯಿತು. ಎಲ್ಲರೂ ಮುಡಾ ಮೇಲೆ ನಡೆದ ಇಡಿ ದಾಳಿಯನ್ನೇ ದೊಡ್ಡ ಸುದ್ದಿಯಾಗಿ ಇಡೀ ದಿನ ಬಿತ್ತರಿಸಿದವೇ ವಿನಾಃ ಜೋಷಿ ಕುಟುಂಬದ ಡೀಲ್ ಪ್ರಕರಣವನ್ನು ಮೂಸಿಯೂ ನೋಡಲಿಲ್ಲ. ಟಿವಿ ಪರದೆಯ ಮೇಲೆ ಚರ್ಚೆಗೂ ತೆಗೆದುಕೊಳ್ಳಲಿಲ್ಲ.
ಅದೇನೆ ಇರಲಿ, ಈ ಮಾರಾಟಕ್ಕಿಟ್ಟ ಮೀಡಿಯಾಗಳನ್ನು ಮತ್ತು ಬೆನ್ನೆಲುಬಿಲ್ಲದ ತನಿಖಾ ಸಂಸ್ಥೆಗಳನ್ನು ಹೇಗೆಲ್ಲ ಮಿಸ್‌ಯೂಸ್ ಮಾಡ್ಕೊಬೇಕು ಅನ್ನೋದನ್ನು ಬಿಜೆಪಿ ನಾಯಕರಿಂದ ಕಲಿಯಬೇಕು ಕಣ್ರಿ.
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು



