ಬೆಂಗಳೂರು: ರಂಗಭೂಮಿ, ಸಂಗೀತ, ಚಿತ್ರಕಲೆ, ಸಾಹಿತ್ಯ ಮುಂತಾದ ಪಠ್ಯೇತರ ಚಟುವಟಿಕೆಯಲ್ಲಿ ಭಾಗಹಿಸುವ ಮಕ್ಕಳೇ ಪರೀಕ್ಷೆಗಳಲ್ಲಿ ಹೆಚ್ಚಿನ ರ್ಯಾಂಕ್ ಗಳಿಸುತ್ತಾರೆ. ಇದು ಸಂಶೋಧನೆಗಳಿಂದ ಹಾಗೂ ನಾವು ತೊಡಗಿಕೊಂಡು ಪಡೆದ ಅನುಭವವಾಗಿದೆ ಎಂದು ಕರ್ನಾಟಕ ಬಂಜಾರ ಸಾಂಸ್ಕೃತಿಕ ಮತ್ತು ಭಾಷಾ ಅಕಾಡೆಮಿ ನಿಯೋಜಿತ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಹೇಳಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ನಗರದ ರಂಗಾಭರಣ ಕಲಾಕೇಂದ್ರ ಮಕ್ಕಳಿಗಾಗಿ ಆಯೋಜಿಸಿದ ‘ಬೇಸಿಗೆ ಶಿಬಿರ-2024’ ರ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಅವರು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮಕ್ಕಳಲ್ಲಿ ಗ್ರಹಣಶಕ್ತಿ, ಕ್ರಿಯಾತ್ಮಕತೆ, ತೊಡಗುವಿಕೆ, ಕೌಶಲ್ಯ, ನೆನಪಿನ ಶಕ್ತಿ, ಉಚ್ಛಾರ ಸ್ಪಷ್ಟತೆ, ಭಾಷಾ ಪಾಂಡಿತ್ಯ ಸಮಾಜಕ್ಕೆ ಸ್ಪಂದಿಸುವ ಗುಣ, ಸಂಶೋಧನಾ ಕೌಶಲ್ಯ, ಧೈರ್ಯದೊಂದಿಗೆ ಸಮಗ್ರ ವ್ಯಕ್ತಿತ್ವ ವಿಕಾಸವನ್ನು ಪಡೆದುಕೊಳ್ಳಲು ಸಾಧ್ಯಇದೆ. ಹೀಗಾಗಿ ಶಿಬಿರದಲ್ಲಿ ಮಕ್ಕಳನ್ನು ತೋಡಗಿಸಿದ ಪೋಷಕರು ಅಭಿನಂದನಾರ್ಹರು, ಸಂಸ್ಥೆಯು ಇಂತಹ ಉತ್ತಮ ಕೆಲಸ ಮಾಡಿದ್ದಕ್ಕೆ ಅಭಿನಂದಿಸುತ್ತೇನೆ ಎಂದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕವಯಿತ್ರಿ ಹೆಚ್.ಎನ್ಆರತಿ, ಗುಣಶೀಲನ್ ದಂಪತಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಕ ಚಟುವಟಿಕೆಗಳನ್ನು ನಿರಂತರ ಉತ್ತಮವಾಗಿ ನಡೆಸುತ್ತಿದ್ದಾರೆ. ಇವರು ಅಭಿನಂದನೆಗೆ ಅರ್ಹರು. ಕಲೆ, ಸಾಹಿತ್ಯ ಸಂಸ್ಕೃತಿಯಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಹೆಚ್ಚಿನ ವೈಯುಕ್ತಿಕ ಲಾಭ ಇರುವುದು ಇಲ್ಲಿನ ಪ್ರಾಯೋಗಿಕ ಪ್ರತಿಭಾ ಕೌಶಲ್ಯದಿಂದ ತಿಳಿಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಚಿಣ್ಣರು ಅಭಿನಯಿಸಿದ “ಅಭಿರುಚಿ” ನಾಟಕ ಮತ್ತು ನೃತ್ಯ, ಸಂಗೀತ, ಮೌನಾಭಿನಯ ಪ್ರದರ್ಶನ ನೀಡಿದರು. ಎ.ಆರ್ ಗೋವಿಂದಸ್ವಾಮಿ ‘ಅಂಗುಲಿಮಾಲ’ರಾಕ್ಷಸನ ಏಕಪಾತ್ರವನ್ನು ಮೈದುಂಬಿ ಅಭಿನಯಿಸಿದರು, ಹೆಚ್.ಎಸ್ ಶಿವಪ್ರಕಾಶರ ಸಿಂಗಿರಾಜ ಕಾವ್ಯಾಭಿನಯದಿಂದ ಮಕ್ಕಳ ಹಾಗೂ ಪ್ರೇಕ್ಷಕರ ಗಮನ ಸೆಳೆದದ್ದು ವಿಶೇಷವಾಗಿತ್ತು.

ಸಮಾರಂಭದಲ್ಲಿ ರಂಗಾಭರಣ ಸಂಸ್ಥಪಕ ಎನ್ಗುಣಶೀಲ, ಸಂಸ್ಥೆಯ ಮಹೇಶ್ವರಿ ಮುಂತಾದವರು ಹಾಜರಿದ್ದರು.




