ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿಯವರು ಜುಲೈ 31ರಂದು ಸೇವಾ ನಿವೃತ್ತಿ ಹೊಂದಲಿದ್ದು, ಅವರ ಬದುಕಿನ, ವೃತ್ತಿ ಜೀವನದ ವಿವಿಧ ಹಂತ, ಬೆಳವಣಿಗೆಗಳ ಕುರಿತಂತೆ ಅಭಿನಂದನಾ ಗ್ರಂಥ ಹೊರತರಲಾಗುತ್ತಿದೆ ಎಂದು ಗ್ರಂಥ ಪ್ರಕಟಣಾ ಸಮಿತಿ ತಿಳಿಸಿದೆ.
- ಕಳ್ಳಾಟ ಇಲ್ಲದಿದ್ದರೆ ಮುಚ್ಚಿಡುವುದಕ್ಕೇನಿದೆ?
- ಮೊದಲ ಸಿನಿಮಾ ಚಿತ್ರ ಬಿಡುಗಡೆ ನೆನಪು ಮಾಡಿಕೊಂಡ ಅನಿರುದ್ಧ
- ಮಲೆನಾಡ ಶೈಲಿಯ ಬಿಸಿಬಿಸಿ ‘ನೀರುಪ್ಪಿಟ್ಟು’ ಮಾಡುವ ವಿಧಾನ
- ದಸರಾ ಪುಸ್ತಕ ಮೇಳದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅರ್ಜಿ ಆಹ್ವಾನ
- ಎಸ್ಐಆರ್ ರಾಜಕೀಯಕ್ಕೆ ಬಳಕೆ ಸರಿಯಲ್ಲ: ಡಿ ಕೆ ಶಿವಕುಮಾರ್
ಈ ಕುರಿತು ಪ್ರಕಟಣೆ ನೀಡಿರುವ ಸಮಿತಿಯವರು, ಅಭಿನಂದನಾ ಗ್ರಂಥಕ್ಕೆ ಅವರ ಪರಿಚಯಸ್ಥರು, ಬಂಧು-ಬಳಗದವರು, ಸ್ನೇಹಿತರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಅವರ ಕುರಿತಂತೆ ಲೇಖನಗಳನ್ನು ಆಹ್ವಾನಿಸಿದ್ದಾರೆ. 500 ಪದಗಳ ಮಿತಿಯ ಲೇಖನಗಳನ್ನು ನುಡಿ ಇಲ್ಲವೇ ಯುನಿಕೋಡ್‌ನಲ್ಲಿ ಟೈಪ್ ಮಾಡಿ cr.gfgckpl@gmail.com ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಜುಲೈ 2ರ ಸಂಜೆ 5-30ರೊಳಗೆ ಲೇಖನಗಳನ್ನು ಕಳುಹಿಸಲು ಕೋರಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಬಸವರಾಜ ಕರುಗಲ್ (9380605892), ಪ್ರಕಾಶಗೌಡ (9980910533), ಮಂಜುನಾಥ್ ಆರೆಂಟ್ನೂರು (9972363064), ಮಹಾಂತೇಶ ನೆಲಾಗಣಿ (9964811198), ಡಾ.ಪ್ರಕಾಶ್ ಬಳ್ಳಾರಿ (9481440085) ಇವರನ್ನು ಸಂಪರ್ಕಿಸಬಹುದು.




