ಕನ್ನಡ ರಾಜ್ಯೋತ್ಸವ ಮತ್ತು ಸಾಧಕ ಹಿರಿಯ ನಾಗರಿಕರಿಗೆ ಸನ್ಮಾನ

6 months ago

ಕನ್ನಕ ಪುಸ್ತಕ ಕೊಂಡುಕೊಳ್ಳಿ, ಕನ್ನಡ ಪುಸ್ತಕ ಓದಿ, ಕನ್ನಡ ಪುಸ್ತಕ ಸಂಗ್ರಹ ಮಾಡಿ

ಮೊಬೈಲ್, ಟಿ.ವಿಯಿಂದ ಜನ ಹಾಳಾಗುತ್ತಿದ್ದಾರೆ

ಸಂಗೀತ, ಸಾಹಿತ್ಯ ಆಸಕ್ತಿ ಬೆಳಸಿಕೊಳ್ಳಿ: ಜಾನಪದ ಗಾಯಕ ಅಪ್ಪೆಗೆರೆ ತಿಮ್ಮರಾಜು

ಬೆಂಗಳೂರು: ಶಂಕರಮಠದ ಕಿರ್ಲೋಸ್ಕರ್ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಉದ್ಘಾಟನೆಯನ್ನು ಖ್ಯಾತ ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು, ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜು, ಪ್ರಾಂಶುಪಾಲರಾದ ಪರಿಮಳ, ಹಿರಿಯ ರಂಗಭೂಮಿ ಕಲಾವಿದರಾದ ನಾರಾಯಣಪ್ಪ, ಕಿರ್ಲೋಸ್ಕರ್ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್.ಶ್ರೀಧರ್  ದೀಪ ಬೆಳಗಿಸಿ, ತಾಯಿ ಭುವನೇಶ್ವರಿ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಅಪ್ಪೆಗೆರೆ ತಿಮ್ಮರಾಜು ಮಾತನಾಡಿ, ಬದುಕನ್ನ ರೂಪಿಸಿಕೊಂಡು ಬಾಳಬೇಕು. ಒಳ್ಳೆಯ ಕೆಲಸ ಮಾಡುವವರಿಗೆ ಒಳ್ಳೆಯದು ಆಗುತ್ತದೆ. ತಾಳ್ಮೆ, ವಿನಯ, ನಮ್ರತೆ ಇದ್ದರೆ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾರೆ.  ಜಾನಪದ ಕಲೆ ಉಳಿಸಿ, ಬೆಳಸಬೇಕು. ಮೊಬೈಲ್ ಟಿ.ವಿ.ಯಿಂದ ಜನ ಹಾಳಾಗುತ್ತಿದ್ದಾರೆ. ಯಾರೂ ಕನ್ನಡ ಪುಸ್ತಕ ಓದುತ್ತಿಲ್ಲ. ಸಂಗೀತ ಕಲಿಯುತ್ತಿಲ್ಲ. ಕನ್ನಡ ಪುಸ್ತಕಗಳನ್ನು ಕೊಂಡುಕೊಳ್ಳಿ, ಮನೆಯಲ್ಲಿ ಕುಳಿತು ಓದಿ, ಕನ್ನಡದ ಪುಸ್ತಕಗಳನ್ನು ಸಂಗ್ರಹ ಮಾಡಿ ಸಾಹಿತಿಗಳನ್ನು ಪ್ರೋತ್ಸಾಹಿಸಿ. ಸಂಗೀತ ಕಲಿತರೆ, ವಾದ್ಯಗಳನ್ನು ನುಡಿಸಿರಿ ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿ ಇರಬಹುದು. ಹಿರಿಯ ರಾಜಕಾರಣಿಗಳಾದ ಎಂ.ಪಿ.ಪ್ರಕಾಶ್, ಜೀವರಾಜ್ ಆಳ್ವರವರು ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಅಪಾರ ಸಹಕಾರ ನೀಡಿದ್ದಾರೆ ಎಂದರು.

ಎಮ್.ಶಿವರಾಜು ಮಾತನಾಡಿ, ನವೆಂಬರ್ ತಿಂಗಳು  ಕನ್ನಡದ ಹಬ್ಬ ಅಚರಿಸಲಾಗುತ್ತದೆ. ಪ್ರತಿದಿನವು ಕನ್ನಡ ಹಬ್ಬ ಅಚರಿಸಬೇಕು ಅಂತಾಗಬೇಕು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಜಾನಪದ ಕಲೆ ಇಂದು ಮರೆಯಾಗುತ್ತಿದೆ. ಕನ್ನಡ ಭಾಷೆಯನ್ನ  ತಿರುಚಿ ಕೆಟ್ಟಪದಗಳಿಂದ ಸಾಹಿತ್ಯ ರಚಿಸಲಾಗುತ್ತಿದೆ ಇದು ವಿಷಾದನೀಯ.  ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಅನ್ಯ ಭಾಷಿಕರು ಕನ್ನಡ ಮಾತನಾಡಬೇಕು, ಕಲಿಯಬೇಕು. ಯಕ್ಷಗಾನ,ಜಾನಪದ ಕಲೆಯ ಕುರಿತು ಇಂದಿನ ಮಕ್ಕಳಿಗೆ ಅರಿವು ಇಲ್ಲ ಅವರಿಗೆ ನಮ್ಮ ಕಲೆ, ಸಂಸ್ಕೃತಿ, ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಾರದಾ ವಿದ್ಯಾಲಯ ತಂಡದವರಿಂದ ಕನ್ನಡ ಗೀತೆ ಗಾಯನ ಮತ್ತು 40ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಸನ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಕಿರ್ಲೋಸ್ಕರ್ ಬಡಾವಣೆಯ ನಿವಾಸಿಗಳು ಭಾಗಹಿಸಿದ್ದರು.

Leave a Reply