ಭಾರತದ ಬಹು ಸಂಸ್ಕೃತಿಯ ನೈಜ ಇತಿಹಾಸ ಕುರಿತು ಜಗದೀಶ್ ಕೊಪ್ಪ ಲೇಖನ ಸರಣಿ

4 years ago

ಸಮಾನ ಮನಸ್ಕ ಗೆಳೆಯರಲ್ಲಿ ಸವಿನಯ ವಿನಂತಿ.

ಮಿತ್ರರೇ ಅನಾರೋಗ್ಯ ಮತ್ತು ಕಣ್ಣಿನ ದೃಷ್ಟಿಯ ಕೊರತೆಯಿಂದ ಬರವಣಿಗೆಗೆ ನಾನು ಈಗ ಹೆಚ್ಚು ಆಧ್ಯತೆ ನೀಡಿರಲಿಲ್ಲ. ದಿನವೊಂದಕ್ಕೆ ಐದು ಪುಟಗಳಷ್ಟು ಬರೆಯುತ್ತಿದ್ದ ನಾನು ಈಗ ಒಂದು ಪುಟಕ್ಕೆ ಮಾತ್ರ ಸೀಮಿತವಾಗಿದ್ದೆ. ಈ ಜನ್ಮಕ್ಕೆ ನಾನು ಓದಿದ್ದು ಮತ್ತು ಬರೆದಿದ್ದು ಸಾಕು ಎಂಬ ಸಂತೃಪ್ತ ಮನೋಭಾವ ಕೂಡ ಇದಕ್ಕೆ ಕಾರಣವಾಗಿತ್ತು. ಹಾಗಾಗಿ ನಾನು ಸಾಮಾಜಿಕ ತಾಣಗಳಲ್ಲಿ ಫೇಸ್ ಬುಕ್ ಹೊರತಾಗಿ ಇತರೆ ವಿಭಾಗಗಳಲ್ಲಿ ಭಾಗಿಯಾಗುವುದಿಲ್ಲ. ಜೊತೆಗೆ ಈವರೆಗೆ ಸುಮಾರು ಹದಿನೈದು ಸಾವಿರ ಪ್ರೆಂಡ್ ರಿಕ್ವೆಸ್ಟ್ ಗಳನ್ನು ತಿರಸ್ಕರಿಸಿದೆ. ವೈಯಕ್ತಿಕವಾಗಿ ಬಲ್ಲವರ ಜೊತೆ ಮಾತ್ರ ನಾನು ಸಂವಾದ ಮಾಡಿಕೊಂಡು ಬಂದಿದ್ದೀನಿ. ಮುಂದೆಯೂ ಕೂಡ ಅದೇ ಸ್ಥಿತಿ ನನ್ನದು.
ಕಳೆದ ಒಂದು ತಿಂಗಳಿಂದ ಹಿಂದೂ ಧರ್ಮದ ಹೆಸರಿನಲ್ಲಿ ಕೆಲವು ಅಯೋಗ್ಯರು ಬಹುಸಂಸ್ಕೃತಿಯ ಭಾರತಕ್ಕೆ ಬೆಂಕಿ ಇಡುತ್ತಿರುವ ಈ ಸಂದರ್ಭದಲ್ಲಿ ನಾನು ಸುಮ್ಮನೆ ಕೂರಲು ಸಾಧ್ಯವಾಗುತ್ತಿಲ್ಲ. ಅರವತ್ತೈದು ತುಂಬಿ ಅರವತ್ತಾರಕ್ಕೆ ಕಾಲಿಡುತ್ತಿರುವ ನಾನು ನಾಲ್ಕು ದಶಕದ ಬರೆವಣಿಯ ಬದುಕಿನಲ್ಲಿ ಪಡೆಯಬಹುದಾದ ಪ್ರಶಸ್ತಿ ಗೌರವ ಎಲ್ಲವನ್ನೂ ಪಡೆದಿದ್ದೀನಿ. ಪ್ರಶಸ್ತಿಗಾಗಿ ಯಾವ ವ್ಯಕ್ತಿಯ ಬಳಿ ಅಥವಾ ಸರ್ಕಾರದ ಬಳಿ ನಾನು ಹಲ್ಲುಗಿಂಜಿದವನಲ್ಲ. ಸರ್ಕಾರದ ಯಾವುದೇ ಸ್ಥಾನಮಾನಗಳನ್ನು ಬಯಸಿದವನಲ್ಲ. ಹೇಳಬೇಕಾದ ವಾಸ್ತವ ಕಟು ಸತ್ಯಗಳನ್ನು ಹೇಳಲಾಗದೆ ಇರಲಾಗದ ಆತ್ಮಸಾಕ್ಷಿಯ ಪ್ರಜ್ಞೆ ಸದಾ ನನ್ನನ್ನು ಕಾಡಿದೆ ಮತ್ತು ಕಾಪಾಡಿಕೊಂಡು ಬಂದಿದೆ.
ಈ ವಾರದಿಂದ ಭಾರತದ ಬಹು ಸಂಸ್ಕೃತಿಯ ನೈಜ ಇತಿಹಾಸ ಕುರಿತಂತೆ ಸತತ ಐವತ್ತು ಲೇಖನಗಳನ್ನು ಬರೆಯಲು ನಿರ್ಧರಿಸಿದ್ದೀನಿ. ಇವುಗಳನ್ನು ಯಾವುದೇ ಪತ್ರಿಕೆ ಅಥವಾ ತಾಣಗಳಿಗೆ ಬರೆಯುವ ಮನಸ್ಸು ಇಲ್ಲ. ಏಕೆಂದರೆ, ಪತ್ರಿಕೆಗೆ ತಕ್ಕಂತೆ ತುಟಿಗೆ ತುಪ್ಪ ಹಚ್ಚಿಕೊಂಡು ಬರೆಯುವವ ನಾನಲ್ಲ. ನೇರಮಾತುಗಳಲ್ಲಿ ದಾಖಲೆ ಸಮೇತ ನಾನು ಬರೆಯುವ ಲೇಖನಗಳನ್ನು ಪತ್ರಿಕೆಗಳು, ತಾಣಗಳು ಮತ್ತು ಗ್ರೂಪ್ ಗಳು ಸೃಷ್ಟಿಯಾಗಿರುವ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ನಲ್ಲಿ ಗೆಳೆಯರು ಹಂಚಿಕೊಳ್ಳಬಹುದು. ದಯವಿಟ್ಟು ಈ ಲೇಖನಗಳನ್ನು ಹಂಚಿಕೊಂಡು ನಮ್ಮ ಶೂದ್ರರು, ದಲಿತರು ಮತ್ತು ಮುಸ್ಲಿಂ ಯುವಕರು ಸಂಘಪರಿವಾರದ ಗುಂಡಿಗೆ ಬೀಳದಂತೆ ನೋಡಿಕೊಳ್ಳಿ.

