ಕೆಂಪೇಗೌಡರು ಕಟ್ಟಿರುವ ಬೆಂಗಳೂರು ನಗರ ಸುರಕ್ಷಿತವಾಗಿದೆ. ರಾಜಕಾರಣಿಗಳು ವಿಸ್ತರಿಸಿದ ಬೆಂಗಳೂರು ಸಮಸ್ಯೆಗಳ ಆಗರವಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸುಮಾರು 500 ವರ್ಷಗಳ ಹಿಂದೆ ವೈಜ್ಞಾನಿಕವಾಗಿ ದೂರದೃಷ್ಟಿತ್ವದ ಯೋಜನೆಗಳೊಂದಿಗೆ ನಿಸ್ವಾರ್ಥವಾಗಿ ಕೆಂಪೇಗೌಡರು ಕಟ್ಟಿದಂತಹ ಬೆಂಗಳೂರು ಎಂತಹ ಮಳೆಯನ್ನು ಸಹ ಯಾವುದೇ ರೀತಿಯ ಸಮಸ್ಯೆಯನ್ನ ಎದುರಿಸುತ್ತಿಲ್ಲ. ಅದಕ್ಕೆ ಉದಾಹರಣೆ ಎಂದರೆ ಕೆಂಪೇಗೌಡರ ಕಾಲದ ಹಳೆ ಬೆಂಗಳೂರು ನಗರಗಳಲ್ಲಿ ಮಳೆ ಎಷ್ಟೇ ಪ್ರಮಾಣದಲ್ಲಿ ಆದರೂ ಮನೆಗಳಿಗೆ ನೀರು ನುಗ್ಗುತ್ತಿಲ್ಲ, ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿಲ್ಲ, ಅಂತಹ ಗಂಭೀರವಾದ ಸಮಸ್ಯೆಗಳು ನಾಗರೀಕರನ್ನ ಬಾಧಿಸುತ್ತಿಲ್ಲ.
ಆದರೆ 2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೆಂಗಳೂರು ನಗರಕ್ಕೆ ಬೃಹತ್ ಮಹಾನಗರ ಪಾಲಿಕೆ ಎಂದು ನಾಮಕರಣ ಮಾಡಿ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿಕೊಂಡ ಕಾರಣದಿಂದ ಇಂದು ಬೆಂಗಳೂರು ಇಷ್ಟೊಂದು ಸಮಸ್ಯೆಗಳನ್ನು ಎದುರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾವ ಪ್ರದೇಶಗಳು ಗ್ರಾಮೀಣ ಭಾಗವಾಗಿದ್ದು, ಕೆರೆಗಳು ಮತ್ತು ರಾಜ ಕಾಲುವೆಗಳು ಯಾವುದೇ ಒತ್ತುವರಿಗಳಾಗದೆ ಸುರಕ್ಷಿತವಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಭೂಮಿಗಳೇ ಇತ್ತು, ಈ ಕಾರಣದಿಂದ ಎಂತಹ ಮಳೆ ಬಂದರೂ ಸಹ ಈ ಪ್ರದೇಶಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಆಗುತ್ತಿರಲಿಲ್ಲ.
110 ಹಳ್ಳಿಗಳನ್ನ ಅವೈಜ್ಞಾನಿಕವಾಗಿ ದೂರದೃಷ್ಟಿತ್ವದ ಯೋಜನೆಗಳಿಲ್ಲದೆ ಯಾವುದೇ ರೀತಿಯ ನಿರ್ದಿಷ್ಟವಾದಂತಹ ಯೋಜನೆಗಳಿಲ್ಲದೆ ಬೆಂಗಳೂರು ನಗರದ ವ್ಯಾಪ್ತಿಗೆ ಸೇರಿಸಿಕೊಂಡ ಕಾರಣದಿಂದ ಇಲ್ಲಿ ಕೃಷಿ ಭೂಮಿಗಳು ಮಾಯವಾಗಿ ವಸತಿ ಪ್ರದೇಶಗಳಾಗಿ ಬದಲಾಯಿಸಿ ನೂರಾರು ಸಂಖ್ಯೆಯ ಮನೆಗಳುಳ್ಳ ಸಹಸ್ರಾರು ಅಪಾರ್ಟ್ಮೆಂಟ್ ಗಳು ಎಲ್ಲಾ ಕಡೆ ತಲೆಯೆತ್ತಿರುತ್ತದೆ.
