ಮಂಗಳೂರು ದಸರಾ ಮೆರವಣಿಗೆಯಲ್ಲಿ ಪ್ರಥಮ ಬಾರಿಗೆ ಸೌಹಾರ್ದತೆಯ ಸ್ತಬ್ಧಚಿತ್ರ

3 years ago

#harmony #tableau #firsttime #Mangalore #Dasara

ಆತ್ಮೀಯರಿಗೆ ನಾಡ ಹಬ್ಬ ದಸರಾದ ಶುಭಾಶಯಗಳು…..

ವೈಭವದ ಮಂಗಳೂರು ದಸರಾ ಮೆರವಣಿಗೆಯಲ್ಲಿ ಪ್ರಥಮ ಬಾರಿಗೆ ಸೌಹಾರ್ದತೆಯ ಸ್ತಬ್ಧಚಿತ್ರ

ನಾಡ ಹಬ್ಬ ದಸರಾ ನಾಡಿನ ಸಾಂಸ್ಕೃತಿಕ ಹಬ್ಬವಾಗಿದ್ದು ಜನಸಾಮಾನ್ಯರೆಲ್ಲರೂ ಭಾವೈಕ್ಯತೆಯಿಂದ ದಸರಾ ಸಂಭ್ರಮದಲ್ಲಿ ಪಾಲ್ಗೊಂಡಾಗ ನಾಡಿನ ಐಕ್ಯತೆ ಮತ್ತು ಸಮಗ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಬಹುದು.

ಈ ನಿಟ್ಟಿನಲ್ಲಿ ಮಂಗಳೂರು ದಸರಾದಲ್ಲಿ ಸರ್ವ ಜನಾಂಗದ ಜನರನ್ನು ಒಂದುಗೂಡಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇವೆ. ಈ ಬಾರಿಯ ಮಂಗಳೂರು ದಸರಾದ ವೈಭವದ ಮೆರವಣಿಗೆಯಲ್ಲಿ “ಸರ್ವ ಧರ್ಮದ ಜನತೆ ಕಟ್ಟಿ ಬೆಳೆಸಿದ ಮಂಗಳೂರು”  ಎಂಬ ಕಣ್ಣೋಟದಿಂದ ಅಳವಡಿಸುವ ಟ್ಯಾಬ್ಲೋವನ್ನು ದಸರಾ ಮೆರವಣಿಗೆಯಲ್ಲಿ ಪ್ರದರ್ಶಿಸಿ ಮಂಗಳೂರಿನ ಅಭಿವೃದ್ಧಿಯಲ್ಲಿ ಸರ್ವಧರ್ಮದ ಜನರ ಕೊಡುಗೆಗಳನ್ನು ಸಮಾಜಕ್ಕೆ ನೆನಪಿಸುವ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ.

ಆದ್ದರಿಂದ ತಮ್ಮೆಲ್ಲರ ಸಹಕಾರ ಬೆಂಬಲ ಅತ್ಯಗತ್ಯ.

ವಂದನೆಗಳೊಂದಿಗೆ

– ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ (ರಿ) ಮಂಗಳೂರು, ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಮಂಗಳೂರು, ಭಗತ್ ಸಿಂಗ್ ವಾರಿಯರ್ಸ್‌, ಮಂಗಳೂರು

Leave a Reply