70ನೇ ಕನ್ನಡ ರಾಜ್ಯೋತ್ಸವ ಆಚರಣೆ
ಗಣ್ಯರಿಗೆ ಪುರಸ್ಕಾರ ಹಾಗೂ ವಿದ್ಯಾರ್ಥಿ ಪ್ರತಿಭೆಗಳಿಗೆ ಪುರಸ್ಕಾರ
ಬೆಂಗಳೂರು: ಜ್ಞಾನಜ್ಯೋತಿ ನಗರ 2ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಿಎಚ್‌ಇಎಲ್ ಬಡಾವಣೆಯಲ್ಲಿ ವಿಜೃಂಭಣೆಯಿಂದ 70ನೇ ಕನ್ನಡ ರಾಜ್ಯೋತ್ಸವ-2025 ಆಚರಿಸಲಾಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ರಾಜ್ಯೋತ್ಸವ ಪ್ರಯುಕ್ತ ನಾಡಿನ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು ಹಾಗೂ ಹೋರಾಟಗಾರರು, ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ, ಹಾಗೂ ಹಿರಿಯ ಸಾಹಿತಿ ಪದ್ಮಪ್ರಸಾದ್ ಅವರನ್ನು ನಾಗರೀಕ ಸನ್ಮಾನ ನೀಡಿ ಪುರಸ್ಕಾರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಕಲಾವಿದರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ವಿವಿಧ ರಸ ಸಂಜೆ ಕಾರ್ಯಕ್ರಮ ನಡೆಸಲಾಯಿತು. ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಬಾಲುನಾಯಕ್, ಡಿ.ರವಿ, ಮಾಣಿಕವ್ವ, ಶಿವಣ್ಣಗೌಡ, ಮುನಿರತ್ನ ಮುಂತಾದವರು ಉಪಸ್ಥಿತರಿದ್ದರು.
ಡಾ. ಎ.ಆರ್. ಗೋವಿಂದಸ್ವಾಮಿ ಅವರು ಸಮಾರಂಭವನ್ನು ಉದ್ಘಾಟಿಸಿ, ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ನಮ್ಮ ಹಿರಿಯ ಹೋರಾಟಗಾರರು ಕವಿಗಳು, ಸಾಹಿತಿಗಳು, ಕಲಾವಿದರು, ಚಲನಚಿತ್ರ ರಂಗ ಹಾಗೂ ರಾಜಕೀಯ ಧುರಿಣರು ಕನ್ನಡ ಭಾಷೆ, ಸಂಸ್ಕೃತಿ ವಾಸ್ತುಶಿಲ್ಪ, ಉಳಿಸಲು ಬೆಳೆಸಲು ಅಪಾರ ಕೊಡುಗೆ ನೀಡಿದ್ದಾರೆ ಎಂದರು.
1799ರಲ್ಲಿ ಬ್ರಿಟಿಷರ ಆಂಗ್ಲೋಮೈಸೂರು ಯುದ್ಧದಲ್ಲಿ ಮರಾಠರು ಹಾಗೂ ನಿಜಾಮರು ಟಿಪ್ಪುವನ್ನು ಕೊಂದ ನಂತರ ಮೈಸೂರು ಬ್ರಿಟಿಷರ ವಶವಾಗಿ, ಯುದ್ಧ ಖರ್ಚಿಗಾಗಿ ಬ್ರಿಟಿಷರು ಮರಾಠರಿಗೆ ನಿಜಾಮರಿಗೆ ಕರ್ನಾಟಕವನ್ನು ನಾಲ್ಕು ವಿಭಾಗ ಮಾಡಿ ಹರಿದು ಹಂಚಿದುದರ ಫಲವಾಗಿ ಕನ್ನಡಿಗರು 157 ವರ್ಷಗಳು ನಿರಂತರ ನರಕ ಅನುಭವಿಸುವಂತಾಗಿ ನಂತರ ನವೆಂಬರ್ 1, 1956 ರ ಮೈಸೂರು ರಾಜ್ಯವಾಗಿ 1.11.73 ರಲ್ಲಿ ಏಕೀಕರಣದಿಂದ ಇಂದಿನ ʻಕರ್ನಾಟಕʼ ರಾಜ್ಯಉದಯವಾಯಿತು ಎಂದರು.
ಈ ರಾಜ್ಯದಲ್ಲಿ ಇಂದು ಶೇ 20% ಕನ್ನಡಿಗರಿದ್ದು, ತಮ್ಮ ಆಸ್ತಿ ಪಾಸ್ತಿ ಬೇರೆ ರಾಜ್ಯದವರ ಪಾಲು ಮಾಡಲಾಗುತ್ತಿದೆ. ಇದು ಹೀಗೆಯೇ ಸಾಗಿದರೆ ಕನ್ನಡಿಗರಿಗೆ ಕರ್ನಾಟಕ ರಾಜ್ಯವಾಗಿ ಕನ್ನಡಿಗರು ಭಾಷಾ ಅಲ್ಪಸಂಖ್ಯಾತರಾಗುತ್ತಿದ್ದೇವೆ ಉಳಿಯದು, ಈಗಲೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಭಾಷೆ, ಸಂಸ್ಕೃತಿಯ ಪ್ರಗತಿಗೆ ಸರ್ಕಾರಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಕೈ ಜೋಡಿಸಬೇಕು. ಸಾಹಿತ್ಯ, ಕಲೆ ಕಲಾವಿದರಿಗೆ, ಕನ್ನಡ ಪರ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಆದ್ಯತೆ ಹಾಗೂ ಮನ್ನಣೆ ಅಗತ್ಯ ಇದೆ. ಎಲ್ಲಾ ಹಂತಗಳಲ್ಲೂ ಭ್ರಷ್ಟತೆ ಕಡಿಮೆಯಾಗಬೇಕು. 8 ಜ್ಞಾನಪೀಠ ತಂದ ನಮ್ಮ ಸಾಹಿತ್ಯವಲಯ ಇಂದು ನಿರ್ಷ್ಕಿಯ ಎನಿಸುತ್ತಿದೆ. ಕನ್ನಡ ಸಂಶೋಧನಾವಲಯ ಇನಷ್ಟು ಜಾಗೃತವಾಗಬೇಕು. ಪರಭಾಷಿಕರು ಕನ್ನಡಕ್ಕೆ ಉತ್ತೇಜನ ನೀಡುವ ವಾತಾವರಣಬೇಕು, ಆಡಳಿತದಲ್ಲಿ ಇನ್ನಷ್ಟು ಕನ್ನಡ ಭಾಷೆ ಜಾರಿಯಾಗಬೇಕಿದೆ ಎಂದರು.
















