ಬೆಂಗಳೂರು: ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ)ಕಮತಗಿ ವತಿಯಿಂದ ದಿನಾಂಕ: 26-11-2023 ಭಾನುವಾರ ಬೆಂಗಳೂರಿನ ಸಿ.ಎ.ಆರ್. ದಕ್ಷಿಣ ಆಡುಗೋಡಿಯ ಪೊಲೀಸ್ ಕ್ವಾಟಾರ್ಸ್ ಬಯಲು ರಂಗಮಂದಿರದಲ್ಲಿ “ಆರಕ್ಷಕ ಸಾಹಿತ್ಯ ಸಮ್ಮೇಳನ -೨೦೨೩” ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಐಪಿಎಸ್, ಡಿಐಜಿಪಿ(ನಿ) ಹಾಗೂ ಆರಕ್ಷಕ ಲಹರಿ ಮಾಸಪತ್ರಿಕೆಯ ಸಂಪಾದಕ ಡಾ. ಡಿ.ಸಿ.ರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನನದಲ್ಲಿ ಧ್ವಜಾರೋಹಣ, ಪುಸ್ತಕ ಮಳಿಗೆ ಉದ್ಘಾಟನೆ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪುಸ್ತಕ ಬಿಡುಗಡೆ, ಆರಕ್ಷಕ ಸಾಹಿತಿಗಳಿಂದ ಕವಿಗೋಷ್ಠಿ, ವಿಶೇಷ ಉಪನ್ಯಾಸ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: ಎಮ್. ರಮೇಶ ಕಮತಗಿ, ಮೊ: 9686782774




