ಪ್ರಧಾನಿ ಮೋದಿ ನೈತಿಕಹೊಣೆ ಹೊತ್ತು ಎಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ?: ಕೆಪಿಸಿಸಿ

10 months ago

ದೇಶದ ಜನತೆಗೆ ಉತ್ತರಿಸಿ

ಬಿಜೆಪಿ ಪಕ್ಷದ ಸುಳ್ಳಿನ ಮುಖವಾಡ ಬಯಲು ಮಾಡಲು ನಾಳೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದ ಅವಧಿಯಲ್ಲಿ ನಡೆದ ದುರಂತಗಳ, ಆಡಳಿತ ವೈಫಲ್ಯಗಳ ಎಷ್ಟು ನೈತಿಕಹೊಣೆ ಎಷ್ಟು ಬಾರಿ ಹೊತ್ತಿ ರಾಜೀನಾಮೆ ನೀಡಿದ್ದೀರಾ ಪ್ರಧಾನಿ ನರೇಂದ್ರಮೋದಿರವರು ದೇಶದ ಜನತೆಗೆ ಉತ್ತರಿಸಿ ಎಂದು ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಕೇಳಿದರು.

ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಲಕ್ಷ್ಮಣ್, ಬಿಜೆಪಿ ಪಕ್ಷದವರು ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಮಂತ್ರಿರವರು ರಾಜೀನಾಮೆ ಕೊಡಬೇಕು ಎಂದು ಕೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ನಾಯಕರುಗಳಿಗೆ ಬಿಜೆಪಿ ಕೇಂದ್ರ, ಕೆಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಅಲ್ಲಿ ಎಷ್ಟು ಬಾರಿ ರಾಜೀನಾಮೆ ಕೊಟ್ಟಿದ್ದೀರ ಎಂದು ಪ್ರಶ್ನಿಸಿದರು.

ಗೋದ್ರಾ ದುರಂತದಲ್ಲಿ ಸಾವಿರಾರು ಜನರು ಸತ್ತರು, ಪಹಲ್ಗಾಮ್ ದುರಂತ, ಕುಂಭಮೇಳ ದುರಂತ, ಥಾಣೆ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ 18 ಜನ ಸತ್ತರು. ಬಿಜೆಪಿ ಸರ್ಕಾರ ಹೆಣದ ಮೇಲೆ ರಾಜಕೀಯ ಮಾಡುತ್ತದೆ. ಹೆಣ ಬಿದ್ದರೆ ಬಿಜೆಪಿಯವರಿಗೆ ಸಂತೋಷ ಅವರು ರಣಹದ್ದುಗಳಂತೆ ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎಸ್.ಸಿ.ಎ. ಮತ್ತು ಆರ್.ಸಿ.ಬಿ. ಡಿ.ಎನ್.ಎ.ಸಂಸ್ಥೆಯ ಮೇಲೆ ಕ್ರಮ ಕೈಗೊಂಡು ಕೆಲವರನ್ನ ಬಂಧಿಸಲಾಗಿದೆ. ಚಿನ್ನಸ್ವಾಮಿ ಸ್ಪೇಡಿಯಂ ದುರಂತದಲ್ಲಿ ತನಿಖೆ ನಡೆಯುತ್ತಿದೆ. ಐಪಿಎಲ್ ದುರಂತದಲ್ಲಿ ಬಿಜೆಪಿ ಆರ್.ಎಸ್.ಎಸ್ ಕೈವಾಡ ಇದೆಯ ಅಂತ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಬಿಜೆಪಿ ಆಡಳಿತ ವೈಫಲ್ಯ, ಅವರ ಸರ್ಕಾರದಲ್ಲಿ ನಡೆದ ದುರಂತಗಳ ಕುರಿತು ಪೊಸ್ಟರ್ ಬಿಡುಗಡೆ ಮಾಡಲಾಗುವುದು. ದೇಶದಲ್ಲಿ 22 ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿವೆ. ಅಲ್ಲಿ ಏನು ಅನಾಚಾರ, ಭ್ರಷ್ಟಾಚಾರವಿಲ್ಲದ ರಾಮರಾಜ್ಯ ಇದೆಯ? ನಾಳೆ ಬಿಜೆಪಿ ಪ್ರತಿಭಟನೆಯಲ್ಲಿ ನಾವು ಸಹ ಬಿಜೆಪಿ ಸರ್ಕಾರದಲ್ಲಿ ನಡೆದ ದುರಂತಗಳ ಕುರಿತು ಉತ್ತರ ಬಯಸುತ್ತೇವೆ ಮತ್ತು ರಾಜ್ಯಾದ್ಯಂತ ಪ್ರತಿಭಟನೆ ಸಹ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದೆ ಎಂದರು.

ಎಸ್.ಮನೋಹರ್ ಮಾತನಾಡಿ, ಬಿಜೆಪಿ ಪಕ್ಷ ಸುಳ್ಳು ಹೇಳುವ ಮತ್ತು ತನ್ನ ಪಕ್ಷದ ತಪ್ಪುಗಳನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಆರೋಪ ಮಾಡಿ ಬಚಾವ್ ಆಗಲು ಪ್ರಯತ್ನ ಮಾಡುತ್ತಾರೆ. ಬಿಜೆಪಿ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿ ರಾಜ್ಯ ಸರ್ಕಾರದ ಆಡಳಿತದ ಅವಧಿಯಲ್ಲಿ ದುರಂತಗಳ ಸರಣಿ ನಡೆದಿದೆ. ಒಬ್ಬರು ಸಹ ಇದುವರೆಗೆ ರಾಜೀನಾಮೆ ನೀಡಿಲ್ಲ. ಇದಕ್ಕೆ ಬಿಜೆಪಿ ನಾಯಕರುಗಳು ಉತ್ತರಿಸಬೇಕು. ಬಿಜೆಪಿ ಪಕ್ಷದ ಸುಳ್ಳಿನ ಮುಖವಾಡ ಬಯಲು ಮಾಡಲು ನಾಳೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

Leave a Reply