ರಜಾ ದಿನಗಳಲ್ಲಿ ಮತ್ತು ಭಾನುವಾರದಂದು ಸಾರ್ವಜನಿಕರಿಗೆ ವಿಧಾನಸೌಧವನ್ನು ವೀಕ್ಷಿಸಲು ಅವಕಾಶ ಕಲ್ಪಿಸಿ ಕೊಟ್ಟಿರುವುದು ಉತ್ತಮವಾದ ನಿರ್ಧಾರವಾಗಿದೆ.
ಹಲವಾರು ದಶಕಗಳ ಹಿಂದೆ ಸಾರ್ವಜನಿಕರು ವಿಧಾನಸೌಧದಲ್ಲಿ ಯಾವುದೇ ರೀತಿಯ ಅಡೆ-ತಡೆಗಳಿಲ್ಲದೆ ಮುಕ್ತವಾಗಿ ಪ್ರವೇಶವನ್ನು ಪಡೆದು ವಿಧಾನಸೌಧವನ್ನು ವೀಕ್ಷಿಸಬಹುದಾಗಿತ್ತು.
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
- ರೌಡಿಗಳ ಜೊತೆ ಸೆಲ್ಫಿ, ಡ್ರಗ್ಸ್ ದಂಧೆಗೆ ಬ್ರೇಕ್
- ಅಥಣಿಯಲ್ಲಿ ಭೀಕರ ಅಪಘಾತ: ಟಿಪ್ಪರ್ ಹರಿದು ವೃದ್ಧ ಸ್ಥಳದಲ್ಲೇ ಸಾವು
ಇತ್ತೀಚಿನ ದಶಕಗಳಲ್ಲಿ ಭದ್ರತಾ ವಿಚಾರಗಳ ಹಿನ್ನೆಲೆಯಲ್ಲಿ ವಿಧಾನಸೌಧದ ಪ್ರವೇಶ ಸಾರ್ವಜನಿಕರಿಗೆ ಇರಲಿ, ಸಾಮಾಜಿಕ ಕಾರ್ಯಕರ್ತರಿಗೂ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೂ ಪ್ರವೇಶ ಕಷ್ಟವಾಗಿದೆ.
ಈಗ ವಿಧಾನಸಭೆಯ ಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಸಭಾಪತಿಗಳು ಸೇರಿ ರಜಾ ದಿನದಲ್ಲಿ ಮತ್ತು ಭಾನುವಾರದಂದು ಸಾರ್ವಜನಿಕರು ವಿಧಾನಸೌಧಕ್ಕೆ ಪ್ರವೇಶವನ್ನು ಪಡೆದು ಅಲ್ಲಿನ ಅಂದವನ್ನು ಸವಿಯಲು ಅವಕಾಶವನ್ನ ಕಲ್ಪಿಸಿ ಕೊಡುವಂತಹ ನಿರ್ಧಾರವನ್ನು ಕೈಗೊಂಡಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮವಾದಂತಹ ನಿರ್ಣಯವಾಗಿರುತ್ತದೆ.
ಆದರೆ ಇದೇ ಸಮಯದಲ್ಲಿ ಇದಕ್ಕೆ ಶುಲ್ಕವನ್ನು ವಿಧಿಸುವಂತಹ ಮಾತುಗಳು ಕೇಳಿ ಬರುತ್ತಿರುವುದು ಸರಿಯಲ್ಲ. ದೂರದ ಪ್ರದೇಶಗಳಿಂದ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಿಂದ ಬರುವಂತಹ ನಾಗರಿಕರು ಮತ್ತು ಮಕ್ಕಳುಗಳು ವಿಧಾನಸೌಧ ವೀಕ್ಷಿಸಲು ಶುಲ್ಕ ಪಾವತಿಸಬೇಕು ಎಂದರೆ ಅವರಿಗೆ ಹೊರೆಯಾಗುತ್ತದೆ. ಮೊದಲೇ ದೂರದ ಪ್ರದೇಶಗಳಿಂದ ಪ್ರವಾಸಕ್ಕಾಗಿ ಹಣವನ್ನ ಖರ್ಚು ಮಾಡಿಕೊಂಡು ಬಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ವಿಧಾನಸೌಧದ ಪ್ರವೇಶಕ್ಕೆ ಶುಲ್ಕವನ್ನು ನಿಗದಿಪಡಿಸಿದರೆ ಬಹಳಷ್ಟು ಜನ ಇದರ ವೀಕ್ಷಣೆಯಿಂದ ದೂರ ಉಳಿಯುತ್ತಾರೆ.
ರಾಜ್ಯ ಸರ್ಕಾರಕ್ಕೆ ವಿಧಾನಸೌಧದ ನಿರ್ವಹಣೆಗೆ ಬರುವ ಪ್ರವಾಸಿಗರ ಶುಲ್ಕದ ಹಣದಿಂದ ನಿರ್ವಹಣೆ ಮಾಡಬೇಕಾದಂತಹ ಪರಿಸ್ಥಿತಿ ಇದೆ ಎಂದು ನಾವಾದರೂ ಭಾವಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ದಯಮಾಡಿ ವಿಧಾನಸೌಧದ ಪ್ರವೇಶಕ್ಕೆ ಶುಲ್ಕವನ್ನು ನಿಗದಿಪಡಿಸುವ ವಿಚಾರವನ್ನು ಕೈಬಿಡಿ. ಸಾಧ್ಯವಾದರೆ ಬರುವ ಪ್ರವಾಸಿಗರಿಗೆ ಸಿಹಿತಿಂಡಿಯನ್ನ ಕೊಟ್ಟು ಸಂತೋಷದಿಂದ ನಮ್ಮ ನಾಡಿನ ಶಕ್ತಿ ಕೇಂದ್ರವನ್ನ ಕಣ್ತುಂಬಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಿ. ನಂದಿನಿ ಉತ್ಪನ್ನಗಳು ಭಾರತ ದೇಶದ ಗಮನವನ್ನು ಸೆಳೆದಿವೆ. ಇಂತಹ ಸಂದರ್ಭದಲ್ಲಿ ಇಲ್ಲಿ ಬರುವ ಪ್ರವಾಸಿಗರಿಗೆ ವಿಶೇಷವಾಗಿ ಮಕ್ಕಳಿಗೆ ಸಿಹಿತಿಂಡಿಯನ್ನು ಕೊಡುವಂತಹ ಮನಸ್ಸನ್ನು ನಂದಿನಿ ಅವರೇ ಮಾಡಲಿ.
ಕೆಂಗಲ್ ಹನುಮಂತಯ್ಯನವರು ನಿರ್ಮಿಸಿರುವಂತಹ ವಿಧಾನಸೌಧ ವಿಶ್ವದ ಶ್ರೇಷ್ಠ ವಾಸ್ತುಶಿಲ್ಪ ಕಟ್ಟಡಗಳಲ್ಲಿ ಒಂದಾಗಿದೆ, ಇಂತಹ ಸುಂದರವಾದ ಕಟ್ಟಡವನ್ನು ಭವಿಷ್ಯತ್ತಿನ ನಾಯಕರುಗಳಾಗಬಹುದಾದ ಮಕ್ಕಳು ಇದರ ಸೌಂದರ್ಯವನ್ನು ನೋಡಿ ಆನಂದಿಸಲು ಅವಕಾಶವನ್ನು ಮಾಡಿಕೊಡಿ.
– ಕೆ ಎಸ್ ನಾಗರಾಜ್, ಬೆಂಗಳೂರು


