ಹಲವಾರು ದಿನಗಳ ಹಿಂದೆ ಸುಮಾರು 70 ವರ್ಷ ದಾಟಿರುವ ವ್ಯಕ್ತಿ ಒಬ್ಬರು ಸಹಾಯವನ್ನು ಕೇಳಿಕೊಂಡು ಬಂದರು. ಅವರಿಗೆ ನೆನಪಿನ ಶಕ್ತಿ ದಿನೇ ದಿನೇ ಕಡಿಮೆಯಾಗಿ ಹೇಳಬೇಕಾದ ವಿವರಗಳನ್ನು ಮರೆತು ಮರೆತು ಹೋಗುತ್ತಾರೆ. ಎಷ್ಟೋ ಪ್ರಯತ್ನವನ್ನು ಪಟ್ಟು ನೆನಪು ಮಾಡಿಕೊಂಡು ಒಂದಷ್ಟು ವಿವರವನ್ನು ಹೇಳಿದರು .ಅವರ ಎಲ್ಲ ವಿವರಗಳನ್ನು ಕೇಳಿದ ನಂತರ ನಿಮ್ಮ ಮನೆಯವರು ಮಕ್ಕಳು ಇದ್ದರೆ ಕರೆದುಕೊಂಡು ಬನ್ನಿ ಕಚೇರಿಗಳಲ್ಲಿ ನಿಮ್ಮ ಪರವಾಗಿ ಅವರು ಮಾತನಾಡಲು ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದಂತೆ ,ಅವರ ಕಣ್ಣಿನಲ್ಲಿ ನೀರು ಬಂದಿತು ,ಮುಖದ ಭಾವನೆ ಬದಲಾಗಿ ದುಃಖ ಉಮ್ಮಲಿಸಿ ಬಂದಿತು, ಒಂದೆರಡು ನಿಮಿಷದ ನಂತರ ಹೆಂಡತಿ ಇದ್ದಾಳೆ, ಮಗನು ಇದ್ದಾನೆ ,ಆದರೆ ಅವರು ನನ್ನೊಂದಿಗೆ ಇಲ್ಲ ಎಂದು ಬೇಸರದಿಂದ ಹೇಳಿದರು .
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ದೂರದ ಊರಿನಲ್ಲಿ ಇದ್ದಾರೆ, ಅವರೇೇಕೆ ನಿಮ್ಮ ಜೊತೆಯಲ್ಲಿ ಇಲ್ಲ ಎಂಬ ಮುಂದುವರೆದ ಪ್ರಶ್ನೆಗಳಿಗೆ ಅವರು ಸುದೀರ್ಘವಾದ ಉತ್ತರವನ್ನೇ ಕೊಟ್ಟರು. ಈ ಉತ್ತರವನ್ನು ಕೊಡುವ ಮಧ್ಯದಲ್ಲಿ ಮತ್ತೆ ಮತ್ತೆ ಅವರ ನೆನಪಿನ ಶಕ್ತಿ ಕಾಡುತ್ತಿತ್ತು, ಹೆಸರುಗಳನ್ನ ,ಸಂದರ್ಭಗಳನ್ನ, ನೆನಪು ಮಾಡಿಕೊಳ್ಳಲು ಪದೇ ಪದೇ ತಮ್ಮ ತಲೆಯನ್ನು ಕರೆದುಕೊಳ್ಳುತ್ತಿದ್ದರು, ತಳವರಿಸುತ್ತಿದ್ದರು
ಮೃತ್ಯುಂಜಯಪ್ಪ ಫ್ಯಾಕ್ಟರಿಯೊಂದರಲ್ಲಿ ನೌಕರಿಯಲ್ಲಿದ್ದರು, ನಿವೃತ್ತಿಯ ನಂತರ ಇವರಿಗೆ ಬಂದ ಹಣದಲ್ಲಿ ಖಾಸಗಿ ಬಡಾವಣೆಯವರು ನಿರ್ಮಾಣ ಮಾಡುವ ನಿವೇಶನವೊಂದಕ್ಕೆ ಹಣವನ್ನ ಕೊಟ್ಟು ಅದರ ರಸೀದಿಯನ್ನು ಮನೆಯಲ್ಲಿ ಹೆಂಡತಿ ಕೈಗೆ ಕೊಟ್ಟಿದ್ದರು .ಈ ನಡುವೆ ಇವರು ಸಮಯ ಕಳೆಯಲು ಯಾವುದೋ ಒಂದು ಸಣ್ಣ ವ್ಯಾಪಾರಕ್ಕೆ ಕೈ ಹಾಕಿದರು ಈ ಸಂದರ್ಭದಲ್ಲಿ ನಿವೇಶನಕ್ಕೆ ಕಟ್ಟಿದ ಮೊತ್ತವನ್ನ ಇವರು ಸೊಸೈಟಿ ಅವರಿಂದ ವಾಪಸ್ಸು ತೆಗೆದುಕೊಂಡಿದ್ದರು, ಮನೆಯವರಿಗೆ ಹೇಳಿರಲಿಲ್ಲ ಕಾರಣ ಮತ್ತೆ ಇವರಿಗೆ ಮರೆವಿನ ರೋಗ .
