2600 ವರ್ಷಗಳ ಹಿಂದೆಯೇ ಸ್ವಾತಂತ್ರ್ಯದ ಪರ ಧ್ವನಿ ಎತ್ತರ ಮೊದಲ ಮಹಾಪುರುಷ ಗೌತಮ ಬುದ್ದರು ಇವರು ಸ್ವಾತಂತ್ರ್ಯ, ಸಮಾನತೆ, ಶಾಂತಿ, ಪ್ರೀತಿ, ದಯೆಯನ್ನು ಪ್ರತಿಪಾದಿಸಿದರು.
ಫೆಬ್ರವರಿ 20 ರಂದು ನಾವು ‘ವಿಶ್ವ ಸಾಮಾಜಿಕ ನ್ಯಾಯ ದಿನ’ವನ್ನಾಗಿ ಆಚರಿಸಲು ವಿಶ್ವಸಂಸ್ಥೆ 2007 ರಲ್ಲಿ ನಿರ್ಣಯಿಸಿದೆ. ಇದರಿಂದ ಎಲ್ಲಾ ರೀತಿಯ ಅಸಮಾನತೆ ಕೊನೆಗಾಣಿಸಿ ಎಲ್ಲರೂ ಸಮಾನರಾಗಿ ಗೌರವದಿಂದ ಬಾಳುವಂತೆ ಮಾಡಬೇಕೆಂದು ಉದ್ದೇಶ ಇದೆ. ಸಂವಿಧಾನ ಕೂಡ ಇದನ್ನೇ ಪ್ರತಿಪಾಲಿಸಿದೆ.
ಭಾರತದ ಮೇಲೆ ಆರ್ಯರು, ಪರ್ಷಿಯನ್ನರು, ಗ್ರೀಕರು, ಹೂಣರು, ಟರ್ಕಿಯನ್ನರು, ಮಂಗೋಲಿಯನ್ನರು, ಯೋರೋಪಿಯನ್ನರು ಮುಂತಾದ ವಿದೇಶಿ ಜನಾಂಗಗಳು ದಾಳಿ ಮಾಡಿ ಸ್ಥಳೀಯ ಜನಾಂಗದ ವಿರುದ್ಧ ಯುದ್ದ ಮಾಡಿದರೆ ಮತ್ತೆ ಕೆಲವರು ಬೇರೆ ಬೇರೆ ಕಾರಣಕ್ಕಾಗಿ ಭಾರತದೊಳಗೆ ಪ್ರವೇಶ ಮಾಡಿದರು.ಗೆದ್ದವರು ಸೋತವರ ಮೇಲೆ ಹಿಡಿತ ಸಾಧಿಸಿ ಸೋತ ಜನಾಂಗದವರ ಸ್ತ್ರೀಯರೊಂದಿಗೆ ಸಂಪರ್ಕ ಬೆಳೆಸಿ ಮಿಶ್ರ ಸಂತತಿಗಳಾಗಿ ಕ್ರಮೇಣ ಮಿಶ್ರ ಸಂತತಿಗಳು ಪ್ರತ್ಯೇಕ ಬುಡಕಟ್ಟುಗಳಾದವು.
- ದೇಶದಲ್ಲಿ 4635ಕ್ಕೂ ಹೆಚ್ಚಿನ ವಿವಿಧ ಜನಾಂಗೀಯ ಸಂಗತಿಗಳಿವೆ ತಮ್ಮದೆ ಲಕ್ಷಣ ಭಾಷೆ, ಉಡುಪು, ಆಹಾರ, ಧರ್ಮ, ಸಂಸ್ಕೃತಿ ಆಚರಣೆಗಳನ್ನು ಹೊಂದಿವೆ.
ಪ್ರತಿ ಜನಾಂಗವು ತಮ್ಮ ವಿಮೋಚನೆ ಬಿಡುಗಡೆ ಅಥವಾ ಹಿಜ್ರತ್ ದಿನಗಳನ್ನು ಜನಪರ ಗೀತೆಗಳಲ್ಲಿ, ಹಾಡುಗಳಲ್ಲಿ ಸಂರಕ್ಷಿಸಿಕೊಂಡು ಬಂದಿದ್ದಾರೆ.
ಭಾರತದಲ್ಲಿ ಸುಮಾರು 325 ಭಾಷೆಗಳು ಮತ್ತು 25 ಲಿಪಿಗಳಿವೆ. ಇವು ಇಂಡೋ-ರ‍್ಯನ್ ಟಿಬೆಟೋ ರ‍್ಟೀಸ್ ಇಂಡೋ ಯೂರೋಪಿಯನ್ ದ್ರಾವಿಡ್ ಭಾಷೆಗಳಾಗಿವೆ.
ಇಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಭಾರತೀಕರಣವಾಗಿದೆ
10ನೇ ಶತಮಾನದ ಮಧ್ಯಭಾಗದಲ್ಲಿ ಮುಸಲ್ಮಾನರು ಭಾರತ ದೇಶಕ್ಕೆ ಆಕ್ರಮಣಕಾರರಾಗಿ ಮತ್ತು ದಾಳಿಕೋರರಾಗಿ ಬಂದರು. ಇದರಿಂದ ಭಾರತ ದೇಶದೊಳಗೆ ಇಸ್ಲಾಂ ಧರ್ಮ ಪ್ರವೇಶ ಪಡೆಯಿತು.ಇಸ್ಲಾಂ ಧರ್ಮ ಬೋಧಿಸಿದ ಸಾಮಾಜಿಕ ಸಮಾನತೆಗೆ ಭಾರತದ ಕೆಳಜಾತಿಯ ಜನ ಆಕರ್ಷಿತರಾದರು. ಹಿಂದು ಸಮಾಜದ ಜಾತಿ ಅಸಮಾನತೆ, ಕೌರ್ಯ ಮತ್ತು ಅಸ್ಪೃಶ್ಯತೆಯೆಂಬ ಸಾಮಾಜಿಕ ಅನಿಷ್ಟಗಳಿಂದ ವಿಮುಕ್ತಿಗೊಳ್ಳಲು ಕೆಳಜಾತಿಯ ಅನೇಕರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಆದರೆ ಸಾಮಾಜಿಕ ಸಮಾನತೆ ಬರಲಿಲ್ಲ ಮತ್ತು ಅಸಮಾನತೆಯಿಂದ ಮುಕ್ತಿ ಸಿಗಲಿಲ್ಲ.
ಮುಸಲ್ಮಾನರ ಆಡಳಿತದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಲೆಂದೇ ಭಾರತದ ಮೇಲುಜಾತಿಯ ಕೆಲವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಹೀಗೆ ಭಾರತದ ಮೇಲು ಜಾತಿಯವರು, ಶೂದ್ರರು ಮತ್ತು ಅಸ್ಪೃಶ್ಯರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಈ ರೀತಿ ಮತಾಂತರಗೊಂಡ ಮುಸಲ್ಮಾನರಲ್ಲಿ ಪ್ರಮುಖವಾಗಿ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ:
ಉನ್ನತ ವರ್ಗದ ಮುಸಲ್ಮಾನರು. ಇವರಲ್ಲಿ ಸಯದ್, ಶೇಖ್, ಪಠಾಣ್, ಮೊಗಲ್, ಮಾಲಿಕ್, ಮಿರಜ ಇತ್ಯಾದಿಯವರನ್ನೊಳಗೊಂಡಿದೆ.
ಕೆಳ ವರ್ಗದ ಮುಸಲ್ಮಾನರಲ್ಲಿ ದರ್ಜಿ, ಜೂಲಾಹ, ಫಕೀರ, ರುಂಗರಜೆ, ಬ್ಯಾರಿ, ಭಾತಿರ, ಚೆಕ್, ಖುರುಹಾರ್, ದೈಯಿ, ಸವ, ಸುನಿಯ, ಗದ್ದೆ, ಕಾಲ, ಕಸಾಯ, ಕುಲ, ಕುಜಾರ, ಲಗರಿ, ಮುಲ್ಲಾ, ನುಲಿಯ, ನಿಶಾರಿ, ಅದಾಲತ್, ಖಾಕೊ, ಬಡಿಯ, ಬಾಟ್, ಚಮಾಲ, ದಫಿತಿ, ದೋಬಿ, ಹಜಾಮ್, ಮುಚಾವ್, ನಗರಬೆ, ನಾಟ್, ಪನವಾರಿಯ, ಮಧಾರಿಯ, ತುನಿತ್ಕ ಇತ್ಯಾದಿಯವರು ಒಳಗೊಂಡಿದ್ದಾರೆ.
