ಬೆಂಗಳೂರು: ಇಸ್ರೋ ಬಡಾವಣೆಯ ಶ್ರೀಪ್ರಸನ್ನವಿನಾಯಕ ದೇವಸ್ಥಾನದಲ್ಲಿ ಕರ್ನಾಟಕ ನಾಡು ಕಂಡ ಶ್ರೇಷ್ಠ ಜಾನಪದ ವಿದ್ವಾಂಸರಾದ ಡಾ.ಹಿ.ಚಿಬೋರಲಿಂಗಯ್ಯ ಅವರ ಗಿರಿಜನ ಜಾನಪದ ಸಂಪತ್ತಿಗೆ 70 ವರ್ಷ ಸಾಕ್ಷ್ಯಚಿತ್ರದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಕ್ಲ್ಯಾಪ್ ಮಾಡುವ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಖ್ಯಾತ ಜಾನಪದ ಗಾಯಕರಾದ ಡಾ. ವೇಮಗಲ್ ನಾರಾಯಣಸ್ವಾಮಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ, ಡಾ.ಕುರುವ ಬಸವರಾಜ ಮುಂತಾದವರು ಶುಭಕೋರಿದರು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಈ ಸಂದರ್ಭದಲ್ಲಿ ಡಾ.ಹಿ.ಚಿಬೋರಲಿಂಗಯ್ಯ ಮಾತನಾಡಿ, ಇಲ್ಲಿ ನಾನು ನೆಪ ಅಷ್ಟೇ ನನ್ನ ವೈಭೀಕರಣ ಆಗುವುದನ್ನು ತಪ್ಪಿಸಿ, ಗಿರಿಜನರ, ಹಾಡಿಜನರ, ಅಲೆಮಾರಿ, ಬುಡಕಟ್ಟು ಜನರ ಬದುಕು ಬವಣೆಗಳನ್ನು ಸಮಾಜಕ್ಕೆ ತೋರಿಸುವಂತಹ ಕಾರ್ಯ ಜೆಕೆಮೂವೀಸ್ ವತಿಯಿಂದ ಆಗಲಿ ಎಂದು ಹಾರೈಸಿದರು.
ಡಾ.ಹಿ.ಚಿಬೋರಲಿಂಗಯ್ಯ ಸಾಕ್ಷ್ಯ ಚಿತ್ರವು ಜರಗನಹಳ್ಳಿ ಕಾಂತರಾಜು ಪರಿಕಲ್ಪನೆ – ನಿರ್ದೇಶನ, ಛಾಯಾಗ್ರಹಣ ಡಿ.ವೆಂಕಟೇಶ್ ನೇತೃತ್ವದಲ್ಲಿ ಚಿತ್ರೀಕರಣನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಪದ್ಮಶ್ರೀ ರಾಣಿಮಾಚಯ್ಯ, ಕಸಾಪ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪ್ರಕಾಶಮೂರ್ತಿ, ಡಾ.ಅಣ್ಣೇಗೌಡ, ಜನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮೋಹನ್ಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ತಿಮ್ಮೇಶ್, ಖ್ಯಾತ ಗಾಯಕ ಆನಂದಮಾದಲಗೆರೆ, ಭಕ್ತಿಗೀತೆ ಸಾಹಿತಿ ಡಾ.ಪ್ರದೀಪ್ ಕುಮಾರ್ ಎಂ, ಕತ್ತರಿ ಕಲಾವಿದ ಹುಸೇನಿ ಎಸ್.ಎಫ್, ಯುವ ಸಾಹಿತಿ ಶಿವರಾಜ್ ಮೋತಿ, ಹೊನ್ನೂರು ರಮೇಶಮುತಾಂದವರು ಹಾಜರಿದ್ದರು.
ಜನಪದ ಮನಸ್ಸು ಹೊತ್ತಿರುವ ಕಾರಣಕ್ಕೆ ಜನಪದ ಸಿರಿವಾಹಿನಿಗೆ, ಜರಗನಹಳ್ಳಿ ಕಾಂತರಾಜು ಅವರಿಗೆ, ಜನಪದರಿಗೆ, ಹಿ.ಚಿಬೋರಲಿಂಗಯ್ಯ ಅವರಿಗೆ ಜಯವಾಗಲಿ ಎಂಬ ಘೋಷಣೆಗಳು ವಿನಾಯಕನ ಸನ್ನಿಧಾನದಲ್ಲಿ ಮೊಳಗಿದವು.




