ಕಲಾ ಪ್ರೇಕ್ಷಕರಿಗೆ ಭರಪೂರ ಮನರಂಜನೆ
ಬಳ್ಳಾರಿ: ಸ್ಥಳೀಯ ಮಟ್ಟದ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ‘ತಿಂಗಳ ಸೊಬಗು’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದೆ.
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕಗಳ ಪಟ್ಟಿ
- ಕನ್ನಡ ಪರ ನೀತಿ ನಿರೂಪಣೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ
ಈ ತಿಂಗಳು ಏರ್ಪಡಿಸಿದ್ದ ‘ತಿಂಗಳ ಸೊಬಗು’ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸಿಗೆ ತುಸು ನೆಮ್ಮದಿ ದೊರೆಯುವ ತವಕದಿಂದ ಆಗಮಿಸಿದ್ದ ಕಲಾ ಪ್ರೇಕ್ಷಕರಿಗೆ, ಸಾರ್ವಜನಿಕರಿಗೆ ಭರಪೂರ ಮನರಂಜನೆ ನೀಡಿತು.







ಮುಸ್ಸಂಜೆ ಮೋಡ ಕವಿದು ಕತ್ತಲು ಆಗಮನ ಸಮಯದಲ್ಲಿ ಬಳ್ಳಾರಿ ಮೂಲದ ಜೀ ಕನ್ನಡ ವಾಹಿನಿಯ ಸರಿಗಮಪ -19 ರ ಸ್ಪರ್ಧಾಳು ಸೃಷ್ಟಿ ಸುರೇಶ್ ಅವರ ಸುಗಮ ಸಂಗೀತವು ಕೇಳುಗರು ಕಿವಿ ತಂಪಾಗಿಸಿತು. ಸಂಗೀತಕ್ಕೆ ಮನಸೋತು ಕಲಾ ಪ್ರೇಕ್ಷಕರು ಚಪ್ಪಾಳೆಗಳ ಸುರಿಮಳೆಗೈದರು.
ಸಿರುಗುಪ್ಪದ ಕೆ.ನರಸಿಂಹ ಮೂರ್ತಿ ಅವರ ಹಾಸ್ಯ ಚಟಾಕಿಗೆ ನೆರೆದಿದ್ದವರು ನಗೆಗಡಲಲ್ಲಿ ತೇಲಾಡಿದರು. ಬಳ್ಳಾರಿಯ ಸುಜಾತ ಕಲಾ ಟ್ರಸ್ಟ್ ಅವರ ಸಮೂಹ ನೃತ್ಯವು ನೋಡುಗರ ಕಣ್ಮನ ಸೆಳೆಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಕಲಾವಿದರು, ಸಾರ್ವಜನಿಕರು ಉಪಸ್ಥಿತರಿದ್ದರು.




