ಜಿಬಿಎ ನೌಕರರ ಕನ್ನಡ ಸಂಘದಲ್ಲಿ 70ನೇ ಕನ್ನಡ ರಾಜ್ಯೋತ್ಸವ

6 months ago

ಕನ್ನಡ ತಾಯಿಯ ಸೇವೆ ಮಾಡಲು ಅವಕಾಶ ಸಿಕ್ಕಿದೆ

ಬೆಂಗಳೂರು ನಗರ ಜನರ ಸೇವೆ ಮಾಡಲು ಐದು ಪಾಲಿಕೆಗಳ ಸ್ಥಾಪನೆ: ಮಹೇಶ್ವರರಾವ್

ಬೆಂಗಳೂರು: ಜಿಬಿಎ ಕೇಂದ್ರ ಕಛೇರಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ನೌಕರರ ಕನ್ನಡ ಸಂಘ(ರಿ)ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡ ಧ್ವಜಾರೋಹಣ ಮತ್ತು ಮೇರುನಟ ಕರ್ನಾಟಕ ರತ್ನ ಡಾ.ರಾಜ್ ಕುಮಾರ್  ಮತ್ತು ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಗೆ ಪುಷ್ಪನಮನವನ್ನು   ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಮತ್ತು ಮಾಜಿ ಮೇಯರ್ ಜೆ.ಹುಚ್ಚಪ್ಪ, ಆಯುಕ್ತ ರಾಜೇಂದ್ರ ಚೋಳನ್, ವಿಶೇಷ ಆಯುಕ್ತ ಹರೀಶ್, ಜಿಬಿಎ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮತ್ತು  ಜಿಬಿಎ ಪಾಲಿಕೆಗಳ ನೌಕರರ ಕನ್ನಡ ಸಂಘದ ಅಧ್ಯಕ್ಷ ಸಾಯಿಶಂಕರ್ ನೆರವೇರಿಸಿದರು.

ಇದೇ ವೇಳೆ ಮಾತನಾಡಿದ ಮಹೇಶ್ವರರಾವ್, ಜನರಿಗೆ ಉತ್ತಮ ಸೇವೆ ನೀಡಲು ಐದು ಪಾಲಿಕೆಗಳು ಸದಾ  ಜನರ ಸೇವೆಗೆ ಸಿದ್ದವಾಗಿದೆ. ಕನ್ನಡ ತಾಯಿಯ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕನ್ನಡ ರಾಜ್ಯೋತ್ಸವ ದಿನದಂದು ಹಬ್ಬದಂತೆ ಇಡಿ ಕುಟುಂಬ ಸಮೇತರಾಗಿ ಹಬ್ಬವನ್ನು ಅಚರಿಸಬೇಕು ಎಂದರು.

ಜೆ.ಹುಚ್ಚಪ್ಪ ಮಾತನಾಡಿ, ಕನ್ನಡ ಸಂಘ ಆರಂಭವಾಗಿ 28 ವರ್ಷಗಳು ಸಂದಿದೆ. ನಮ್ಮ ಸಂಘದಲ್ಲಿ ಸಾಹಿತಿ, ಹೋರಾಟಗಾರರು, ಕಲಾವಿದರಿಗೆ ಗೌರವಿಸಿ ಸನ್ಮಾನಿಸಲಾಗಿದೆ. ಕನ್ನಡ ಸಂಘದ ವತಿಯಿಂದ ದೇಶ ವಿದೇಶಗಳಲ್ಲಿ ಕನ್ನಡ ನಾಡಿನ ಕಂಪನ್ನು ಹರಿಸಲಾಗುತ್ತಿದೆ. ಜಿಬಿಎ ಯಿಂದ ಒಂದು ರೂಪಾಯಿ ಅನುದಾನವಿಲ್ಲದೇ ನೌಕರರ ಸ್ವಂತ ವೆಚ್ಚದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರಾಮಾಣಿಕವಾಗಿ ಕನ್ನಡ ಸೇವೆ ಮಾಡುತ್ತಿದ್ದೇವೆ , ಕನ್ನಡ ಭಾಷೆಗೆ 2500ವರ್ಷಗಳ ಇತಿಹಾಸವಿದೆ, 8ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದರು.

ಎ.ಅಮೃತ್ ರಾಜ್ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳಸಲು ನಮ್ಮ ಸಂಘವು ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಭಾಷೆ ವಿಶ್ವ ಭಾಷೆಯಾಗಬೇಕು ಎಂಬ ಆಶಯದಿಂದ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಗುತ್ತಿದೆ ಎಂದರು.

ನೇಪಾಳ, ಕಾಶಿ ಹರಿದ್ವಾರದಲ್ಲಿ ಯಶ್ವಸಿಯಾಗಿ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಯಿತು. 2025ನವೆಂಬರ್ 22ರಂದು ಜಮ್ಮು, ಕಾಶ್ಮೀರದ ಪಹಲ್ಗಾಮ್ ನಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ನಮ್ಮ ಕನ್ನಡ ಸಂಘವು ನಾಡು, ನುಡಿಗೆ ಸೇವೆ ಸಲ್ಲಿಸಿದ ಗಣ್ಯ ಮಹನೀಯರುಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.

ಜಿಬಿಎ ಅಧಿಕಾರಿಗಳು, ನೌಕರರು ಮತ್ತು ಶಾಲೆಯ ಮಕ್ಕಳು ಭಾಗವಹಿಸಿದ್ದರು.

Leave a Reply