ಕೆರೆಗಳಿಗೆ ನೀರು ಹರಿಯುವ ಜಾಗವೆಲ್ಲವೂ ಒತ್ತುವರಿಯಾಗಿದೆ. ರಾಜಾ ಕಾಲುವೆಗಳಿಗೆ ಸರಿಯಾದಂತಹ ವ್ಯವಸ್ಥೆಗಳಿಲ್ಲ. ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಇನ್ನೂ ಐವತ್ತು ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರು ಸಹ ಇಲ್ಲಿನ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಸೌಲಭ್ಯವನ್ನು ಕೊಡುವುದು ಕಷ್ಟ ಸಾಧ್ಯವಾಗಿದೆ.
ಬೆಂಗಳೂರು ನಗರದ ಬೆಳವಣಿಗೆಗಾಗಿ ಕೆಂಪೇಗೌಡರು ನಾಲ್ಕು ಮೂಲೆಗಳಲ್ಲಿ ನಾಲ್ಕು ಗೋಪುರಗಳನ್ನು ನಿರ್ಮಿಸಿ ಗಡಿಯನ್ನು ನಿಗದಿಪಡಿಸಿದ್ದರು. ಆ ಗಡಿಯನ್ನು ದಾಟಿ ಬೆಂಗಳೂರಿನ ರಾಜಕಾರಣಿಗಳು ತಮಗಿಷ್ಟ ಬಂದ ರೀತಿಯಲ್ಲಿ ವಿಸ್ತರಿಸಿಕೊಂಡು ಬಂದ ಕಾರಣದಿಂದಾಗಿ ಇಂದು ಮಳೆ ಬಂದರೆ ಬೆಂಗಳೂರು ನಗರದ ಹೊರವಲಯದ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಜಲಪ್ರಳಯಗಳಾಗುತ್ತಿದೆ. ನದಿಗಳು ಕೆರೆಗಳಾಗಿ ಸೃಷ್ಟಿಯಾಗಿದೆ.
ಈ ಎಲ್ಲಾ ಅನಾಹುತಗಳಿಗೆ ಅವೈಜ್ಞಾನಿಕವಾಗಿ ಬೆಂಗಳೂರನ್ನ ಬೆಳೆಸಿರುವುದೇ ಕಾರಣ. ಇನ್ನು ಮುಂದಾದರು ಬೆಂಗಳೂರನ್ನು ಮತ್ತಷ್ಟು ವಿಸ್ತರಿಸುತ್ತಾ ಎಲ್ಲಾ ಪ್ರದೇಶಗಳನ್ನು ಬಿಬಿಎಂಪಿಗೆ ಸೇರಿಸಿಕೊಳ್ಳುತ್ತಾ ಹೋದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕೆರೆಗಳಿಗೆ ನೀರು ಹರಿಯುವ ಮಾರ್ಗವನ್ನು ಹುಡುಕಿ ಅದಕ್ಕಿರುವ ಅಡೆತಡೆಗಳನ್ನು ನಿವಾರಿಸಿ ಜೊತೆಗೆ ರಾಜಾ ಕಾಲುವೆಗಳಲ್ಲಿರುವ ಹೂಳು ಎತ್ತಿಸುವ ಕೆಲಸವನ್ನು ಮಾಡಿ ಬೆಂಗಳೂರು ನಗರಕ್ಕೆ ಮಳೆಗಾಲದಲ್ಲಿ 12 ರಿಂದ 15 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಇಂತಹ ನೀರಿನ ಪ್ರಮಾಣವನ್ನ ಸರಿಯಾದ ರೀತಿಯಲ್ಲಿ ನಾಲ್ಕು ಮೂಲೆಗಳಲ್ಲಿ ಸಂಗ್ರಹಿಸುವಂತಹ ಕೆಲಸವನ್ನು ಮಾಡಿದರೆ ಅದನ್ನ ಮರುಬಳಕೆ ಮಾಡಿ ಶುದ್ಧೀಕರಣ ಮಾಡಿ ಕುಡಿಯುವ ನೀರಿಗೆ ಉಪಯೋಗಿಸಿಕೊಳ್ಳಬಹುದು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಬಿದ್ದ ಸಂದರ್ಭದಲ್ಲಿ ಆ ನೀರನ್ನು ಸ್ವೀಕರಿಸುವಂತಹ ಕೆಲಸ ಆದರೆ ಸಮಸ್ಯೆಗಳು ಪರಿಹಾರವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಆಲೋಚಿಸಬೇಕು. ಸಾರ್ವಜನಿಕರು ಸಹ ಮುಂದಿನ ದಿನಗಳಲ್ಲಿ ನಿವೇಶನಗಳನ್ನ ಮತ್ತು ಮನೆಗಳನ್ನು ಖರೀದಿಸುವ ಸಂದರ್ಭದಲ್ಲಿ ಪ್ರಕೃತಿಯ ವಿಕೋಪದ ಪರಿಣಾಮಗಳ ವಿಚಾರವನ್ನು ಪರಿಗಣಿಸಿ ನಂತರ ಖರೀದಿಯ ವಿಚಾರವನ್ನ ನಿರ್ಧರಿಸಬೇಕು.
ಕೇವಲ ಸರ್ಕಾರವನ್ನ ದೂರುವುದಲ್ಲ, ಅಧಿಕಾರಿಗಳನ್ನು ನಿಂದಿಸುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸಮಸ್ಯೆಯ ಮೂಲವನ್ನು ಹುಡುಕುವಂಥ ಪ್ರಯತ್ನವನ್ನು ಮಾಡಬೇಕು. ಒಟ್ಟಾರೆಯಾಗಿ ಇಂತಹ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಜನರ ಬದುಕಿನ ಹಿತಕ್ಕಾಗಿ ದುಡಿಯುತ್ತಿರುವ ಎನ್ ಡಿ ಆರ್ ಎಫ್ ಸಿಬ್ಬಂದಿಯವರಿಗೆ ಮತ್ತು ಬಿಬಿಎಂಪಿಯ ನೌಕರರಿಗೆ ಎಲ್ಲರಿಗೂ ಸಹ ಧನ್ಯವಾದಗಳು ಹೇಳಬೇಕಾಗಿದೆ.
ಪರಿಸ್ಥಿತಿಯಿಂದ ಒಂದು ಸಂಗತಿಯಂತೂ ಸ್ಪಷ್ಟವಾಯಿತು. ಕೆಂಪೇಗೌಡರಿಗೆ ಮತ್ತು ಮೈಸೂರು ಮಹಾರಾಜರು ಅದರಲ್ಲೂ ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಇವರುಗಳಿಗೆ ಇದ್ದಂತಹ ವೈಜ್ಞಾನಿಕವಾದಂತಹ ಮುಂದಾಲೋಚನೆಯ ದೂರ ದೃಷ್ಟಿತ್ವದ ಬುದ್ಧಿವಂತಿಕೆಯಿಂದ ಅವರುಗಳು ನಿರ್ಮಿಸಿರುವಂತಹ ಬೆಂಗಳೂರು ತನ್ನ ಸೌಂದರ್ಯವನ್ನು ಉಳಿಸಿಕೊಂಡಿದೆ. ಸಮಸ್ಯೆಗಳು ತಲೆದೋರದ ರೀತಿಯಲ್ಲಿ ಜನರಿಗೆ ಬದುಕನ್ನು ನೀಡಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




