ಜಾತ್ರೆ ಜನರನ್ನು ಅಸಂಘಟಿತ ಕಾರ್ಮಿಕರೆಂದು ಘೋಷಿಸಿ

2 years ago

ಶಾಶ್ವತವಾದ ನೆಲೆ ಇಲ್ಲದೆ, ನಿರ್ದಿಷ್ಟವಾದ ಆದಾಯ ಇಲ್ಲದೆ ಊರಿಂದ ಊರಿಗೆ ತಿರುಗುತ್ತ ಜಾತ್ರೆಗಳಲ್ಲಿ ಅಂಗಡಿಗಳನ್ನ ತೆರೆದು, ವ್ಯಾಪಾರ ಮಾಡುವಂತಹ ಈ ವರ್ಗದ ಜನರನ್ನು ಅಸಂಘಟಿತ ಕಾರ್ಮಿಕರೆಂದು ಘೋಷಿಸಿ ಅವರಿಗೆ ಕನಿಷ್ಠ ವೈದ್ಯಕೀಯ ಸೌಲಭ್ಯವನ್ನು, ದೊರಕಿಸಿ ಕೊಟ್ಟು ಅವರಿಗೂ ಸಹ ಕೆಲವೊಂದು ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿಕೊಳ್ಳುತ್ತೇನೆ.

ಊರಿಂದ ಊರಿಗೆ ಜಾತ್ರೆಗಳಲ್ಲಿ ಅಂಗಡಿಗಳನ್ನ ತೆಗೆದು ವ್ಯಾಪಾರ ಮಾಡುವ ಇವರ ಬದುಕು ನಿಜಕ್ಕೂ ಸಹ ಸಂಕಷ್ಟದಲ್ಲಿರುತ್ತದೆ. ಕೆಲವು ವೇಳೆ ಜಾತ್ರೆಯಲ್ಲಿ ವ್ಯಾಪಾರ ಆದರೂ ಆಗುತ್ತದೆ, ಕೆಲವು ವೇಳೆ ವ್ಯಾಪಾರ ಆಗುವುದಿಲ್ಲ. ಹವಾಮಾನ ಇವರಿಗೆ ಎಲ್ಲ ಕಾಲದಲ್ಲೂ ಪೂರಕವಾಗಿರುವುದಿಲ್ಲ.

ತಮ್ಮ ಕುಟುಂಬದ ಸಮೇತ ಗಂಟು ಕಟ್ಟಿಕೊಂಡು, ಊರಿಂದ ಊರಿಗೆ ತಿರುಗುವ, ಇವರಿಗೆ ಶಾಶ್ವತ ವಾದಂತಹ ನೆಲೆಯೂ ಇರುವುದಿಲ್ಲ. ಇವರ ಜೊತೆಯಲ್ಲಿ ಮಕ್ಕಳನ್ನು ಸಹ ಹೊತ್ತು ತಿರುಗುತ್ತಾರೆ. ಇವರಿಗೆ ಕಾಯಿಲೆ ಬಂದರೆ ಚಿಕಿತ್ಸೆಗಳಿಗೆ ಹಣವನ್ನ ಪಾವತಿಸಲು ಕಷ್ಟವಾಗುತ್ತದೆ. ಜೊತೆಗೆ ಇವರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯುವುದು ದುಸ್ತರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಗದ ಜನರಿಗೆ ಅಸಂಘಟಿತ ಕಾರ್ಮಿಕರು ಎಂದು ಘೋಷಿಸಿದರೆ ಒಂದಷ್ಟು ಸೌಲಭ್ಯಗಳಾದರೂ ದೊರೆಯುತ್ತದೆ. ಇಲ್ಲದಿದ್ದರೆ ಈ ವರ್ಗದ ಜನರನ್ನು ಯಾರು ಕೇಳುವವರು ಇರುವುದಿಲ್ಲ. ಇವರ ಬದುಕು ನಿಜಕ್ಕೂ ಮುಳ್ಳಿನ ಹಾಸಿಗೆ ಆಗಿರುತ್ತದೆ.

ಜಾತ್ರೆಗಳಲ್ಲಿ ಅಂಗಡಿಗಳನ್ನ ತೆರೆದು ಬದುಕನ್ನು ಕಟ್ಟಿಕೊಂಡಿರುವ ಇವರ ಸ್ಥಿತಿಯನ್ನು ನೋಡಿದಾಗ ಎಂತವರಿಗೂ ಅಯ್ಯೋ ಎನಿಸುತ್ತದೆ. ಆದುದರಿಂದ ದಯಮಾಡಿ ಕೇಂದ್ರ ಸರ್ಕಾರ ಇವರಿಗೆ ಯಾವುದಾದರೂ ಒಂದು ಯೋಜನೆಯನ್ನು ರೂಪಿಸಿ ಬದುಕಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಕೋರಿಕೊಳ್ಳುತ್ತೇನೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply