ಭಾರತದಲ್ಲಿ ಯಾವ ಧರ್ಮದವರು ಎಷ್ಟು ಸಂಖ್ಯೆಯಲ್ಲಿದ್ದಾರೆ?

1 year ago

ಭಾರತವನ್ನು ವಿವಿಧತೆಯಲ್ಲಿ ಏಕತೆ ಇರುವ ದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಭಾರತದ ಪುಣ್ಯ ಭೂಮಿಯಲ್ಲಿ ವಿಭಿನ್ನ ನಂಬಿಕೆಗಳ ಜನ ಸೌಹಾರ್ದತೆಯಿಂದ ವಾಸಿಸುತ್ತಾರೆ.

ವಿವಿಧ ಧರ್ಮಗಳ ಜನ ಒಟ್ಟಿಗೆ ವಿವಿಧ ಹಬ್ಬಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇದು ದೇಶದ ರೋಮಾಂಚಕ ಸಾಮಾಜಿಕ ರಚನೆಗೆ ಕೊಡುಗೆಯಾಗಿದೆ. ಆದರೆ ಬಲಪಂಥೀಯ ರಾಜಕಾರಣದ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಧಾರ್ಮಿಕ ಮತ್ತು ಜಾತಿ ಆಧಾರಿತ ಉದ್ವಿಗ್ನತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಇವು ಭಾರತದ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಮುದಾಯಗಳ ನಡುವೆ ಏಕತೆ, ಸಹನೆಯನ್ನು ಮತ್ತು ಪರಸ್ಪರ ಗೌರವದ ಅಗತ್ಯವನ್ನು ಮಂಡಿಸುತ್ತವೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಧರ್ಮಗಳ ಜನಸಂಖ್ಯೆ ಕುತೂಹಲಕಾರಿಯಾಗಿದೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನ ತೀವ್ರ ಒತ್ತಡ ಹಾಗೂ ಪಹಲ್ ಗಾಮ್ ನಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಮುಂದಿನ ಜನಗಣತಿ ಸಮೀಕ್ಷೆಯಲ್ಲಿ ಜಾತಿ ಗಣತಿ ಮಾಡುವುದಾಗಿ ಘೋಷಿಸಿದೆ. 

22 ಏಪ್ರಿಲ್ 2025 ರಂದು ಹಿಂದೂಗಳ ಮೇಲೆ ಇತ್ತೀಚೆಗೆ ಗುರಿಯಿಟ್ಟುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ, ಭಾರತ ಸರ್ಕಾರ ಭಾರತದಲ್ಲಿ ಜಾತಿ ಜನಗಣತಿಯನ್ನು ಘೋಷಿಸಿರುವುದರ ಹಿಂದೆ ಅನೇಕ ವ್ಯಾಖ್ಯಾನಗಳು ವ್ಯಕ್ತವಾಗಿವೆ.

ಜಾತಿ ಗಣತಿ ಕುರಿತು ಬಿಜೆಪಿಯ ಹಿರಿಯ ಸಚಿವ ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರು ಮತ್ತು ಕರ್ನಾಟಕ ಬಿಜೆಪಿ ನಾಯಕರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಅದರಲ್ಲೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವರದಿಯನ್ನು ಅಂಗೀಕರಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಮತ್ತು ಕೆಲವು ಮಠಾಧೀಶರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಇವರೆಲ್ಲರ ಮೆಚ್ಚಿನ ನಾಯಕ ನರೇಂದ್ರ ಮೋದಿ ಜಾತಿ ಗಣತಿ ಮಾಡುವುದಾಗಿ ಘೋಷಿಸಿದ ತಕ್ಷಣ ಇವರೆಲ್ಲರ ವರಸೆಯೇ ಬದಲಾಗಿದ್ದು, ಜಾತಿಗಣತಿಯನ್ನು ತುಟಿಯಾರೆ ಸ್ವಾಗತಿಸಿ ಪೋಸ್ಟ್ ಗಳನ್ನು ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡತೊಡಗಿದ್ದಾರೆ. ಇದು ಅವರ ಇಬ್ಬಂದಿತನಕ್ಕೆ ಉದಾಹರಣೆಯಾಗಿದೆ. ಜೊತೆಗೆ ಇದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯವರಿಗೂ ಅನ್ವಯಿಸುತ್ತದೆ.

ಭಾರತದಲ್ಲಿ 2011 ರ ಜಾತಿ ಜನಗಣತಿ ಸಮೀಕ್ಷೆಯ ಪ್ರಕಾರ ಜನಸಂಖ್ಯೆಯ ಶೇಕಡಾವಾರು ಪ್ರಕಾರ ಭಾರತದ ಪ್ರಮುಖ ಧರ್ಮಗಳ ಪಟ್ಟಿ ಇಲ್ಲಿದೆ. ಇದು ಭಾರತದಲ್ಲಿ ಕೊನೆಯ ಅಧಿಕೃತ ಸಮೀಕ್ಷೆಯಾಗಿದೆ.

ಧರ್ಮ – ಶೇಕಡಾವಾರು –  ಅಂದಾಜು ಜನಸಂಖ್ಯೆ (2025)
ಹಿಂದೂ ಧರ್ಮ – 79.8% – 114 ಕೋಟಿ
ಇಸ್ಲಾಂ – 14.2% – 20 – ಕೋಟಿ
ಕ್ರಿಶ್ಚಿಯನ್ ಧರ್ಮ – 2.3% – 2.60 ಕೋಟಿ
ಸಿಖ್ ಧರ್ಮ – 1.7% – 2.08 ಕೋಟಿ
ಬೌದ್ಧಧರ್ಮ – 0.7% – 84 ಲಕ್ಷ
ಜೈನ ಧರ್ಮ – 0.4% – 44.5 ಲಕ್ಷ
ಇತರೆ – 0.2%

Leave a Reply