ಒಂದಷ್ಟು ವರ್ಷಗಳ ನಂತರ ಇವರ ಮನೆಯಲ್ಲಿ ಹೆಂಡತಿ ಮತ್ತು ಮಗ ನಿವೇಶನದ ಹಣ ಪಾವತಿಸಿದ ರಸೀದಿಯನ್ನು ತೋರಿಸುತ್ತಾ ಸೈಟಿನ ವಿಚಾರದಲ್ಲಿ ಸೊಸೈಟಿಯಲ್ಲಿ ಹೋಗಿ ಕೇಳೋಣ ಎಂದು ಹೇಳಿದರು ಇವರು ಹೆಂಡತಿ ಮಗನೊಂದಿಗೆ ಸೊಸೈಟಿಗೆ ಹೋದರು .
ಸೊಸೈಟಿಯಲ್ಲಿ ಇವರು ತಮ್ಮಲ್ಲಿರುವ ಹಣ ಪಾವತಿಸಿರುವ ರಸೀದಿಯನ್ನು ತೋರಿಸಿ ನಮಗೆ ನಿವೇಶನವನ್ನು ಕೊಟ್ಟಿಲ್ಲ ನಾವು ಹಣ ಕೊಟ್ಟು ಎಷ್ಟೋ ವರ್ಷವಾಯಿತು ಎಂದು ಸ್ವಲ್ಪ ಜೋರು ಧ್ವನಿಯಲ್ಲಿಯೇ ಮಾತನಾಡಿದರು .ಅಷ್ಟರಲ್ಲಿ ಅಲ್ಲಿದ್ದ ಸಿಬ್ಬಂದಿ ಲೆಡ್ಜರ್ ಬುಕ್ಕನ್ನು ತಂದು ಮೃತ್ಯುಂಜಯಪ್ಪ ನಿವೇಶನಕ್ಕೆ ಕೊಟ್ಟಿದ್ದ ಹಣವನ್ನು ವಾಪಸ್ಸು ಪಡೆದಿರುವ ವಿಚಾರವನ್ನು ಹೇಳಿದರು. ಆಗ ಇವನ ಹೆಂಡತಿ ಮತ್ತು ಮಗ ಇಲ್ಲ ನೀವು ಹೇಳುತ್ತಿರುವುದು ಸುಳ್ಳು ಎಂದು ವಾದವನ್ನು ಮಾಡಿದರು. ಮೃತ್ಯುಂಜಯಪ್ಪನಿಗೆ ಈ ಸಂದರ್ಭದಲ್ಲಿ ತಾನು ಹಣ ವಾಪಸ್ಸು ತೆಗೆದುಕೊಂಡಿರುವುದು ನೆನಪಿಗೆ ಬಂದು ಹೌದು ,ನಾನು ಹಣ ವಾಪಸ್ಸು ಪಡೆದುಕೊಂಡಿದ್ದೇನೆ ನನಗೆ ಮರೆತು ಹೋಗಿತ್ತು ಎಂದು ಪಶ್ಚಾತ್ತಾಪದ ಧ್ವನಿಯಲ್ಲಿ ಹೇಳಿದ ಅದಕ್ಕೆ ಮಗ ಮತ್ತು ಹೆಂಡತಿ ತುಂಬಾ ಕೋಪಗೊಂಡು ಅಲ್ಲಿಂದ ಮನೆಗೆ ಬಂದರು .
ಮನೆಗೆ ಬಂದವರೇ ಮೃತ್ಯುಂಜಯಪ್ಪನಿಗೆ ಸಾಕಷ್ಟು ರೀತಿಯಲ್ಲಿ ನೋವಾಗುವ ಮಾತುಗಳನ್ನಾಡಿದರು ,ನೀನೊಬ್ಬ ಮೋಸಗಾರ ,ಎಂದರು ನೆನಪಿನ ಶಕ್ತಿ ಇಲ್ಲ ಎನ್ನುವುದು ನಾಟಕ ಎಂದು ಹೀಯಾಳಿಸಿದರು ,ನೀನು ಇಷ್ಟೊಂದು ಸುಳ್ಳು ಹೇಳುವ ಮನುಷ್ಯ ನಿನ್ನ ಜೊತೆಯಲ್ಲಿ ನಾವು ಇರುವುದಿಲ್ಲ ಎಂದು ಇವನನ್ನ ಬಿಟ್ಟು ಹೊರಟೆವಿಟ್ಟರು
ಹತ್ತಾರು ವರ್ಷಗಳಾಗಿದೆ ಇವನ ದೂರವಾಣಿಯ ಸಂಖ್ಯೆ ಅವರಿಗೆ ತಿಳಿದಿಲ್ಲ ,ಅವರಿಗೆ ಇವನನ್ನು ಹುಡುಕುವ ಮನಸ್ಸು ಇಲ್ಲ, ಇವನಿಗೆ ಮನಸ್ಸಿನ ಮೂಲೆಯಲ್ಲಿ ಆಸೆಯೊಂದು ಇದ್ದೇ ಇದೆ ,ಇಂದಲ್ಲ ನಾಳೆ ಹೆಂಡತಿ ಮಗ ನನ್ನನ್ನು ಹುಡುಕಿಕೊಂಡು ಬಂದು ಮನೆಗೆ ಕರೆದುಕೊಂಡು ಹೋಗಬಹುದೆಂದು.
ಈ ನಿರೀಕ್ಷೆಯಲ್ಲಿಯೇ ಮತ್ತಷ್ಟು ವರ್ಷಗಳನ್ನ ಕಳೆಯುತ್ತಿದ್ದಾನೆ.
– ಕೆ ಎಸ್ ನಾಗರಾಜ್, ಬೆಂಗಳೂರು




