ದ್ವೇಷ ಭಾಷಣದ ವಿಚಾರಣೆ: ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ?: ಸುಪ್ರೀಂ ಕೋರ್ಟ್

4 years ago

ದೆಹಲಿ: ಇದು 21 ನೇ ಶತಮಾನ. ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ? ಎಂದು ದ್ವೇಷ ಭಾಷಣಗಳ ಕುರಿತ ಅರ್ಜಿ ವಿಚಾರಣೆ ವೇಳೆ  ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ದ್ವೇಷ ಭಾಷಣಗಳ ವಿರುದ್ಧ ಸ್ವತಃ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಇಲ್ಲವಾದಲ್ಲಿ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ಅಲ್ಲದೇ, ಧರ್ಮ ತಟಸ್ಥವಾಗಿರಬೇಕಾದ ದೇಶ ಆಘಾತಕಾರಿ ಸ್ಥಿತಿ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಭಾರತದ ಸಂವಿಧಾನವು ಜಾತ್ಯತೀತ ರಾಷ್ಟ್ರ ಮತ್ತು ನಾಗರಿಕರಲ್ಲಿ ಭ್ರಾತೃತ್ವವನ್ನು ಬೆಳೆಸುತ್ತದೆ, ವ್ಯಕ್ತಿಗೆ ಘನತೆಯನ್ನು ಖಾತ್ರಿಪಡಿಸುತ್ತದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಯು ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಮಾರ್ಗದರ್ಶಿ ತತ್ವಗಳಲ್ಲಿ ಒಂದಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ದ್ವೇಷ ಭಾಷಣ ತಡೆಯುವ ನಿಟ್ಟಿನಲ್ಲಿ ವಿವಿಧ ದಂಡದ ನಿಬಂಧನೆಗಳ ಹೊರತಾಗಿಯೂ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಸಾಂವಿಧಾನಿಕ ತತ್ವಗಳನ್ನು ಪೂರೈಸುವ ಅವಶ್ಯಕತೆಯಿದೆ ಎಂದು ಅರ್ಜಿದಾರರು ಕೋರ್ಟ್ ಗಮನಸೆಳೆದರು. ಈ ನ್ಯಾಯಾಲಯ ಮೂಲಭೂತ ಹಕ್ಕುಗಳನ್ನು ಮತ್ತು ಸಂವಿಧಾನವನ್ನು ರಕ್ಷಿಸುವ ಮತ್ತು ಸೇವೆ ಮಾಡುವ ಕರ್ತವ್ಯ ಹೊಂದಿದೆ ಎಂದು ನಾವು ಭಾವಿಸುತ್ತೇವೆ. ಕಾನೂನಿನ ನಿಯಮಗಳನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು.

ಗುರುವಾರ, ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಭಯಭೀತಗೊಳಿಸುವ ಬೆದರಿಕೆ ನಿಲ್ಲಿಸಲು ತುರ್ತು ಮಧ್ಯಪ್ರವೇಶವನ್ನು ಕೋರುವ ಮನವಿಗೆ ಕೇಂದ್ರ ಮತ್ತು ರಾಜ್ಯಗಳಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.  ದೇಶಾದ್ಯಂತ ನಡೆಯುತ್ತಿರುವ ದ್ವೇಷದ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಘಟನೆಗಳ ಬಗ್ಗೆ ವಿಶ್ವಾಸಾರ್ಹ ತನಿಖೆ ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರ ಶಾಹೀನ್ ಅಬ್ದುಲ್ಲಾ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಹಿಂದೂ ಸಭಾ ಒಂದು ಉದಾಹರಣೆ. ಪಶ್ಚಿಮ ದೆಹಲಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ “ಈ ಜನರ” ಸಂಪೂರ್ಣ ಬಹಿಷ್ಕಾರಕ್ಕೆ ಕರೆನೀಡಿದ್ದನ್ನು ಮುಸ್ಲಿಮರಿಗೆ ಅನ್ವಯಿಸಿ ನೀಡಿದ ಹೇಳಿಕೆ ಎಂಬ ಸಂಗತಿಯನ್ನು ಉಲ್ಲೇಖಿಸಿದರು. ನ್ಯಾಯಮೂರ್ತಿಗಳು ಅಂದಿನ ಸಭೆಯಲ್ಲಿ ಮನ್ನೊಬ್ಬ ಭಾಷಣಕಾರ ಜಗತ್ ಗುರು ಯೋಗೇಶ್ವರ್ ಆಚಾರ್ಯ ಅವರ ಹೇಳಿಕೆ ನಮ್ಮ ದೇವಾಲಯಗಳ ವಿರುದ್ಧ ಬೆರಳು ಎತ್ತುವವರ ಕತ್ತು ಸೀಳಲು ಕರೆ ನೀಡಿದ ಹೇಳಿಕೆಯನ್ನು ಪರಿಶೀಲಿಸಿದರು.

ಅರ್ಜಿಯಲ್ಲಿ, ಅಬ್ದುಲ್ಲಾ ಅವರು ಯುಎಪಿಎ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣಗಳನ್ನು ತಡೆಯಲು ಕಠಿಣ ನಿಬಂಧನೆಗಳನ್ನು ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ. ದ್ವೇಷ ಭಾಷಣದ ವೇಲೆ ಮುಸ್ಲಿಂ ಸಮುದಾಯವನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ಭಯೋತ್ಪಾದಕರ ಪಟ್ಟವನ್ನು ಕಟ್ಟಲಾಗುತ್ತಿದೆ ಎಂದರು.

Leave a Reply