ಬೆಂಗಳೂರು ನಗರದ ಜನತೆ ಹಲವಾರು ದಶಕಗಳಿಂದ ಕೆಲವು ಸಮಸ್ಯೆಯಿಂದ ಪರದಾಡುತ್ತಿದ್ದರು. ಬಿ ಖಾತೆ ಹೊಂದಿರುವವರಿಗೆ ಬ್ಯಾಂಕುಗಳಲ್ಲಿ ಸಾಲ ದೊರೆಯುತ್ತಿರಲಿಲ್ಲ ಮತ್ತು ಮನೆ ಕಟ್ಟಲು ನಕ್ಷೆ ಬಿಬಿಎಂಪಿ ವತಿಯಿಂದ ಅನುಮತಿ ದೊರೆಯುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಆಸ್ತಿಗಳು ಇದ್ದರೂ ಸಹ ಯಾವುದೇ ರೀತಿಯ ಉಪಯೋಗಕ್ಕೆ ಕಷ್ಟಕಾಲಕ್ಕೆ ಆಗುತ್ತಿರಲಿಲ್ಲ. ಈಗ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಬಿ ಖಾತೆಗಳಿಗೆ ಏ ಖಾತೆ ಮಾನ್ಯತೆಯನ್ನು ನೀಡಲು ನಿರ್ಧರಿಸಿರುವುದು ತುಂಬಾ ಒಳ್ಳೆಯ ಯೋಜನೆಯಾಗಿರುತ್ತದೆ. ಇದರಿಂದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯಲ್ಲಿ ನೆರವು ದೊರೆಯಲಿದೆ.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್ಎಸ್ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ಈ ಸಮಸ್ಯೆಯನ್ನು ಈ ಹಿಂದೆಯೇ ಕಾಂಗ್ರೆಸ್ ಸರ್ಕಾರ ಬಗೆಹರಿಸಲು ಮುಂದೆ ಹೆಜ್ಜೆಯನ್ನು ಇಟ್ಟಿತ್ತು. ಆದರೆ ಇದಕ್ಕೆ ಬಿಜೆಪಿಯ ಮಾಜಿ ಕೇಂದ್ರ ಸಚಿವರು ಹಾಲಿ ಕೇರಳದಲ್ಲಿ ನಾಯಕರಾಗಿರುವವರು ನ್ಯಾಯಾಲಯದಲ್ಲಿ ದಾವೆಯನ್ನು ಹಾಕಿ ಬಿ ಖಾತೆದಾರರಿಗೆ ಅಭಿವೃದ್ಧಿ ಶುಲ್ಕವನ್ನು ಕಟ್ಟಿಸಿಕೊಂಡು ಏಕತೆ ನೀಡದಂತೆ ತಡೆಯಾಜ್ಞೆಯನ್ನು ತಂದಿದ್ದರು.
ಹಾಲಿ ರಾಜ್ಯ ಸರ್ಕಾರ ದಿಟ್ಟತನದಿಂದ ಬಿ ಖಾತೆ ಆಸ್ತಿಗಳಿಗೆ ಏ ಖಾತೆ ಮಾನ್ಯತೆ ನೀಡಲು ಆದೇಶ ಹೊರಡಿಸಿರುವುದು ಬಡವರು ಮತ್ತು ಮಧ್ಯಮ ವರ್ಗದ ಆಸ್ತಿ ಮಾಲೀಕರಿಗೆ ಒಳ್ಳೆಯ ಸುದ್ದಿ ಆಗಿರುತ್ತದೆ.
ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದಿರುವ ನೂರಾರು ನಿವೇಶನದಾರರಿಗೆ ಅವರು ಪಾವತಿಸಬೇಕಾಗಿರುವ ಗುತ್ತಿಗೆ ಮೊತ್ತದ ಮೇಲಿನ ಬಡ್ಡಿ ಮತ್ತು ಚಕ್ರ ಬಡ್ಡಿಯನ್ನು ಮನ್ನಾ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಜನರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇದರಿಂದ ಸಂಘ ಸಂಸ್ಥೆ ಮತ್ತು ಶಿಕ್ಷಣ ಸಂಸ್ಥೆಯ ಪ್ರಮುಖರಿಗೆ ನೂರಾರು ಕೋಟಿ ರೂಪಾಯಿಗಳ ಹೊರೆ ಕಡಿಮೆಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಜನತೆಯ ಪರವಾಗಿ ಮುಖ್ಯಮಂತ್ರಿಗಳಿಗೆ ಮತ್ತು ಉಪಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
– ಕೆ ಎಸ್ ನಾಗರಾಜ್ ಬೆಂಗಳೂರು




