ವಿದ್ಯಾರ್ಥಿಗಳಿಗಾಗಿ ಕಸಾಪದಿಂದ ಕಥಾ ಸಂಭ್ರಮಕ್ಕೆ ಆಹ್ವಾನ

3 years ago

#invitation #story #celebration #Kasapa #students

ಶಿವಮೊಗ್ಗ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರೌಢಶಾಲೆಯಿಂದ ಪಿ.ಯು., ಪದವಿ, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ಸೇರಿದಂತೆ ಹೊಸತಲೆಮಾರಿಗೆ ಸಾಹಿತ್ಯ ಅಭಿರುಚಿ ಮೂಡಿಸುವ ಸಲುವಾಗಿ ರಾಜ್ಯೋತ್ಸವ ಕಥಾ ಸಂಭ್ರಮ ಏರ್ಪಡಿಸಲಿದ್ದೇವೆ. ಉತ್ತಮ ಕಥೆಗಳಿಗೆ ಬಹುಮಾನ. ಕಥಾ ಗೋಷ್ಠಿಯಲ್ಲಿ ಕಥೆ ಹೇಳಲು ಅವಕಾಶ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ವಿದ್ಯಾರ್ಥಿ ಕಥಾ ಸಂಭ್ರಮದಲ್ಲಿ ಭಾಗವಹಿಸಲು ಆಸಕ್ತಿಯಿರುವವರು ಕನಿಷ್ಠ ಒಂದು ಪುಟ, ಗರಿಷ್ಠ ಎರಡು ಪುಟ ಮೀರದಂತೆ ಕಥೆ ಬರೆಯಲು ಅವಕಾಶವಿದೆ. ಪ್ರಚಲಿತ ವಿದ್ಯಮಾನಗಳು ಕಥೆಯ ವಸ್ತುವಾಗಿ ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿದೆ. ನಾಡು, ನುಡಿ, ಪ್ರಕೃತಿ, ವ್ಯವಸ್ಥೆ, ಶಿಕ್ಷಣ, ಆಡಳಿತ, ಸುಳ್ಳು, ಮೋಸ, ವಂಚನೆ, ಭ್ರಷ್ಟಾಚಾರ, ಬಡತನ, ಮಳೆ, ಬೆಳೆ, ನೀರು, ಯುದ್ಧ, ಬರಗಾಲ, ನಿರುದ್ಯೋಗ, ಅಸಮಾನತೆ, ಕೌರ್ಯ ಇವೆಲ್ಲವೂ ದೂರವಾಗಿಸಿ ಸಮ ಸಮಾಜದ ನಿರ್ಮಾಣದಲ್ಲಿ ನಮ್ಮ ಯುವಜನರು ನಿರ್ವಹಿಸಬಹುದಾದ ಚಿತ್ರಣಗಳು ಕಥೆ ಒಳಗೊಂಡರೆ ಉತ್ತಮ.

ಕಥೆ ಬರೆದು ಅಕ್ಟೋಬರ್ ೩೦ ರೊಳಗೆ ಡಿ. ಮಂಜುನಾಥ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ. ದೂರವಾಣಿ 9449552795 ತಲುಪಿಸಲು ಕೋರಲಾಗಿದೆ.

Leave a Reply