ಈತ ಸುಮಾರು 70 ವರ್ಷದ ವಯಸ್ಸಿನ ವ್ಯಕ್ತಿ. ಇವರಿಗೆ ಮದುವೆಯಾಗಿಲ್ಲ. ಇವರು ಹಾಸ್ಟೆಲ್ ಒಂದರಲ್ಲಿ ಇವರ ಕುಟುಂಬದವರು ನೀಡುವ ಪ್ರತಿ ತಿಂಗಳ 6000ಗಳಲ್ಲಿ ಬದುಕುತ್ತಿದ್ದಾರೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಇವರಿಗೆ ಶಾಶ್ವತವಾದ ವಿಳಾಸವಿಲ್ಲ, ಇದರಿಂದ ಮತದಾರ ಚೀಟಿಯು ಇರುವುದಿಲ್ಲ, ಆಧಾರ್ ಕಾರ್ಡ್ ಸಹ ಇರುವುದಿಲ್ಲ, ಇವರಿಗೆ ಇನ್ನೂ ಬಿಪಿಎಲ್ ಕಾರ್ಡು ದೊರೆಯುವುದೇ ಇಲ್ಲ. ಈಗ ಇವರಿಗೆ ಹಿರಿಯ ನಾಗರಿಕರಿಗೆ ಸಿಗುವ ಪಿಂಚಣಿ ಅಗತ್ಯವಾಗಿ ಬೇಕಾಗಿರುತ್ತದೆ. ದಾಖಲೆಗಳಿಲ್ಲದ ಕಾರಣದಿಂದ ನಿಜಕ್ಕೂ ಸರ್ಕಾರದ ಸೌಲಭ್ಯಕ್ಕೆ ಸೂಕ್ತವಾದ ಫಲಾನುಭವಿಗಳಾದ ಇವರಿಗೆ ಸೌಲಭ್ಯಗಳು ದೊರೆಯುವುದಿಲ್ಲ.
ಇಂಥದೇ ಮತ್ತೊಬ್ಬ ವ್ಯಕ್ತಿ ಈತನಿಗೆ ಸರಿಸುಮಾರು 65 ವರ್ಷ. ಇವರಿಗೂ ಮದುವೆ ಇಲ್ಲ. ಯಾವುದೇ ಶಾಶ್ವತ ವಿಳಾಸವಿಲ್ಲ. ಯಾರದೋ ಮನೆಯಲ್ಲಿ ಆಶ್ರಯವನ್ನು ಪಡೆದಿದ್ದಾರೆ. ಸಣ್ಣಪುಟ್ಟ ವಸ್ತುಗಳನ್ನ ಹೋಟೆಲ್ ಗಳ ಮುಂದೆ ನಿಂತು ಮಾರಾಟ ಮಾಡುತ್ತಾರೆ. ಆದಾಯವಂತು ನಿಶ್ಚಿತವಿಲ್ಲ. ದುಡಿಯಲು ದೇಹದಲ್ಲಿ ಶಕ್ತಿ ಇಲ್ಲ. ಇವರಿಗೆ ಯಾವುದೇ ದಾಖಲೆಗಳಿಲ್ಲದ ಕಾರಣದಿಂದ ಇವರು ಸಹ ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ.
ಈ ರೀತಿಯಲ್ಲಿ ಸಹಸ್ರಾರು ಜನರಿಗೆ ದಾಖಲೆಗಳು ಇಲ್ಲದ ಕಾರಣದಿಂದ ನಿಜಕ್ಕೂ ಸೌಲಭ್ಯಗಳಿಗೆ ಅರ್ಹರಾಗಿದ್ದರು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥವರ ಬದುಕು ತುಂಬಾ ಕಷ್ಟದಲ್ಲಿದೆ.
ಇವರಲ್ಲಿ ಸಾಕಷ್ಟು ಮಹಿಳೆಯರು ಇದ್ದಾರೆ. ಇಂತಹ ಜನರು ಯಾವ ರೀತಿ ಬದುಕಬೇಕು. ದುಡಿಯಲು ದೇಹದಲ್ಲಿ ಶಕ್ತಿ ಇಲ್ಲ. ಭಿಕ್ಷೆ ಬೇಡಿದರೆ ಜನ ಬಯ್ಯುತ್ತಾರೆ. ಬೇಡಲು ಕೆಲವರಿಗೆ ಮನಸ್ಸು ಬರುವುದಿಲ್ಲ. ಇವರಲ್ಲಿಯೂ ಸಾಕಷ್ಟು ಮಂದಿ ಸ್ವಾಭಿಮಾನಿಗಳಿದ್ದಾರೆ.
ಇವರಿಗೆ ಆರೋಗ್ಯದ ಮೇಲೆ ಪರಿಣಾಮಗಳು ಬೀರಿದಾಗ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಇಲ್ಲ ಎಂದು ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಖಾಸಗಿ ವಿಮೆ ಮಾಡಿಸಿಕೊಳ್ಳಲು ಇವರ ಬಳಿ ಹಣ ವಿರುವುದಿಲ್ಲ. ಇನ್ನು ಇವರ ಪರಿಚಯಸ್ತರು ಮತ್ತು ಹತ್ತಿರದ ಬಂಧುಗಳು ಒಂದೆರಡು ದಿನಗಳ ಕಾಲ ಅನುಕಂಪವನ್ನ ತೋರಿಸುತ್ತಾರೆ. ತಮ್ಮ ಇತಿಮಿತಿಯಲ್ಲಿ ಮಾನವೀಯತೆಯ ಕಾರಣದಿಂದ ಸಹಾಯವನ್ನು ಮಾಡುತ್ತಾರೆ. ದಿನ ಕಳೆದಂತೆ ಅವರು ನಿರ್ಲಕ್ಷಿಸುತ್ತಾರೆ.
ಇಂತಹ ವರ್ಗದ ಜನರು ನಗರ ಪ್ರದೇಶದಲ್ಲಿ ಸಹಸ್ರಾರು ಮಂದಿ ಇದ್ದಾರೆ. ಇವರ ವಿಚಾರದಲ್ಲಿ ಸರ್ಕಾರಗಳು ಯಾವುದಾದರೂ ರೀತಿಯಲ್ಲಿ ಇವರಿಗೆ ಬಿಪಿಎಲ್ ಕಾರ್ಡುಗಳನ್ನು ಕೊಡುವುದು. ಪಿಂಚಣಿ ವ್ಯವಸ್ಥೆಯನ್ನು ಮಾಡುವುದು ಹೇಗೆ ಸಾಧ್ಯ ಎನ್ನುವುದನ್ನು ಗಂಭೀರವಾಗಿ ಚಿಂತಿಸಬೇಕಾದಂತಹ ವಿಚಾರವಾಗಿದೆ.
ಆದಾಯವಿಲ್ಲದ ಹಿರಿಯ ನಾಗರಿಕರ ಬದುಕು ತುಂಬಾ ತೊಂದರೆಯಲ್ಲಿದೆ. ಪ್ರತಿದಿನವೂ ಹೋಟೆಲ್ ಗಳ ಮುಂದೆ. ಪ್ರಮುಖ ರಸ್ತೆಗಳಲ್ಲಿ ಇಂತಹ ಸಹಸ್ರಾರು ಮಂದಿ ನೋವು ತುಂಬಿದ ಮುಖ, ಭರವಸೆಯನ್ನು ಕಳೆದುಕೊಂಡ ನೋಟ ಇವರ ಕಣ್ಣುಗಳಲ್ಲಿ ಕಾಣಬಹುದು. ಸ್ಪಂದಿಸುವವರಿಗಾಗಿ ಕಾಯುತ್ತಲೇ ಇರುತ್ತಾರೆ. ಇಂಥವರನ್ನು ಕಂಡಾಗ ಆತಂಕವಾಗುತ್ತದೆ.
ಮನೆ, ಸಂಸಾರ, ಸಂಪಾದನೆ ಇರುವವರಿಗೆ ಹೇಗೋ ಬದುಕು ಸಾಗುತ್ತದೆ. ಆದರೆ ಯಾರು ಇಲ್ಲದ ಅಸಹಾಯಕ ಇಂತಹ ಜೀವಗಳ ಬಗ್ಗೆ ಅನೇಕ ಸಂಘ ಸಂಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಸಹಾಯವನ್ನು ಮಾಡುತ್ತಿದ್ದಾರೆ. ಸಾರ್ವಜನಿಕರು ಸಹ ಇಂತಹ ಹಿರಿಯ ಜೀವಗಳಿಗೆ ಕೈಲಾದ ರೀತಿಯಲ್ಲಿ ನೆರವನ್ನ ನೀಡುತ್ತಾರೆ. ಆದರೆ ಇಂದು ಹೇಗೂ ಕಳೆಯಿತು, ನಾಳೆ ಏನು ಎನ್ನುವ ಇವರ ಚಿಂತೆಗೆ ಒಂದು ಯಾವುದಾದರೂ ಶಾಶ್ವತವಾದ ಮಾರ್ಗ ಬೇಕಾಗಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