ನಾವು ಬದುಕುತ್ತಿರುವ ವರ್ತಮಾನದ ಜಗತ್ತಿನಲ್ಲಿ ಎಲ್ಲಾ ಧರ್ಮಗಳಿಗಿಂತ ಅಪ್ಪಟ ಮನುಷ್ಯನಾಗಿ ಬದುಕುವ ಮಾನವ ಧರ್ಮ ದೊಡ್ಡದು. ಇದನ್ನು ಅನ್ಯ ಧರ್ಮಗಳನ್ನು ದ್ವೇಷಿಸುವ ಮುಠಾಳರಿಗೆ ಹೇಳೋಣ. ಅನ್ಯಧರ್ಮದ ಆಹಾರ ಪದ್ಧತಿ, ಉಡುಪು ಮತ್ತು ಸಂಸ್ಕೃತಿಯ ಕುರಿತಂತೆ ಮಾತನಾಡುವವರನ್ನು ಮನುಷ್ಯರು ಎಂದು ಕರೆಯಲಾಗುವುದಿಲ್ಲ ಅವರನ್ನು ಮೃಗಗಳು ಎಂದು ಕರೆಯಲಾಗುತ್ತದೆ. ಇದನ್ನು ನಾನು ನನ್ನ ಲೇಖನಗಳಲ್ಲಿ ಸಾಬೀತು ಪಡಿಸುತ್ತೇನೆ. ಇಸ್ಲಾಂ ಧರ್ಮಿಯರ ಕುರಿತು ವಿಷಕಕ್ಕುವ ಅಯೋಗ್ಯರಿಗೆ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಮಾತನಾಡುವ ಅವಿವೇಕಿಗಳಿಗೆ ಭಾರತದ ಘನತೆಯ ಇತಿಹಾಸವನ್ನು ವಿವರಿಸುತ್ತೇನೆ. 1857 ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದು ಪರಿಗಣಿಸಲಾಗಿದೆ. ಈ ಹೋರಾಟದಲ್ಲಿ ಹಿಂದೂ ನಾಯಕರ ಜೊತೆ ಕೈ ಜೋಡಿಸಿ ಬ್ರಿಟೀಷರ ವಿರಿದ್ಧ ಹೋರಾಡಿದ ಮೂವರು ಮುಸ್ಲಿಂ ಮಹಿಳೆಯರ ಇತಿಹಾಸ ಈ ಮುಠಾಳರಿಗೆ ಗೊತ್ತಿದ್ದರೆ ಒಬ್ಬನಾದರೂ ನನ್ನೆದರು ಕೈ ಎತ್ತಲಿ.