ಹಾಗೆ ಜಾತಿ ಪದ್ಧತಿಯ ಸಾಮಾಜಿಕ ಸಮಸ್ಯೆಗಳು ಇವೆ.
ಅಂಬೇಡ್ಕರ್ ಅವರ ಪ್ರಕಾರ ಜಾತಿ ಪದ್ಧತಿಯು, ಶ್ರಮದ ವಿಭಜನೆಯಾಗಿರದೇ ಶ್ರಮಿಕರ ವಿಭಜನೆಯಾಗಿದೆ. ಒಬ್ಬರ ಮೇಲೊಬ್ಬರು ಹೇರುವ ಶ್ರೇಣೀಕೃತ ವ್ಯವಸ್ಥೆಯಾಗಿದೆ. ಇಚ್ಛೆಪಟ್ಟು ಮಾಡಿಕೊಂಡ ಸಹಜ ಸ್ಥಿತಿಯಾಗದೆ ಬಲವಂತವಾಗಿ ಹೇರಲಾದ ಸ್ಥಿತಿಯಾಗಿದೆ.
ಹಿಂದುಗಳು ಒಗ್ಗಟ್ಟಾಗಿ ಬಾಳುವುದನ್ನು ಜಾತಿ ಪದ್ಧತಿಯು ತಪ್ಪಿಸಿತು. ನಾವೀಗ ಕಾಣುವುದು ವೈಯಕ್ತಿಕ ಚಟುವಟಿಕೆಗಳೇ ಹೊರತು ಸಮಾಜದ ಸಾಮೂಹಿಕ ಚಟುವಟಿಕೆಯಲ್ಲ.
ಜಾತಿ ಪದ್ಧತಿ ಮತ್ತು ಇದು ನಿರ್ಮಿಸಿದ ಅಸಮಾನತೆಯ ವಿರುದ್ಧ ಸುಮಾರು 2600 ವರ್ಷಗಳ ಹಿಂದೆಯೇ ಧ್ವನಿ ಎತ್ತಿದ ಮೊದಲ ಮಹಾಪುರುಷ ಗೌತಮ ಬುದ್ಧ, ಬುದ್ಧನು ಪ್ರತಿಪಾದಿಸಿದ ಬೌದ್ಧ ಧರ್ಮವು ಸಮಾನತೆ, ಶಾಂತಿ, ಪ್ರೀತಿ, ದಯೆಯನ್ನು ಅವಲಂಬಿಸಿದೆ. ಬುದ್ಧನ ವಿಚಾರಗಳು ಮತ್ತು ಮೌಲ್ಯಗಳೆಂದರೆ:
- ಧರ್ಮವೆನ್ನುವುದು ಜೀವನದ ಸತ್ಯ ಸಂಗತಿಗಳಿಗೆ ಸಂಬಂಧಿಸಿರಬೇಕು. ದೇವರ ಬಗೆಗಿನ ಸಿದ್ಧಾಂತ ಮತ್ತು ತತ್ವ ಅಥವಾ ಆತ್ಮ, ಸ್ವರ್ಗಗಳ ಬಗೆಗೆ ಅಲ್ಲ. ದೇವರನ್ನು ಧರ್ಮದ ಕೇಂದ್ರ ನೆಲೆ ಮಾಡುವುದು ಸರಿಯಲ್ಲ.
- ಪ್ರಾಣಿ ಬಲಿಯನ್ನು ಧರ್ಮದ ಕೇಂದ್ರವನ್ನಾಗಿ ನೋಡುವುದು ತಪ್ಪು
- ನಿಜವಾದ ಧರ್ಮವು ಮನುಷ್ಯನ ಹೃದಯದಲ್ಲಿರುತ್ತದೆಯೇ ಹೊರತು ಶಾಸ್ತ್ರಗಳಲ್ಲಲ್ಲ.
