ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯನ್ನು ವಿಶ್ವದ ಮುಂದೆ ಸಾಕ್ಷೀಗಳ ಸಮೇತ ಬಯಲು ಮಾಡಲು ಕೇಂದ್ರ ಸರ್ಕಾರ ರಚಿಸಿರುವ ಸರ್ವಪಕ್ಷಗಳ ಸಂಸದರ ನಿಯೋಗದಲ್ಲೂ @INCIndia ಕ್ಷುಲ್ಲಕ ರಾಜಕೀಯ ಮಾಡಲು ಹೊರಟಿರುವುದು ಶತಮಾನದ ಇತಿಹಾಸವುಳ್ಳ ಆ ಪಕ್ಷದ ಭೌತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಕಾಂಗ್ರೆಸ್ ಶಿಫಾರಸು ಮಾಡಿರುವ ಹೆಸರುಗಳನ್ನು ನೋಡಿ, ನಮಗೆ ಆಶ್ಚರ್ಯವಾಗುತ್ತಿದೆ. ಜೊತೆಗೆ ಹಲವು ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿದೆ. ರಾಜ್ಯಸಭಾ ಸದಸ್ಯರಾದ @NasirHussainINC ಅವರನ್ನು ಶಿಫಾರಸು ಮಾಡಿರುವುದು ನಿಜಕ್ಕೂ ಆಶ್ಚರ್ಯ.
ಕರ್ನಾಟಕದ ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆಗೆ ಆಯ್ಕೆಯಾದಾದ ಪಾಕಿಸ್ತಾನ ಜಿಂದಾಬಾದ್ ಎಂದು ಇವರ ಬೆಂಬಲಿಗರು ಕೂಗಿದ್ದರು. ಇಂತವರನ್ನು ಕಾಂಗ್ರೆಸ್ ಶಿಫಾರಸು ಮಾಡಿದ್ದು ನಿಜಕ್ಕೂ ಅಚ್ಚರಿಯಾಗಿದೆ.
ಇದು ದೇಶದ ಆಂತರಿಕ ಭದ್ರತೆಯ ವಿಚಾರ, ಕಾಂಗ್ರೆಸ್ ಅಳೆದು ತೂಗಿ ಹೆಸರನ್ನು ರೆಕಮೆಂಡ್ ಮಾಡಬೇಕಿತ್ತು. ಇನ್ನೋರ್ವರು ಗೌರವ್ ಗೊಗೊಯಿ, ಪಾಕಿಸ್ತಾನದಲ್ಲಿ 15 ದಿನ ಕಳೆದಿದ್ದಾರೆ. ಅಟಾರಿ ಗಡಿಗೆ ಇವರು ಹೋಗಿ ಬಂದಿರುವ ದಾಖಲೆಗಳಿವೆ. ಇವರ ಪತ್ನಿ ಎಲಿಜಬೆತ್, ಪಾಕ್ ಸೇನೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.
ಇಂತಹವರು ನಿಯೋಗದಲ್ಲಿ ಇರಬೇಕೇ ಎಂಬುದನ್ನು ಆ ಪಕ್ಷದ ಮುಖಂಡರು ಅರ್ಥಮಾಡಿಕೊಂಡಿದ್ದರೆ ನೂರಾರು ವರ್ಷಗಳ ಇತಿಹಾಸದ ಕಾಂಗ್ರೆಸ್ ಪಕ್ಷ ಇಂದು ದೇಶದಲ್ಲಿ ಇಂತಹ ದೈನೇಸಿ ಸ್ಥಿತಿಗೆ ಬರುತ್ತಿರಲಲ್ಲವೆನೋ?
ಕಾಂಗ್ರೆಸ್ಸಿನ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೂಟಾಟಿಕೆ ನಾಲ್ಕು ಯುದ್ಧ ವಿಮಾನ ಎಂದು ಮಿಲಿಟರಿ ಕಾರ್ಯಾಚರಣೆಯನ್ನು ಅವಮಾನಿಸಿದ್ದಾರೆ. ಮೊದಲು ಇಂತಹವರನ್ನು ಪಕ್ಷದಿಂದ ಹೊರಹಾಕಿ ನಂತರ ಮಾತನಾಡಿ.
– ಎಂ ಪಿ ರೇಣುಕಾಚಾರ್ಯ, ಮಾಜಿ ಸಚಿವ