32 ಸಾವಿರ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ಮಂಗಳನಾಥ ದೇವಾಲಯವಿತ್ತು ಎಂದು ಬೊಗಳೆ ಬಿಡುವ ಈ ಅವಿವೇಕಿಗಳಿಗೆ ಜಗತ್ತಿನ ಖಗೋಳಸಾಸ್ತ್ರದ ಕನಿಷ್ಟ ಜ್ಞಾನವಿದ್ದಂತೆ ಕಾಣುವುದಿಲ್ಲ. ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಸಾರಿದ ಗೆಲಿಲಿಯೋ ಮತ್ತು ಕೂಪರ್ನಿಕಸ್ ಅವರ ಕಾಲಮಾನ ಗೊತ್ತಿಲ್ಲ. ಹಸಿಸುಳ್ಳುಗಳನ್ನು ಹರಡುತ್ತಿರುವ ಈ ಹಲಾಲುಕೋರರ ಆರ್ಭಟಗಳ ನಡುವೆ ನಾನು ಓದಿಕೊಂಡ ಪುಸ್ತಕಗಳು ಮತ್ತು ಜ್ಞಾನ ಮೌನವ್ರುತದಲ್ಲಿ ಕಳೆದು ಹೋಗಬಾರದು ಎಂದು ನಿರ್ಧರಿಸಿದ್ದೀನಿ.

ನನ್ನ ಮಾಹಿತಿಯನ್ನು ಅಥವಾ ಲೇಖನವನ್ನು ಟೀಕಿಸುವ ಸಂಘಪರಿವಾರದ ಅವಿವೇಕಿಗಳಿಗೆ ನನ್ನ ಬಹಿರಂಗ ಸವಾಲು. ನೀವು ಕರ್ನಾಟಕದ ಯಾವುದೇ ಮೂಲೆಯಲ್ಲಿರಿ ಚಿಂತೆಯಿಲ್ಲ. ನಿಮಗೆ ಪ್ರಯಾಣದ ವೆಚ್ಚ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಂಡ್ಯ ನಗರಕ್ಕೆ ಬಂದು ಹೋಗಲು ನಾನು ಮಾಡುತ್ತೇನೆ. ನೀವು ನನ್ನ ಮಾಹಿತಿ ತಪ್ಪು ಎಂದು ಸಾಬೀತು ಪಡಿಸಲು ವಿಫಲರಾದಲ್ಲಿ ಚಡ್ಡಿಯೊಳಗೆ ಚರ್ಪು ಚೆಲ್ಲಾಡುವ ಹಾಗೆ ಬೀಳುವ ಏಟುಗಳಿಗೂ ಸಿದ್ಧರಾಗಿರಬೇಕು. ಮಂಡ್ಯ ಭಾಷೆಯಲ್ಲಿ ಚರ್ಪು ಅಂದರೆ ರಸಾಯನ ಎಂದರ್ಥ. ಗೋತ್ತಾಯಿತೆ? ಯಾವ ರಸಾಯನ ಎಂದು?

ದಯಮಾಡಿ ಗೆಳೆಯರು ಲೇಖನಗಳನ್ನು ಹಂಚಿಕೊಳ್ಳುವುದರ ಮೂಲಕ ಸಂಘ ಪರಿವಾರದ ಚಡ್ಡಿ ಬಿಚ್ಚಲು ಸಹಕರಿಸಬೇಕಾಗಿ ಮನವಿ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply