ನಟಿಸಲು ಆಸಕ್ತಿಯುಳ್ಳವರಿಗೆ ಅವಕಾಶ

2 years ago

#Opportunity #interested #acting #drama #Chamarajanagar

ರಂಗವಾಹಿನಿ ತಂಡದಿಂದ ರಂಗಪ್ರಯೋಗ

ಚಾಮರಾಜನಗರ: ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆಯು ಮೈಸೂರು ಹಾಗೂ ಚಾಮರಾಜನಗರ ಕಲಾಕ್ಷೇತ್ರದಲ್ಲಿ ಪ್ರಮುಖ ರಂಗ ಪ್ರಯೋಗಗಳಾದ ಮಂಟೇಸ್ವಾಮಿ ಕಥಾ ಪ್ರಸಂಗ, ಬೆಲ್ಲದ ದೋಣಿ, ಅಂಬೇಡ್ಕರ್, ಎಚ್ಚಮ ನಾಯಕ, ಮಧ್ಯಮ ವ್ಯಾಯೋಗ ಮೊದಲಾದ ನಾಟಕಗಳನ್ನು ಪ್ರದರ್ಶಿಸಿ ಜನಪ್ರಿಯವಾಗಿದೆ.

ಪ್ರಸ್ತುತ ಹೊಸ ರಂಗಪ್ರಯೋಗ ಅಭಿನಯ ರಂಗ ತರಬೇತಿಯೊಂದಿಗೆ ಮೈಸೂರಿನಲ್ಲಿ ರಂಗತರಬೇತಿ ಶಿಬಿರ ನಡೆಸಲು ನಿರ್ಧರಿಸಿದೆ. ಈ ಶಿಬಿರದಲ್ಲಿ ಹರದನಹಳ್ಳಿ ಡಾ. ನಂಜುಂಡಸ್ವಾಮಿ ರಚಿತ ಮಹರ್ಷಿ ವಾಲ್ಮೀಕಿ ಎಂಬ ನಾಟಕವನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸಲಾಗುವುದು.

ನಾಟಕದಲ್ಲಿ ಅಭಿನಯಿಸಲು ಆಸಕ್ತಿಯುಳ್ಳವರಿಗೆ ಅವಕಾಶವಿದೆ. ವಯಸ್ಸಿನ ಮಿತಿ ಇರುವುದಿಲ್ಲ. ನಾಟಕ ಅಭಿನಯದಲ್ಲಿ ಆಸಕ್ತಿ ಇರುವವರು ನವೆಂಬರ್ 20 ರ ಒಳಗಾಗಿ ರಂಗವಾಹಿನಿ ಸಂಚಾಲಕ ರೂಬಿನ್ ಸಂಜಯ್ 9164898896 ಅಥವಾ ಸಿ.ಎಂ.ನರಸಿಂಹಮೂರ್ತಿ ಅಧ್ಯಕ್ಷರು ರಂಗ ವಾಹಿನಿ 9916115263 ಇವರನ್ನು ಸಂಪರ್ಕಿಸಬಹುದು.

Leave a Reply