12ನೇ ಶತಮಾನದ ವಚನಕಾರರ ಬಂಡಾಯ ಗಮನಿಸಿದರೆ
ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ‘ಅನುಭವ ಮಂಟಪ’ವೆಂಬ ಸಂಸ್ಥೆ ಸ್ಥಾಪಿತವಾಯಿತು. ಇಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಯಿತು. ಸುದೀರ್ಘ ಚರ್ಚೆಯ ನಂತರ ಬಂದ ನಿರ್ಣಯಗಳೇ ವಚನಗಳ ರೂಪ ತಾಳಿದವು. ಜಾತಿ ಬೇಧವಿಲ್ಲದ ವರ್ಗ ಬೇಧವಿಲ್ಲದ ಮತ್ತು ಲಿಂಗ ಬೇಧವಿಲ್ಲದ, (6ಕ್ಕೆ ಮೊದಲ ಸ್ತ್ರೀ ಸಂವೇದಿನಿ) ಒಂದು ಸಮ ಸಮಾಜದ ನಿರ್ಮಾಣವೇ ಎಲ್ಲಾ ವಚನಕಾರರ ಗುರಿಯಾಗಿತ್ತು. ಪಶುಗಳಿಗಿಂತ ಕೀಳಾಗಿ ಕಾಣಲ್ಪಡುತ್ತಿದ್ದಂಥ ಅಸ್ಪೃಶ್ಯರನ್ನು ಸ್ಪೃಶ್ಯತೆಯ ನೆಲೆಗೆ ತಂದದ್ದುಇಲ್ಲೆ. ಪ್ರಮುಖ ಘಟ್ಟ ವರ್ಣಸಂಕರ ಅನುಭವ ಮಂಟಪವೇ ಪ್ರಥಮ ಪಾರ್ಲಿಮೆಂಟ್ ಎನಿಸಿದೆ.
ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ
ಜಲವೊಂದೇ ಶೌಚಾಚಮನಕ್ಕೆ
ಕುಲವೊಂದೇ ತನ್ನ ತಾನರಿದವರಿಗೆ
ಫಲವೊಂದೇ ಷಡುದರ್ಶನ ಮುಕ್ತಿಗೆ
ನಿಲುವೊಂದೇ ಕೂಡಲಸಂಗಮದೇವಾ ನಿಮ್ಮನರಿದವರಿಗೆ
ಚನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು… ಜನಿಸಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ
ಎಂದು ಬಸವ ದಾಸವಾಗಿ ಸೇವೆಗೈದವ.
ಭಕ್ತಿ ಪಂಥ ಮತ್ತು ದಾಸ ಸಾಹಿತ್ಯದಲ್ಲಿ ಬಂಡಾಯ ಗಮನಿಸಿದರೆ
ಸುಮಾರು 15 ಮತ್ತು 16ನೇ ಶತಮಾನದ ಕಾಲಕ್ಕೆ ಭಾರತದಲ್ಲಿ ಜಾತಿ, ಅಸಮಾನತೆ, ಅಸ್ಪೃಶ್ಯತೆ ಮತ್ತು ಅಮಾನವೀಯ ಆಚರಣೆಗಳ ವಿರುದ್ಧ ಹುಟ್ಟಿದ್ದೇ ಭಕ್ತಿಪಂಥ, ಹಿಂದೂ ಮತ್ತು ಸೂಫಿ ಸಂತರು ವಿವಿಧ ಭಾಷೆಗಳಲ್ಲಿ ಸಾಹಿತ್ಯವನ್ನು ರಚಿಸಿ ತಮ್ಮ ಹಾಡುಗಳ ಮುಖಾಂತರ ಜನ ಸಾಮಾನ್ಯರನ್ನು ತಲುಪಿದರು.
‘ಕನಕದಾಸರು’ ತಮ್ಮ ಒಂದು ಕೀರ್ತನೆಯಲ್ಲಿ ಕುಲದ ಬಗ್ಗೆ ಈ ರೀತಿ ಹೇಳಿದ್ದಾರೆ:
ಕುಲುಕುಲ ಕುಲವೆನ್ನುತಿಹರು
ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ
ಕೆಸರೊಳು ತಾವರೆ ಹುಟ್ಟಲು ಅದ ತಂದು
ಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು
ವಸುಧೆಯೊಳಗೆ ಭೂಸುರರುಣಲಿಲ್ಲವೆ
ಮೃಗಗಳ ಮೈಯಲ್ಲಿ ಪುಟ್ಟಿದ ಕಸ್ತೂರಿ
ತೆಗೆದು ಪೂಸುವರು ಭೂಸುರರೆಲ್ಲರು
ಬಗೆಯಿಂದ ನಾರಾಯಣನ್ಯಾವ ಕುಲದವ
ಅಗಜವಲ್ಲಭ ನಿನ್ಯಾತರ ಕುಲದವನು.
ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ ಎಂದರೆ,
ಕೈವಾರ ನಾರಾಯಣಪ್ಪಣವರ ಒಂದು ರಚನೆ:
ಹೊಲೆಯನೆಂದೀ ಜನರು ಹೀಗಳೆವುದೇತಕೆ
ಹೊಲೆಯನ ಆತ್ಮ ಮಂದಿರದಲ್ಲಿ
ಸಕುದೇವ ವಿಹಾರಿ ಸದ್ಗುರುವು ಇರುವ
ನಾದ ಬ್ರಹ್ಮಾನಂದ ನಾರೇಯಣ ಕವಿ
ಉಚ್ಚೆ ಬಾಗಿಲೊಳು ತೂರಿ ಬಂದರು ನರರು
ಉತ್ತಮ ಕುಲದವರು ಯಾರಿಲ್ಲ ಇಲ್ಲಿ
ಉತ್ತಮ ಕುಲವೆಂಬುದು ಬರೀ ಸುಳ್ಳು
ನಾದ ಬ್ರಹ್ಮಾನಂದ ನಾರೇಯಣ ಕವಿ ಎಂದು ಸಾರಿದರು.
ಈ ರೀತಿಯಾಗಿ ಬುದ್ಧ, ಬಸವ ಮತ್ತು ಭಕ್ತಿ ಪಂಥದ ಹಾಗೂ ದಾಸ ಪಂಥದ ಸಂತರು, ನಾಲ್ವಡಿ, ಶಾಹು ಮಹಾರಾಜದಂತಹವರು, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರು. ಆದರೆ, ಅದು ವ್ಯಕ್ತಿ ನೀತಿಯಾಗಿಯೇ ಉಳಿಯಿತು. ರಾಜ ನೀತಿಯಾಗಲಿಲ್ಲ. ಕಡ್ಡಾಯವಾಗಿ ಜಾರಿ ಮಾಡಲಾಗದ ನೀತಿಯಾಗಿಯೇ ಉಳಿಯಿತು. ಮೊದಲನೇ ಬಾರಿಗೆ ಅಂಬೇಡ್ಕರ್‌ರವರು “ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ, ಅದೊಂದು ಮಾನವ ಹಕ್ಕು” ಎಂಬುದಾಗಿ ಪ್ರತಿಪಾದಿಸಿದರು. ಸ್ವಾಮಿ ವಿವೇಕಾನಂದ, ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ, ಪೆರಿಯಾರ್, ನಾರಾಯಣಗುರು, ಮಹಾತ್ಮಗಾಂಧಿ ಇತ್ಯಾದಿಯಾಗಿ ಅನೇಕ ಮಹನೀಯರು ಜಾತಿ ಅಸಮಾನತೆಯ ವಿರುದ್ಧ ತಮ್ಮ ಧ್ವನಿಯನ್ನು ಎತ್ತಿದರು. ಇನ್ನು ಎಲ್ಲರ ಕೆಂಗಣ್ಣಿನ ಮೀಸಲಾತಿ ಬಗ್ಗೆ ಹೇಳವುದಾದರೆ,
ಸ್ವಾತಂತ್ರ್ಯ ಪೂರ್ವದಲ್ಲಿ ಮೀಸಲಾತಿ
ಬ್ರಿಟಿಷ್ ಆಡಳಿತದಲ್ಲಿ ಮೀಸಲಾತಿ
ಕೊಲ್ಲಾಪುರ ಸಂಸ್ಥಾನದಲ್ಲಿ ಮೀಸಲಾತಿ
ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ
ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಇತರ ರಾಜ್ಯಗಳಲ್ಲಿ ಮೀಸಲಾತಿ
- ಡಾ.ಎ.ಆರ್.ಗೋವಿಂದಸ್ವಾಮಿ, ರಂಗತಜ್ಞರು ಮತ್ತು ಪ್ರಗತಿಪರ ಚಿಂತಕರು
- (ಮುಂದುವರೆಯುವುದು)




